ಹಿಂದೂಗಳ ಮತಾಂತರ ಮಾಡಿ 100 ಕೋಟಿ ಪಡೆಯುತ್ತಿದ್ದ ಛಂಗೂರ್ ಬಾಬಾ

ಪಾಕಿಸ್ತಾನ ಸೇರಿದಂತೆ ಅನೇಕ ಮುಸ್ಲಿಂ ದೇಶಗಳಿಗೆ ಕನಿಷ್ಠ 40 ಬಾರಿ ಪ್ರಯಾಣ ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯದಲ್ಲಿ ಮತಾಂತರದ ರೂವಾರಿ ಜಮಾಲುದ್ದೀನ್ ಅಲಿಯಾಸ್ ‘ಛಂಗೂರ್ ಬಾಬಾ’ನನ್ನು ಜುಲೈ 5 ರಂದು ಭಯೋತ್ಪಾದನಾ ನಿಗ್ರಹ ದಳ ಬಲರಾಮಪುರದಿಂದ ಬಂಧಿಸಿದೆ.

ಅವನ ಮೇಲೆ 50 ಸಾವಿರ ರೂಪಾಯಿ ಬಹುಮಾನವಿತ್ತು. ಜಮಾಲುದ್ದೀನ್ ತನ್ನನ್ನು ಹಾಜಿ ಪೀರ್ ಜಮಾಲುದ್ದೀನ್ ಎಂದು ಕರೆದುಕೊಳ್ಳುತ್ತಿದ್ದನು. ಅವನು ಹುಡುಗಿಯರನ್ನು ಆಮಿಷವೊಡ್ಡಿ ಮತಾಂತರಕ್ಕೆ ಒತ್ತಾಯಿಸುತ್ತಿದ್ದ. ವಿಶೇಷವೆಂದರೆ, ಹಿಂದೂ ಹೆಣ್ಣುಮಕ್ಕಳ ಜಾತಿಯ ಪ್ರಕಾರ ಅವರ ದರಗಳನ್ನು ನಿಗದಿಪಡಿಸಲಾಗಿತ್ತು. ಈ ಕೆಲಸ ಮಾಡಲು ಅವನ 40 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ ಒಟ್ಟು 100 ಕೋಟಿ ರೂಪಾಯಿ ನಿಧಿಯಿತ್ತು. ಜಮಾಲುದ್ದೀನ್ ಪಾಕಿಸ್ತಾನ ಸೇರಿದಂತೆ ಅನೇಕ ಮುಸ್ಲಿಂ ದೇಶಗಳಿಗೆ ಕನಿಷ್ಠ 40 ಬಾರಿ ಪ್ರಯಾಣ ಮಾಡಿದ್ದ. ಜಮಾಲುದ್ದೀನ್ ಮತ್ತು ಅವನ ನೀತು ಉರ್ಫ್ ನಸರೀನ ಎಂಬ ಸಹವರ್ತಿ ಇಬ್ಬರನ್ನೂ ಬಂಧಿಸಲಾಗಿದೆ.
ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ), ಹಾಗೂ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಅಮಿತಾಭ ಯಶ್ ಅವರು ಈ ಸಂಪೂರ್ಣ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ಅವರು,

