ಅಜ್ಜನ ಪಿಂಚಣಿಯಲ್ಲಿ ಪಡೆದ ಸೈಕಲ್ ನಿಂದ ದುರಂತ ಅಂತ್ಯ ಕಂಡ ಮಕ್ಕಳು

ಹೈದೆರಬಾದ್:ಹೊಸ ಸೈಕಲ್ ಖರೀಸಿದ ಖುಷಿಯಲ್ಲಿ ಅಕ್ಕ-ತಮ್ಮ ರಸ್ತೆಯಲ್ಲಿ ಆಡಲು ಹೋದಾಗ ಸೈಕಲ್ ನಿಯಂತ್ರಣ ತಪ್ಪಿ ಆಕೆ (ಅಕ್ಕ) ನೀರಿನ ಹೊಂಡಕ್ಕೆ ಬಿದ್ದಿದ್ದು, ಅಕ್ಕನನ್ನು ಕಾಪಾಡಲು ಹೋದ ತಮ್ಮ(ಸಹೋದರ) ಕೂಡ ಹೊಂಡದಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ಹೈದರಾಬಾದ್ನ ಬಂಜಾರ ಹಿಲ್ಸ್ ಪ್ರದೇಶದಲ್ಲಿ ಶನಿವಾರ ನಡೆದಿದೆ.

ಇಲ್ಲಿನ ಮಂಡಲ ಕೇಂದ್ರದ ಲಂಕಾ ಸ್ವಾಮಿ ಮತ್ತು ಗೀತಾ ದಂಪತಿಗಳ ಪುತ್ರ ವಿದತ್ (10) ಮತ್ತು ಮಗಳು(11) ಮೃತರು. ಖಾಸಗಿ ಶಾಲೆಯಲ್ಲಿ 5 ಮತ್ತು 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಘಟನೆ ಏನು?
ಅಜ್ಜ ರಾಜೇಶ್ವರ್ ಶುಕ್ರವಾರ ತನ್ನ ಮೊಮ್ಮಗ ಮತ್ತು ಮೊಮ್ಮಗಳಿಗೆ ಹೊಸ ಸೈಕಲ್ಗಳನ್ನು ಖರೀದಿಸಿದರು. ಆ ಸಂತೋಷದಲ್ಲಿ, ಇಬ್ಬರೂ ಮಕ್ಕಳು ಶನಿವಾರ ಶಾಲೆಗೆ ಹೋಗಲಿಲ್ಲ. ಅಂದು ಮನೆಯಲ್ಲಿ ಯಾರು ಇಲ್ಲದಿದ್ದಾಗ ಅಕ್ಕ-ತಮ್ಮ ಇಬ್ಬರು ಹೊಸ ಸೈಕಲ್ಗಳನ್ನು ರಸ್ತೆಯಲ್ಲಿ ಆಡಲು ಹೋಯ್ದಿದ್ದಾರೆ. ರಸ್ತೆಯಲ್ಲಿ ಪೆಡಲ್ ತುಳಿಯುವ ವೇಳೆ ನಿಯಂತ್ರಣ ತಪ್ಪಿ ನೀರಿನ ಹೊಂಡಕ್ಕೆ ಬಿದ್ದಿದ್ದಾಳೆ. ಆ ಪ್ರದೇಶದಲ್ಲಿ ಯಾರು ಇಲ್ಲದ ಕಾರಣ ಅಕ್ಕನನ್ನು ಕಾಪಾಡಲು ಸಹೋದರನೇ ನೀರಿಗೆ ಇಳಿದಿದ್ದಾನೆ. ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.