‘ಕನ್ನಡ ತಮಿಳಿನಿಂದ ಹುಟ್ಟಿತ್ತು’ ಹೇಳಿಕೆ ವಿವಾದ: ಕಮಲ್ ಹಾಸನ್ಗೆ ಕೋರ್ಟ್ ನಿಷೇಧಾಜ್ಞೆ

ಬೆಂಗಳೂರು: ನಟ ಕಮಲ್ ಹಾಸನ್ ಅವರು ‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆ ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಈ ವಿವಾದದ ಬಗ್ಗೆ ಕೋರ್ಟ್ನಲ್ಲಿ ಕೇಸ್ಗಳು ನಡೆಯುತ್ತಲೇ ಇವೆ. ಈಗ ಕನ್ನಡದ ಬಗ್ಗೆ ಹೇಳಿಕೆ ನೀಡದಂತೆ ಗೆ ಕೋರ್ಟ್ ನಿರ್ಬಂಧ ಹೇರಿದೆ. ಒಂದೊಮ್ಮೆ ಅವರು ಆದೇಶ ಮೀರಿದರೆ ನ್ಯಾಯಾಂಗ ನಿಂದನೆ ಮಾಡಿದಂತೆ ಆಗುತ್ತದೆ.


ಕಮಲ್ ಹಾಸನ್ ಅವರು ‘ಥಗ್ ಲೈಫ್’ ಸಿನಿಮಾ ಪ್ರಚಾರದ ವೇಳೆ ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂದಿದ್ದರು. ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ಸಿನಿಮಾ ರಿಲೀಸ್ ಆಗಲು ಕರ್ನಾಟಕದಲ್ಲಿ ಅವಕಾಶ ನೀಡಿರಲೇ ಇಲ್ಲ. ಸಿನಿಮಾ ರಿಲೀಸ್ ಕಮಲ್ ಹಾಸನ್ ಗೆ ಕರ್ನಾಟಕದಲ್ಲಿ ಅಸಹಕಾರ ತೋರಿಸಲಾಯಿತು. ಇದನ್ನು ಬ್ಯಾನ್ ಎಂದು ಚಿತ್ರತಂಡದವರು ಕರೆದರು. ಈ ಕಾರಣದಿಂದ ನೇರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು.
ಹಲವು ದಿನಗಳ ಹೋರಾಟಗಳ ಬಳಿಕ ಪ್ರಕರಣ ಕಮಲ್ ಹಾಸನ್ ಪರ ಆಯಿತು. ಆದಾಗ್ಯೂ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಿಯೇ ಇಲ್ಲ. ಈಗ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಕೋರ್ಟ್ ಎದುರು ಕೋರಿತ್ತು.

ಇದಕ್ಕೆ ಕೋರ್ಟ್ ಒಪ್ಪಿ ಕನ್ನಡ ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಹೇಳಿಕೆ ನೀಡದಂತೆ ನಿರ್ಬಂಧ ಹೇರಿ ಬೆಂಗಳೂರಿನ 31ನೇ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.ಕಮಲ್ ಹಾಸನ್ ‘ಥಗ್ ಲೈಫ್’ ಸಿನಿಮಾ ಒಟಿಟಿಗೆ ಬಂದಿದೆ. ಜುಲೈ 2ರಂದು ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ತಮಿಳು, ಕನ್ನಡ, ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಪ್ರಸಾರ ಕಂಡಿದೆ. ಈ ಚಿತ್ರ ಕನ್ನಡ ವರ್ಷನ್ ಸಿದ್ಧವಿದ್ದರೂ ಅದನ್ನು ಈ ಮೊದಲು ರಿಲೀಸ್ ಮಾಡಲು ತಂಡ ಮುಂದೆ ಬಂದಿರಲಿಲ್ಲ. ಈಗ ಒಟಿಟಿಯಲ್ಲಿ ಕನ್ನಡ ವರ್ಷನ್ ರಿಲೀಸ್ ಆಗಿದೆ.