ಗೋಮಾಂಸ ತಿನ್ನಲು ಹಾಗೂ ಧರ್ಮ ಬದಲಾವಣೆಯ ಹೊಸ ಜಾಲ-ಪತಿಯ ವಿರುದ್ಧ ಆರೋಪ

ಮಧ್ಯಪ್ರದೇಶ: ಮದುವೆಯಾದ ಬಳಿಕ ನನ್ನ ಗಂಡ ಗೋಮಾಂಸ ತಿನ್ನುವಂತೆ ಹಾಗೂ ಧರ್ಮ ಬದಲಾಯಿಸುವಂತೆ ನನ್ನನ್ನು ಒತ್ತಾಯಿಸಿದ್ದಾರೆ ಎಂದು ಮಧ್ಯಪ್ರದೇಶದ ಇಂದೋರ್ ಮೂಲದ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಬಿಹಾರದ ಬೇಗುಸರಾಯ್ ಮೂಲದ ತನ್ನ ಗಂಡನ ವಿರುದ್ಧ ಸಂತ್ರಸ್ತೆ ಆರೋಪಿಸಿದ್ದಾರೆ.
ಈ ಜೋಡಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಐದು ವರ್ಷಗಳ ಹಿಂದೆ ವಿವಾಹವಾದರು. ಸಂತ್ರಸ್ತೆಯನ್ನು ಆರತಿ ಕುಮಾರಿ ಎಂದು ಗುರುತಿಸಲಾಗಿದೆ. ಈಕೆ ಬೇಗುಸರಾಯ್ ಪೊಲೀಸರನ್ನು ಸಂಪರ್ಕಿಸಿ ತನ್ನ ಊರಿಗೆ ಕಳುಹಿಸುವಂತೆ ಕೋರಿದ್ದಾಳೆ.

ಐದು ವರ್ಷಗಳ ಹಿಂದೆ ಆರತಿಗೆ ಫೇಸ್‌ಬುಕ್ ಮೂಲಕ ಮೊಹಮ್ಮದ್ ಶಹಬಾಜ್ ಎಂಬಾತನ ಭೇಟಿಯಾಯಿತು. ವರ್ಷಗಳ ಸ್ನೇಹದ ಬಳಿಕ ಬೇಗುಸರಾಯ್‌ಗೆ ಹೋಗಿ ಶಹಬಾಜ್ನನ್ನು ಆರತಿ ವಿವಾಹವಾದಳು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ನಂತರದ ದಿನಗಳಲ್ಲಿ ಶಹಬಾಜ್ ತನ್ನ ಅಸಲಿ ಮುಖವನ್ನು ತೋರಿದ್ದಾನೆ. ಗೋಮಾಂಸವನ್ನು ತಿಂದು ಧರ್ಮಾಂತರಗೊಳ್ಳುವಂತೆ ಆರತಿಗೆ ಒತ್ತಡ ಹೇರಿದ್ದಾನೆ. ಅಲ್ಲದೆ, ನನ್ನ ಫೋನ್‌ನಿಂದ ಹಿಂದೂ ದೇವರುಗಳ ಫೋಟೋಗಳನ್ನು ಅಳಿಸಿಹಾಕಿದರು ಮತ್ತು ನಾನು ಮತಾಂತರಗೊಳ್ಳಲು ನಿರಾಕರಿಸಿದಾಗ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು ಎಂದು ಆರತಿ ಆರೋಪ ಮಾಡಿದ್ದಾರೆ.
ಆರತಿ ಪ್ರಕಾರ, ಶಹಬಾಜ್ ಫೇಸ್‌ಬುಕ್‌ನಲ್ಲಿ ತನ್ನನ್ನು ತಾನು ಚಿನ್ನ ಮತ್ತು ಬೆಳ್ಳಿ ವ್ಯಾಪಾರಿ ಎಂದು ಪರಿಚಯಿಸಿಕೊಂಡಿದ್ದ. ಆದರೆ ವಾಸ್ತವದಲ್ಲಿ, ಆತ ಅಂಗಡಿಯಲ್ಲಿ ಹೂಮಾಲೆಗಳನ್ನು ತಯಾರಿಸುತ್ತಾನೆ. ದಿನಗಳ ಕಳೆದಂತೆ ಶಹಬಾಜ್ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲು ಪ್ರಾರಂಭಿಸಿದ ಮತ್ತು ಇನ್ನು ಮುಂದೆ ನನ್ನನ್ನು ಆತನ ಜೊತೆಗೆ ಇರಿಸಿಕೊಳ್ಳಲು ಬಯಸುವುದಿಲ್ಲ ಎಂದನು ಎಂದು ಆರತಿ ಹೇಳಿದ್ದಾಳೆ.
ಈ ವಿಚಾರವಾಗಿ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿದ ಆರತಿಯನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಆದಾಗ್ಯೂ, ಆಕೆ ಶಹಬಾಜ್ ವಿರುದ್ಧ ಎಫ್‌ಐಆರ್ ದಾಖಲಿಸಲಿಲ್ಲ. ಬದಲಿಗೆ ತನ್ನ ಇಂದೋರ್‌ಗೆ ಕಳುಹಿಸಿಕೊಡುವಂತೆ ವಿನಂತಿಸಿದರು. ಸದ್ಯ ಪೊಲೀಸರು ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಮದುವೆಯ ನಂತರ ತನ್ನ ಹೆತ್ತವರೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ಆರತಿ ಹೇಳಿದ್ದಾಳೆ. ಅವರು ನನ್ನನ್ನು ಸತ್ತಂತೆ ಪರಿಗಣಿಸುತ್ತಾರೆ. ಆದರೆ, ನನಗೆ ನಮ್ಮ ನಗರಕ್ಕೆ ಮರಳುವ ಆಸೆಯಿದೆ ಎಂದು ಹೇಳಿದ್ದಾರೆ.

