ಗಂಡನನ್ನು ಬಿಟ್ಟು ಬಂದ ಮಹಿಳೆಯನ್ನು ಗರ್ಭಿಣಿ ಮಾಡಿ ಪ್ರಿಯಕರ ಪರಾರಿ: ಕೋಲಾರದಲ್ಲಿ ಪ್ರತಿಭಟನೆ!

ಕೋಲಾರ : ಪ್ರಿಯಕರನಿಗಾಗಿ ತನ್ನ ಗಂಡ ಬಿಟ್ಟು ಓಡಿ ಹೋಗಿದ್ದ ಮಹಿಳೆಯೊಬ್ಬಳನ್ನು ಗರ್ಭಿಣಿ ಮಾಡಿ ಪರಾರಿಯಾಗಿರುವ ಘಟನೆ ಕೋಲಾರದ ಶ್ರೀನಿವಾಸಪುರ ನಗರದಲ್ಲಿ ನಡೆದಿದೆ.

ಆರ್ ತಿಮ್ಮಸಂದ್ರ ಗ್ರಾಮದ ಸಂಯುಕ್ತಾ ಎಂಬ ಮಹಿಳೆಯೊಬ್ಬಳು ಮದುವೆಯ ಬಳಿಕ ಬೆಂಗಳೂರಿನಲ್ಲಿ ಪತಿ ಹರೀಶ್ ಜೊತೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು.
ಈ ವೇಳೆ ಸಂಯುಕ್ತಾಗೆ ಪತಿಯ ಸ್ನೇಹಿತ ಅಮರನಾಥ್ ಎಂಬಾತ ಪರಿಚಯವಾಗುತ್ತದೆ.
ಪರಿಚಯ ಬೆಳೆಯುತ್ತಾ ಬೆಳೆಯುತ್ತಾ ಸ್ನೇಹವಾಗಿದ್ದು, ಹಾಗೆಯೇ ಪ್ರೇಮಕ್ಕೆ ಜಾರಿದೆ. ಅಷ್ಟೇ ಅಲ್ಲದೆ, ನೀನು ಅಂದ್ರೆ ನನಗೆ ತುಂಬಾನೇ ಇಷ್ಟ. ನಿನ್ನನ್ನು ಬಿಟ್ಟು ಇರಲು ಆಗುವುದಿಲ್ಲ, ನಾನು ನಿನ್ನನ್ನೇ ಮದುವೆಯಾಗುವುದಾಗಿ ಅಮರನಾಥ್ ಹೇಳಿದ್ದಾನೆ.

ಇತ್ತ ಪ್ರಿಯಕರನ ಮಾತನನ್ನು ಕೇಳಿದ ಸಂಯುಕ್ತಾ ಆತನ ಮಾತಿಗೆ ಮರುಳಾಗಿ ಅಮರನಾಥ್ ಜೊತೆ ಓಡೋಡಿ ಬಂದಿದ್ದಾಳೆ. ವರದಿಯ ಪ್ರಕಾರ, ಇವರಿಬ್ಬರೂ ಕಳೆದ 3 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಷ್ಟೇ ಅಲ್ಲದೆ ಇದೀಗ ಸಂಯುಕ್ತಾ 5 ತಿಂಗಳ ಗರ್ಭಿಣಿಯಾಗಿದ್ದಾಳೆ.
ಈ ವಿಚಾರ ತಿಳಿಯುತ್ತಿದ್ದಂತೆ ನಡವಳಿಕೆ ಬದಲಾಯಿಸಿಕೊಂಡ ಅಮರನಾಥ್ ಮದುವೆಯಾಗಲು ನಿರಾಕರಿಸಿ ಪರಾರಿಯಾಗಿದ್ದಾನೆ. ಇತ್ತ ಪ್ರಿಯಕರನ ಮಾತು ಕೇಳಿ ಕಂಗಾಲಾದ ಸಂಯುಕ್ತಾ ಬೀದಿಪಾಲಾಗಿದ್ದು, ನ್ಯಾಯಕ್ಕಾಗಿ ಅಂಬೇಡ್ಕರ್ ಅವರ ಫೋಟೋ ಹಿಡಿದು ಪ್ರಿಯಕರನ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
