ಗೋ ಮಾಂಸ ತಿನ್ನುವ ರಣಬೀರ್ ಕಪೂರ್ ರಾಮಾಯಣದಲ್ಲಿ ರಾಮನ ಪಾತ್ರ ವಿವಾದ

ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಮೊದಲಾದವರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2026ರ ದೀಪಾವಳಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಯಶ್ಅವರು ರಾವಣನ ಪಾತ್ರಕ್ಕೆ ಹೆಚ್ಚು ಸೂಕ್ತ ಎಂದು ಅನೇಕರು ಹೇಳಿದ್ದಾರೆ. ಆದರೆ, ರಾಮನ ಪಾತ್ರಕ್ಕೆ ರಣಬೀರ್ ಸೂಕ್ತ ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈಗ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.
ರಣಬೀರ್ ಕಪೂರ್ ಅವರು ಸದಾ ವಿವಾದಿಂದ ದೂರ ಇರಲು ಪ್ರಯತ್ನಿಸುತ್ತಾರೆ. ಆದಾಗ್ಯೂ ಕೆಲವೊಮ್ಮೆ ವಿವಾದಗಳು ಅವರನ್ನು ಹುಡುಕಿ ಬರುತ್ತವೆ. ಈಗ ‘ರಾಮಾಯಣ’ ಸಿನಿಮಾ ಸಂದರ್ಭದಲ್ಲಿ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ರಣಬೀರ್ ಅವರು ತಮ್ಮ ಆಹಾರದ ಬಗ್ಗೆ, ತಮ್ಮಿಷ್ಟದ ಫುಡ್ ಬಗ್ಗೆ ವಿವರಣೆ ನೀಡಿದ್ದರು.
‘ನಾನು ಬೀಪ್ನ ದೊಡ್ಡ ಅಭಿಮಾನಿ’ ಎಂದು ರಣಬೀರ್ ಕಪೂರ್ ಅವರು ಹೇಳಿಕೊಂಡಿದ್ದರು. ಇದಕ್ಕೆ ಕೆಲವರ ಅಪಸ್ವರ ತೆಗೆದಿದ್ದಾರೆ. ಈ ಮೊದಲು ಕಂಗನಾ ರಣಾವತ್ ಕೂಡ ಈ ವಿಚಾರವನ್ನು ವಿರೋಧಿಸಿದ್ದರು. ಆದರೆ, ರಣಬೀರ್ ಅಭಿಮಾನಿಗಳು ನೆಚ್ಚಿನ ನಟನ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ.

ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾ ಶೂಟ್ಗಾಗಿ ನಾನ್ ವೆಜ್ ಸೇವನೆ ತ್ಯಜಿಸಿದ್ದಾರೆ ಎಂಬ ವರದಿ ಕೂಡ ಇದೆ. ಅಲ್ಲದೆ, ಮದ್ಯ ಸೇವನೆ ಕೂಡ ಅವರು ಸಂಪೂರ್ಣವಾಗಿ ತ್ಯಜಿಸಿದ್ದಾರಂತೆ. ದೊಡ್ಡ ಬಜೆಟ್ನಲ್ಲಿ ‘ರಾಮಾಯಣ’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಬಜೆಟ್ ಸಾವಿರ ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಎರಡೂ ಪಾರ್ಟ್ನ ಶೂಟ್ ಒಟ್ಟಿಗೆ ನಡೆಯುತ್ತಿದೆ. 2026ರಲ್ಲಿ ಸಿನಿಮಾದ ಮೊದಲ ಭಾಗವು ರಿಲೀಸ್ ಆದರೆ, ಎರಡನೇ ಭಾಗವು 2027ರಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಇದಲ್ಲದೆ, ರಣಬೀರ್ ಕಪೂರ್ ಅವರು ‘ಲವ್ ಆಯಂಡ್ ವಾರ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಆಲಿಯಾ ಭಟ್ ನಾಯಕಿ. ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