ಆರೋಪಗಳಿಗೆ ಪ್ರತಿಕ್ರಿಯಿಸಿರುವ ಶಹಬಾಜ್, ಆರೋಪಗಳನ್ನು ನಿರಾಕರಿಸಿದರು ಮತ್ತು ಆರತಿಗೆ ಈ ಹಿಂದೆ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ ಎಂದು ಹೇಳಿದ್ದಾರೆ. ಆಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ ಮತ್ತು ಇನ್ನು ಮುಂದೆ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ. ಆಕೆ ಇತರ ಪುರುಷರೊಂದಿಗೆ ಸಂಬಂಧ ಹೊಂದಿದ್ದಾಳೆ ಮತ್ತು ಐದು ವರ್ಷಗಳಲ್ಲಿ ಮೂರು ಬಾರಿ ಮನೆಯಿಂದ ಓಡಿಹೋಗಿದ್ದಾಳೆ. ಓದಲು ಬಾರದ ವ್ಯಕ್ತಿಯನ್ನು ನಾನು ಗೋಮಾಂಸ ತಿನ್ನಲು ಅಥವಾ ಕುರಾನ್ ಓದಲು ಏಕೆ ಕೇಳಬೇಕು? ಆರತಿಯಿಂದ ಮುಕ್ತಗೊಳಿಸುವಂತೆ ಜಿಲ್ಲಾಡಳಿತದ ಬಳಿ ಶಹಬಾಜ್ ವಿನಂತಿಸಿದ್ದು, ಆರೋಪಗಳು ಆಧಾರರಹಿತವಾಗಿವೆ ಎಂದು ಕರೆದಿದ್ದಾನೆ.
ಸದರ್ ಡಿಎಸ್ಪಿ ಸುಬೋಧ್ ಕುಮಾರ್ ಮಾತನಾಡಿ, ಆರತಿ ನಮ್ಮನ್ನು ಸಂಪರ್ಕಿಸಿದರು. ಆದರೆ, ಅವರ ಪತಿಯ ವಿರುದ್ಧ ದೂರು ದಾಖಲಿಸಲಿಲ್ಲ. ಅವರು ಮಹಿಳಾ ಪೊಲೀಸ್ ಠಾಣೆಯಲ್ಲಿ ಇಂದೋರ್‌ಗೆ ಕಳುಹಿಸುವಂತೆ ಲಿಖಿತ ವಿನಂತಿಯನ್ನು ಸಲ್ಲಿಸಿದರು. ಆದ್ದರಿಂದ, ಅವರನ್ನು ಮಹಿಳಾ ಆಶ್ರಯಕ್ಕೆ ಕಳುಹಿಸಲಾಗಿದೆ ಮತ್ತು ಅವರನ್ನು ಮನೆಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ದೃಢಪಡಿಸಿದರು.
