“ಅಮೇರಿಕಾಗೆ ಯಾಕೆ ಬಂದಿದ್ದೀರಿ? ಭಾರತಕ್ಕೆ ಮರಳಿ”-ವಿದೇಶಿಗನಿಂದ ಭಾರತೀಯನಿಗೆ ನಿಂದನೆ

ನವದೆಹಲಿ:ಜಗತ್ತಿನಾದ್ಯಂತ ಜನರ ನಡುವೆ ತಾರತಮ್ಯ ಅಸ್ತಿತ್ವದಲ್ಲಿದೆ. ಅದರಲ್ಲಿ ಒಂದು ವರ್ಣಭೇದ ನೀತಿ. 5ಜಿ ತಂತ್ರಜ್ಞಾನ ಬಳಸುತ್ತಿರುವ ಈ ಸಮಯದಲ್ಲಿಯೂ ವರ್ಣಭೇದ ನೀತಿ ಇನ್ನು ಜೀವಂತವಾಗಿದೆ ಅಂದ್ರೆ ನೀವು ನಂಬಲೇಬೇಕು. ವಿದೇಶದಲ್ಲಿ ನೆಲೆಯೂರಿರುವ ಭಾರತೀಯರನ್ನು ಅಲ್ಲಿಯ ಸ್ಥಳೀಯ ಕೆಲ ಜನರು ಅವಮಾನಗೊಳಿಸುತ್ತಾರೆ.

ಇದೀಗ ಇಂತಹುವುದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿದೇಶಿ ವ್ಯಕ್ತಿಯೊಬ್ಬ, ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ? ನಿಮ್ಮ ದೇಶ ಭಾರತಕ್ಕೆ ಹಿಂದಿರುಗಿ ಹೋಗಿ ಎಂದು ಹೇಳಿ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದಾನೆ. ಈ ವಿದೇಶಿ ಪ್ರಜೆಯ ಹೇಳಿಕೆಗೆ ಭಾರತ ಮೂಲದ ವ್ಯಕ್ತಿ, ಓಕೆ ಎಂದು ಮುಗಳ್ನಕ್ಕು ಹೋಗಿದ್ದಾರೆ
ವಿದೇಶಗಳಲ್ಲಿ ಕೆಲವರು ಇಂತಹ ಅವಮಾನವಾದ್ರೆ ಅದನ್ನು ಮಾನವ ಹಕ್ಕುಗಳ ಉಲ್ಲಂಘನೆಗೆ ಒಳಗಾಗುತ್ತಾರೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.ಅಮೆರಿಕದಲ್ಲಿ ಭಾರತೀಯ ಯುವಕನಿಗೆ ವರ್ಣಭೇದದ ದೌರ್ಜನ್ಯ ಎಸಗಲಾಗಿದೆ. ಪಾರ್ಕಿಂಗ್ ಪ್ರದೇಶದಂತಹ ಸ್ಥಳದಲ್ಲಿ ಅಮೆರಿಕದ ಯುವಕ ವೀಡಿಯೊವನ್ನು ಚಿತ್ರೀಕರಿಸಿದ್ದಾನೆ. Abrahamic Lincoln ಎಂಬ ಎಕ್ಸ್ ಖಾತೆಯಲ್ಲಿ ಮೊದಲು ವೀಡಿಯೊ ಪೋಸ್ಟ್ ಮಾಡಲಾಗಿದೆ. ವೀಡಿಯೊದಲ್ಲಿ, ಪಾರ್ಕಿಂಗ್ ಪ್ರದೇಶದಂತಹ ಸ್ಥಳದಲ್ಲಿ ಭಾರತೀಯನನ್ನು ಅವಮಾನಿಸುವುದನ್ನು ಕಾಣಬಹುದು. ಯಾವುದೇ ಪ್ರಚೋದನೆಯಿಲ್ಲದೆ ಆತ ಹೀಗೆ ಮಾಡುತ್ತಾನೆ.

