Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗಿಡ ನೆಡಲು ಗುಂಡಿ ತೋಡುವ ಸಂಧರ್ಭದಲ್ಲಿ ಪ್ರಾಚೀನ ಖಜಾನೆ ಪತ್ತೆ

Spread the love

ಉತ್ತರಪ್ರದೇಶ:ಬಿಜ್ನೋರ್ ಜಿಲ್ಲೆಯ ನಹ್ತೌರ್ ಬಳಿಯ ಖಂಡಸಾಲ್ ಗ್ರಾಮದಲ್ಲಿ ವನ ಮಹೋತ್ಸವದ ಸಂದರ್ಭದಲ್ಲಿ ಸಸಿಗಳನ್ನು ನೆಡಲು ನೆಲದಲ್ಲಿ ಗುಂಡಿ ತೋಡುತ್ತಿದ್ದಾಗ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ಸಂಜೆ, ಕಾರ್ಮಿಕರು ಗ್ರಾಮದ ಸಮುದಾಯದ ಭೂಮಿಯಲ್ಲಿ ಗುಂಡಿ ತೋಡುತ್ತಿದ್ದಾಗ,

ಅದರಲ್ಲಿ ಲೋಹದಿಂದ ಮಾಡಿದ 40 ನಾಣ್ಯಗಳಿದ್ದವು. ಇವು ಮೊಘಲ್ ಕಾಲದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಷಯ ತಿಳಿದ ಗ್ರಾಮದ ಉಪ-ಸರ್ಪಂಚ್ ಯೋಗೇಶ್ ಕುಮಾರ್ ತಕ್ಷಣ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು. ಗ್ರಾಮಸ್ಥರ ಸಮ್ಮುಖದಲ್ಲಿ, ನಾಣ್ಯಗಳನ್ನು ವಶಪಡಿಸಿಕೊಂಡು ನಹ್ತೌರ್ ಪೊಲೀಸ್ ಠಾಣೆಗೆ ಸುರಕ್ಷಿತವಾಗಿಡಲು ಕರೆದೊಯ್ಯಲಾಯಿತು. ಹೊಳೆಯುವ ನಾಣ್ಯಗಳ ಮೇಲೆ ಉರ್ದು ಅಕ್ಷರಗಳಿರುವುದು ಕಂಡುಬಂದಿದ್ದು, ಅವು ಮೊಘಲ್ ಕಾಲಕ್ಕೆ ಸೇರಿರಬಹುದು ಎಂದು ಆರಂಭದಲ್ಲಿ ನಂಬಲಾಗಿದೆ.

ಈ 40 ನಾಣ್ಯಗಳು ಪತ್ತೆಯಾಗಿದ್ದು ಐತಿಹಾಸಿಕ ಮಹತ್ವದ್ದಾಗಿವೆ. ಈಗಾಗಲೇ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದೇವೆ. ನಾಣ್ಯಗಳ ವಿವರಗಳ ಸಂಪೂರ್ಣ ಪರಿಶೀಲನೆ ನಡೆಸಲಾಗುವುದು ಎಂದು ಧಂಪುರ ಪೊಲೀಸ್ ಠಾಣಾಧಿಕಾರಿ ಅಭಯ್ ಕುಮಾರ್ ಪಾಂಡೆ ಹೇಳಿದರು. ಅದರೆ, ಇದುವರೆಗೆ ನಾಣ್ಯಗಳು ಯಾವ ಲೋಹದಿಂದ ಮಾಡಲ್ಪಟ್ಟಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಪುರಾತತ್ವ ಇಲಾಖೆ ಪರೀಕ್ಷೆಗಳ ನಂತರ ಸ್ಪಷ್ಟತೆ ಬರಲಿದೆ.


Spread the love
Share:

administrator

Leave a Reply

Your email address will not be published. Required fields are marked *