Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಇನ್ನೊಬ್ಬಳಿಗಾಗಿ ಪತ್ನಿಗೆ ಹಲ್ಲೆ’: ಐಎಸ್‌ಡಿ ಡಿವೈಎಸ್‌ಪಿ ಶಂಕ್ರಪ್ಪ ವಿರುದ್ಧ ಎಫ್‌ಐಆರ್, ಪತ್ನಿಯಿಂದ ಡಿಜಿ-ಐಜಿಪಿಗೆ ದೂರು

Spread the love

ಬೆಂಗಳೂರು: ಬೇರೊಂದು ಹೆಣ್ಣಿಗಾಗಿ ಪತ್ನಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ ಆರೋಪದ ಮೇಲೆ ಐಎಸ್‍ಡಿ ಡಿವೈಎಸ್‍ಪಿ ಮೇಲೆ ಎಫ್‍ಐಆರ್ ದಾಖಲಾಗಿದೆ.

ಡಿವೈಎಸ್‍ಪಿ ಶಂಕ್ರಪ್ಪ ವಿರುದ್ಧ ಅವರ ಪತ್ನಿ ದೂರು ನೀಡಿದ್ದು, ನಗರದ ಈಶಾನ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಕಾಲೇಜ್‍ಗೆ ಹೋಗುತ್ತಿರುವ ಮಗನಿದ್ದು ಅನ್ಯ ಹೆಣ್ಣಿನ ಸಂಪರ್ಕ ಮಾಡಿ ಹಲ್ಲೆ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ.

ವರದಕ್ಷಿಣೆ ಹಣಕ್ಕಾಗಿ ಪೀಡಿಸಿದ್ದಾರೆ. ಅಕ್ರಮವಾಗಿ ಆ ಹೆಣ್ಣಿನ ಜೊತೆ ಮದುವೆಯಾಗಿದ್ದಾರೆ. ನನಗೆ ನ್ಯಾಯ ಕೊಡಿಸಬೇಕೆಂದು ಡಿಜಿ & ಐಜಿಪಿಗೂ ಡಿವೈಎಸ್‍ಪಿ ಪತ್ನಿ ದೂರು ನೀಡಿದ್ದಾರೆ.

ನನ್ನ ಸಂಸಾರ ಹಾಳು ಮಾಡಬೇಡ ಎಂದು ಆ ಮಹಿಳೆಗೆ ಡಿವೈಎಸ್‍ಪಿ ಪತ್ನಿ ಪರಿಪರಿಯಾಗಿ ಕೇಳಿಕೊಂಡ್ರೂ ಜೀವ ಬೆದರಿಕೆ ಹಾಕಿದ್ದಾರಂತೆ. ಸದ್ಯ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಅಧಿಕಾರದ ಪ್ರಭಾವದಿಂದ ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ಡಿವೈಎಸ್‍ಪಿ ಪತ್ನಿ ಆರೋಪಿಸಿದ್ದಾರೆ. 


Spread the love
Share:

administrator

Leave a Reply

Your email address will not be published. Required fields are marked *