‘ನೀವು ಯಾಕೆ ನನ್ನ ದೇಶಕ್ಕೆ ಬಂದಿದ್ದೀರಿ? ಯಾಕೆ ಇಲ್ಲಿಗೆ ಬಂದಿದ್ದೀರಿ? ಯಾಕೆ ಅಮೆರಿಕಕ್ಕೆ ಬಂದಿದ್ದೀರಿ? ನೀವು ಇಲ್ಲಿಗೆ ಬರುವುದು ನನಗೆ ಇಷ್ಟವಿಲ್ಲ. ನೀವು ತುಂಬಾ ಜನ ಇಲ್ಲಿದ್ದೀರಿ’ ಎಂದು ಆ ವ್ಯಕ್ತಿ ಕೋಪದಿಂದ ಹೇಳುತ್ತಾನೆ. ‘ಭಾರತೀಯರೇ, ನೀವು ಎಲ್ಲಾ ಬಿಳಿಯರ ದೇಶಗಳಿಗೂ ಹೋಗುತ್ತಿದ್ದೀರಿ, ನಮಗೆ ಬೇಸರವಾಗಿದೆ. ನೀವು ಭಾರತಕ್ಕೆ ಹಿಂತಿರುಗಬೇಕೆಂದು ನಾನು ಬಯಸುತ್ತೇನೆ’ ಎಂದು ಅಮೆರಿಕ ಪ್ರಜೆ ಹೇಳುತ್ತಾನೆ.
ಆದರೆ ಈ ಸಮಯದಲ್ಲಿ ಭಾರತೀಯ ಯುವಕ ಶಾಂತವಾಗಿದ್ದಾನೆ. ಆತ ತಾಳ್ಮೆಯಿಂದ ಎಲ್ಲವನ್ನೂ ಎದುರಿಸುತ್ತಾನೆ. ಆತ ನಗುತ್ತಿರುವುದನ್ನೂ ವೀಡಿಯೊದಲ್ಲಿ ಕಾಣಬಹುದು. ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಟೀಕೆ ವ್ಯಕ್ತವಾಗಿದೆ. ವರ್ಣಭೇದ ನೀತಿ ಮತ್ತು ತಾರತಮ್ಯದ ವಿರುದ್ಧ ಚರ್ಚೆಗಳು ನಡೆಯಲು ಇದು ಕಾರಣವಾಗಿದೆ. ಅದೇ ಸಮಯದಲ್ಲಿ ಯುವಕ ತಾಳ್ಮೆಯಿಂದ ವರ್ತಿಸಿದ್ದೂ ಚರ್ಚೆಗೆ ಗ್ರಾಸವಾಗಿದೆ ಈ ಹಿಂದೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಬಿಗ್ ಬ್ರದರ್ ಹೆಸರಿನ ರಿಯಾಲಿಟಿ ಶೋಗೆ ತೆರಳಿದ್ದಾಗ ಅಲ್ಲಿಯ ಸಹ ಸ್ಪರ್ಧಿಯಿಂದ ವರ್ಣಭೇದ ತಾರತಮ್ಯವನ್ನು ಎದುರಿಸಿದ್ದರು. ಈ ವಿಶ್ವಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಂತಿಮವಾಗಿ ಶಿಲ್ಪಾ ಶೆಟ್ಟಿಯೇ ಈ ಸ್ಪರ್ಧೆಯಲ್ಲಿ ವಿನ್ನರ್ ಆಗಿದ್ದರು.
ನಿಮ್ಮ ದೇಶದ ಮೇಲೆ ಗೌರವ ಇಲ್ಲವೇ?
ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ Shams Ur Rehman Alavi ಎಂಬಾತ, ಈ ವಿಷಯದಲ್ಲಿ ನೀವು ಅಮೆರಿಕಾದ ಆ ಪ್ರಜೆಯನ್ನು ನಿಂದಿಸಬಾರದು. ನೀವು ಭಾರತೀಯರಾಗಿದ್ರೆ ನಿಮ್ಮ ದೇಶದಲ್ಲಿ ಭಾರತದಲ್ಲಿರಿ. ಅಮೆರಿಕಾಗೆ ಹೋಗಿ ನೆಲೆಸಲು ಯಾಕಿಷ್ಟ ಹಂಬಲ? ನಿಮಗೆ ಸ್ವಂತ ತಾಯ್ನಾಡು, ಸ್ವಂತ ದೇಶದ ಮೇಲೆ ಪ್ರೀತಿ ಏಕೆ ಇಲ್ಲ ಎಂದು ಪ್ರಶ್ನೆ ಮಾಡಿದ್ದಾನೆ. ನೀವು ಪಾಶ್ಚತ್ಯಾ ರಾಷ್ಟ್ರಗಳಿಗೆ ವಲಸೆ ಬರೋದ್ಯಾಕೆ? ನಿಮ್ಮ ಸ್ವಂತ ದೇಶದಲ್ಲಿದ್ದು, ತಾಯ್ನಾಡನ್ನು ಗೌರವಿಸಿ ತಲೆ ಎತ್ತಿ ಬದುಕಿ. ವ್ಯವಹಾರಕ್ಕೆ ಬಂದ್ರೆ ಮತ್ತೆ ನಿಮ್ಮ ದೇಶಕ್ಕೆ ಹಿಂದಿರುಗಿ. ಯುರೋಪ್ ಮತ್ತು ಅಮೆರಿಕ, ಮಧ್ಯಪ್ರಾಚ್ಯ ಮತ್ತು ಪ್ರಪಂಚದ ಉಳಿದ ಭಾಗಗಳಿಗೆ ಏಕೆ ಬರಬೇಕು ಎಂದು ಪ್ರಶ್ನಿಸಿದ್ದಾನೆ.
