ಪತಿಯ ನೈರ್ಮಲ್ಯದ ಕೊರತೆ: ವಿಚ್ಛೇದನಕ್ಕೆ ಅರ್ಜಿ, ವೈರಲ್ ಆಯಿತು ಪತ್ರ!

ನಮ್ಮ ಅಜ್ಜ ಅಜ್ಜಿ ಕಾಲದಲ್ಲಿಯೇ ದಾಂಪತ್ಯ ಜೀವನವೇ (married life) ಚೆನ್ನಾಗಿತ್ತು. ಆ ಕಾಲದಲ್ಲಿ ದಂಪತಿಗಳ ನಡುವೆ ಎಷ್ಟೇ ಮನಸ್ತಾಪಗಳು ಬರಲಿ, ಮಾತುಕತೆಯ ಮೂಲಕ ಇಲ್ಲದಿದ್ದರೆ ಹಿರಿಯರ ಮುಂದೆ ನಿಂತು ಇಂತಹ ಮನಸ್ತಾಪಗಳನ್ನು ಬಗೆಹರಿಸಿ ಮತ್ತೆ ಒಂದಾಗಿಸುವ ಪ್ರಯತ್ನಗಳು ನಡೆಯುತ್ತಿತ್ತು.

ಆದರೆ ಇದೀಗ ಸಣ್ಣ ಪುಟ್ಟ ವಿಷಯಕ್ಕೂ ಡಿವೋರ್ಸ್ (divorce), ಕೋರ್ಟ್ ಮೆಟ್ಟಿಲೇರುವುದು ಕಾಮನ್ ಆಗಿ ಬಿಟ್ಟಿದೆ. ಆದರೆ ಇಲ್ಲೊಬ್ಬಳು ಮಡದಿ ಪತಿಯ ಈ ಕೆಟ್ಟ ಅಭ್ಯಾಸದಿಂದ ಬೇಸೆತ್ತು ಹೋಗಿದ್ದಾಳೆ. ಹೀಗಾಗಿ ಪತಿಯ ಈ ಕೆಟ್ಟ ಅಭ್ಯಾಸದ ಬಗ್ಗೆ ಈ ಪತ್ರದಲ್ಲಿ ಉಲ್ಲೇಖಿಸಿದ್ದು, ನೀನು ಮೂರು ದಿನಗಳ ಕಾಲ ಒಂದೇ ಒಳ ಉಡುಪು ಧರಿಸ್ತೀಯಾ ಎಂದಿದ್ದಾಳೆ. ಈ ಪತ್ರ ವೈರಲ್ ಆಗುತ್ತಿದ್ದು, ಬಳಕೆದಾರರು ಈ ಪತಿಯ ಪರಿಸ್ಥಿತಿಯನ್ನು ನೆನೆದು ಬಿದ್ದು ಬಿದ್ದು ನಕ್ಕಿದ್ದಾರೆ.

ವಿಚ್ಛೇದನ ಪತ್ರದಲ್ಲಿ ಏನಿದೆ?
ಪತಿಗೆ ವಿಚ್ಛೇದನ ಪತ್ರ ಬರೆದಿದ್ದು ಇದರಲ್ಲಿ ಪತ್ನಿಯು ಕೆಲವು ವಿಷಯಗಳನ್ನು ಉಲ್ಲೇಖಿಸಿರುವುದನ್ನು ಕಾಣಬಹುದು. ಈ ಪತ್ರದಲ್ಲಿ “ಪ್ರಿಯ ಅಂಕಿತ್, ನೀನು ಅಯೋಗ್ಯ “ಪ್ರೇಮಿ”. ನನಗೆ ನಿನ್ನಿಂದ ಬೇಸತ್ತಿದ್ದೇನೆ. ನನಗೆ ಇನ್ನು ಮುಂದೆ ಅದನ್ನು ಸಹಿಸಲು ಸಾಧ್ಯವಿಲ್ಲ. ಈ ಮದುವೆಯಲ್ಲಿ ನಾನು ಬದುಕಲು ಸಾಧ್ಯವಿಲ್ಲ. ನೀನು ಸ್ನಾನ ಮಾಡುವುದಿಲ್ಲ, ನೀನು ಮೂರು ದಿನಗಳವರೆಗೆ ಅದೇ ಒಳ ಉಡುಪು ಧರಿಸುತ್ತೀಯ. ನೀನು ತಪ್ಪಾಗಿ ಸ್ನಾನ ಮಾಡಿದ ದಿನ, ನೀನು ಟವೆಲ್ ಮತ್ತು ಹಾಸಿಗೆಯನ್ನು ಎಸೆಯುತ್ತೀಯ, ಹಣಕ್ಕೆ ಯಾವುದೇ ಮೌಲ್ಯವಿಲ್ಲ, ನೀನು 80 ಸಾವಿರ ಮೌಲ್ಯದ ಏನೂ ಇಲ್ಲದ ಫೋನ್ ಖರೀದಿಸಿದೆ. ಅದಕ್ಕೆ ಹೆಸರಿಲ್ಲ, ಅದು ಯಾವುದೇ ವೈಶಿಷ್ಟ್ಯಗಳನ್ನು ನೀಡುವುದಿಲ್ಲ. ನೀನು ಫ್ಲಶ್ ಕೂಡ ಮಾಡುವುದಿಲ್ಲ. ನನ್ನ ವಕೀಲರು ನಿಮಗೆ ವಿಚ್ಛೇದನ ಪತ್ರಗಳನ್ನು ಕಳುಹಿಸುತ್ತಾರೆ. ಶುಭವಾಗಲಿ ಎಂದು ಬರೆದುಕೊಂಡಿರುವುದನ್ನು ಕಾಣಬಹುದು.
ಈ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು ಡಿವೋರ್ಸ್ಗೆ ಓಕೆ ಹೇಳಿ ಬಿಡು, ಇಂತಹ ಹೆಂಡ್ತಿಯನ್ನು ಹೇಗೆ ಸಹಿಸಿಕೊಳ್ತೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಡಿವೋರ್ಸ್ಗೆ ಇದು ಕಾರಣವಾಗುತ್ತಾ, ಗಂಡ್ಮಕ್ಕಳೇ ಹುಷಾರು ಕಣ್ರಪ್ಪ ಎಂದಿದ್ದಾರೆ. ಮತ್ತೊಬ್ಬರು, ಡಿವೋರ್ಸ್ ಅನ್ನೋದು ಮಕ್ಕಳಾಟ ಎನ್ನುವಂತಾಗಿದೆ, ಹೀಗೆ ಆದ್ರೆ ಮದ್ವೆಗೆ ಏನ್ ಅರ್ಥ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
