ಇವಿಎಂ ತಯಾರಿಸಿದ ಸುರತ್ಕಲ್ ಹಿಂದೂ ವಿದ್ಯಾದಾಯಿನೀ ಶಾಲೆಯ ವಿದ್ಯಾರ್ಥಿಗಳು

ಸುರತ್ಕಲ್: ವಿದ್ಯಾದಾಯಿನೀ ಅಂಗ್ಲ ಮಾಧ್ಯಮ ಶಾಲೆ ಸಿಬಿಎಸ್ ಸುರತ್ಕಲ್‌ನ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಭುವನ ಶೆಟ್ಟಿಗಾರ್, ತನ್ಮಯ್ ಸುರೇಶ್, ಎಚ್.ಅನೀಶ್ ರಾವ್, ಆದಿತ್ಯ ಆರ್.ಮೂಲ್ಯ ಹಾಗೂ ಆಯುಷ್ ಸುಧಾಕರ್ ಶಾಲೆಯ ವಿದ್ಯಾರ್ಥಿ ನಾಯಕ ಹಾಗೂ ಉಪನಾಯಕನ ಚುನಾವಣೆಗೆ ಎಲೆಕ್ಟ್ರಾನಿಕ್ಸ್ ಮತ ಯಂತ್ರ (ಇವಿಎಂ) ತಯಾರಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.


ಬ್ಯಾಲೆಟ್ ಪೇಪರ್ ಇಲ್ಲದೆ ಈ ಮತ ಯಂತ್ರದ ಮೂಲಕ ಮಕ್ಕಳಿಂದ ಯಶಸ್ವಿಯಾಗಿ ಮತದಾನ ನಡೆಸಿ ಶಾಲಾ ನಾಯಕ, ಉಪನಾಯಕನ ಆಯ್ಕೆಗೆ ಪಾರದರ್ಶಕ ಮೆರುಗು
ಇವಿಎಂ ತಯಾರಿಸಿದ ವಿದ್ಯಾರ್ಥಿಗಳು.
ನೀಡಿರುವ ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಪೋಷಕರಿಂದ ಶ್ಲಾಘನೆ ವ್ಯಕ್ತವಾಗಿದೆ.