- ಬಲರಾಮಪುರದ ಮಾಧಪುರ ಗ್ರಾಮದಲ್ಲಿ ಪೀರ್ ಸಾಹಬ್, ನಸರೀನ್, ಜಮಾಲುದ್ದೀನ್, ಮೆಹಬೂಬ್ ಇತ್ಯಾದಿ ಹೆಸರುಗಳ ಹಲವು ಶಂಕಿತ ವ್ಯಕ್ತಿಗಳು ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.
- ತನಿಖೆಯಲ್ಲಿ ಒಂದು ವರ್ಷದಲ್ಲಿ ವಿದೇಶಿ ನಿಧಿಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ತಿಳಿದುಬಂದಿದೆ. ಇವುಗಳಲ್ಲಿ ಬಂಗಲೆಗಳು ಮತ್ತು ಐಷಾರಾಮಿ ಕಾರುಗಳಂತಹ ಆಸ್ತಿಗಳು ಸೇರಿವೆ.
- ಛಂಗೂರ್ ಬಾಬಾ ‘ಪೀರ್ ಬಾಬಾ’ ಮತ್ತು ‘ಹಜರತ್ ಬಾಬಾ ಜಮಾಲುದ್ದೀನ್’ ಎಂಬ ಹೆಸರಿನಲ್ಲಿ ತನ್ನ ಜಾಹಿರಾತು ಮಾಡಿಕೊಳ್ಳುತ್ತಿದ್ದ. ಅವನು ‘ಶಿಜರ್-ಎ-ತಯ್ಯಬಾ’ ಎಂಬ ಪುಸ್ತಕವನ್ನೂ ಪ್ರಕಟಿಸಿದ್ದನು. ಇದನ್ನು ಬಳಸಿಕೊಂಡು ಹಿಂದೂಗಳ ಬ್ರೈನ್‌ವಾಷ್ ಮಾಡುತ್ತಿದ್ದ.
- ಈ ಪ್ರಕರಣವು ಅಂತರರಾಷ್ಟ್ರೀಯ ಸಂಚಿನ ಭಾಗವಾಗಿದೆ ಎಂಬ ಆತಂಕ ವ್ಯಕ್ತಪಡಿಸಲಾಗಿದೆ. ಈ ಜಾಲವು ಅಂತರರಾಷ್ಟ್ರೀಯ ಕಟ್ಟರವಾದಿ ಸಂಘಟನೆಗಳಿಗೆ ಸಂಪರ್ಕ ಹೊಂದಿರಬಹುದು ಎಂದು ಶಂಕಿಸಲಾಗಿದೆ. ಆದ್ದರಿಂದ ಭಯೋತ್ಪಾದನಾ ನಿಗ್ರಹ ದಳವು ಜಾರಿ ನಿರ್ದೇಶನಾಲಯ, ಗುಪ್ತಚರ ಇಲಾಖೆ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬಹುದು.
ಛಂಗೂರ್ ಬಾಬಾ ಪೊಲೀಸರ ಕೈಗೆ ಸಿಕ್ಕಿದ್ದು ಹೇಗೆ?
ಲಕ್ಷ್ಮಣಪುರದಲ್ಲಿ ಹಿಂದೂ ಎಂದು ನಟಿಸಿ ಛಂಗೂರ್ ಬಾಬಾ ಓರ್ವ ಹುಡುಗಿಯನ್ನು ತನ್ನ ಜಾಲಕ್ಕೆ ಬೀಳಿಸಿಕೊಂಡಿದ್ದನು. ಛಂಗೂರ್ ಬಾಬಾ ಒಂದು ಸಂಘಟಿತ ಗ್ಯಾಂಗ್ ಅನ್ನು ರಚಿಸಿದ್ದು, ಅವರು ಹಿಂದೂಗಳು ಮತ್ತು ಮುಸ್ಲಿಮೇತರ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿದುಬಂದಿತ್ತು. ಅಂದಿನಿಂದ ಪೊಲೀಸರು ಅವನನ್ನು ಹುಡುಕುತ್ತಿದ್ದರು. ನವೆಂಬರ್ 2024 ರಲ್ಲಿಯೇ ಪೊಲೀಸರು ಛಂಗೂರ್ ಬಾಬಾ, ಹಾಗೂ ಅವನ ಮಗ ಮೆಹಬೂಬ್ ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಏಪ್ರಿಲ್ 8 ರಂದು 2 ಆರೋಪಿಗಳನ್ನು ಬಂಧಿಸಲಾಗಿತ್ತು.
ಹಿಂದೂ ಹೆಣ್ಣುಮಕ್ಕಳಿಗೆ ಈ ರೀತಿ ದರ ನಿಗದಿಪಡಿಸಲಾಗಿತ್ತು!
- ಬ್ರಾಹ್ಮಣ, ಸರದಾರ್ ಅಥವಾ ಕ್ಷತ್ರಿಯ ಹುಡುಗಿ: 15 ರಿಂದ 16 ಲಕ್ಷ ರೂಪಾಯಿ
- ಹಿಂದುಳಿದ ಜಾತಿಯ ಹುಡುಗಿಯರು: 10 ರಿಂದ 12 ಲಕ್ಷ ರೂಪಾಯಿ
- ಇತರ ಜಾತಿಯ ಹುಡುಗಿಯರು: 8 ರಿಂದ 10 ಲಕ್ಷ ರೂಪಾಯಿ
