ರೀಲ್ಸ್ ಹುಚ್ಚು: ಮಗಳ ಜೀವಕ್ಕೆ ಅಪಾಯ ತಂದಿಟ್ಟ ತಂದೆ, ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ!

ರಾಜಸ್ಥಾನ್ : ಇತ್ತೀಚೆಗಿನ ದಿನಗಳಲ್ಲಿ ರೀಲ್ಸ್ ಗಾಗಿ ಜನ ಇಂತಹ ಹುಚ್ಚು ಕೆಲಸವನ್ನು ಕೂಡ ಬೇಕಾದರೂ ಮಾಡುತ್ತಾರೆ ಎಂಬುವುದಕ್ಕೆ ಈ ಹಿಂದೆ ಸಾಕಷ್ಟು ನಿರ್ದೇಶನಗಳು ನಮ್ಮ ಕಣ್ಣ ಮುಂದೆಯೇ ಇದೆ. ಆದರೆ ಇದೀಗ ತಂದೆಯೋರ್ವ ರೀಲ್ಸ್ ಹುಚ್ಚಿಗಾಗಿ ಮಗಳನ್ನು ಅಣೆಕಟ್ಟಿನ ಮೇಲಿರುವ ಕಬ್ಬಿಣದ ರಾಡ್ ಮೇಲೆ ನಿಲ್ಲಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಇಷ್ಟು ದಿನ ಮಹಿಳೆಯರು ರೀಲ್ಸ್ ಹುಚ್ಚಿನಲ್ಲಿ ಅಪಾಯವನ್ನೇ ಮೈಮೇಲೆ ಎಳೆದುಕೊಳ್ಳುತ್ತಿದ್ದರು. ಆದರೆ ರಾಜಸ್ಥಾನದ ಭರತ್‌ಪುರ ವ್ಯಕ್ತಿಯೋರ್ವ ಬಂದ್ ಬರೈತಾ ಅಣೆಕಟ್ಟಿನಲ್ಲಿ ವಿದ್ಯುತ್ ಉಪಕರಣದ ಮೇಲೆ ಮಗಳನ್ನು ಕೂರಿಸಿ ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ವರದಿಯ ಪ್ರಕಾರ, ಭರತ್‌ಪುರದ ನಿವಾಸಿ ಉಮಾ ಶಂಕರ್ ಎಂಬಾತ ತನ್ನ ಪತ್ನಿ ಹಾಗೂ ಮಗಳೊಂದಿಗೆ ಬಂದ್ ಬರೈತಾ ಅಣೆಕಟ್ಟಿಗೆ ಹೋಗಿದ್ದ. ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದ ಹಿನ್ನಲೆ ಅಣೆಕಟ್ಟಿನಲ್ಲಿ ನೀರು ತುಂಬಿ ಹರಿಯುತ್ತಿತ್ತು.

ಅಣೆಕಟ್ಟು ನೋಡಲು ಹೋದ ಉಮಾ ಶಂಕರ್ ಸುಮ್ಮನೆ ನೋಡಿ ಬಾರದೆ, ಮಗಳೊಂದಿಗೆ ರೀಲ್ಸ್ ಮಾಡಲು ಮುಂದಾಗಿದ್ದಾನೆ ಅಷ್ಟೇ ಅಲ್ಲದೆ, ಇನ್ನಷ್ಟು ಚಂದ ಬರಬೇಕು ಎಂದು ಹೇಳಿ ಅಣೆಕಟ್ಟಿನ ಅಂಚಿನಲ್ಲಿ ನಿರ್ಮಿಸಲಾಗಿದ್ದ ವಿದ್ಯುತ್ ಉಪಕರಣದ ಮೇಲೆ ಆಕೆಯನ್ನು ಕೂರಿಸಿ ವಿಡಿಯೋ ಮಾಡಿದ್ದಾರೆ.
ಬಾಲಕಿ ಆರಂಭದಲ್ಲಿ ಭಯ ಆಗುತ್ತದೆ ಎಂದು ಹೇಳಿದರೂ ಕೂಡ ಕೇಳದ ಉಮಾ ಶಂಕರ್ ಆತನ ಕೈ ಹಿಡಿದು ಕೂರಿಸಿ ವಿಡಿಯೋಗೆ ಪೋಸ್ ಕೊಡುವಂತೆ ತಿಳಿಸಿದ್ದಾನೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.