ಟ್ರಂಪ್ ವಿರುದ್ಧ ಹೊಸ ಪಕ್ಷ ಕಟ್ಟಲಿದ್ದಾರಾ ಎಲಾನ್ ಮಸ್ಕ್?

ವಾಷಿಂಗ್ಟನ್:ಡೊನಾಲ್ಡ್ ಟ್ರಂಪ್ – ಎಲಾನ್ ಮಸ್ಕ್, ಡೆಮಾಕ್ರಟಿಕ್ ಪಕ್ಷವನ್ನು ಹೀನಾಯವಾಗಿ ಸೋಲಿಸಿ ಅಮೆರಿಕದಲ್ಲಿ ಧೂಳೆಬ್ಬಿಸಿ ಭರ್ಜರಿಯಾಗಿ ಎಂಟ್ರಿಕೊಟ್ಟಿದ್ದರು. ಟ್ರಂಪ್ ಅಧ್ಯಕ್ಷರಾದರೆ. ಎಲಾನ್ ಮಸ್ಕ್ಗೆ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥರನ್ನಾಗಿ ಮಾಡಿದ್ರು.

ಇಬ್ಬರು ಜಿಗರಿ ದೋಸ್ತ್ನಂತೆ ಇದ್ದವರು ಇದೀಗ ಬದ್ಧವೈರಿಗಳಾಗಿದ್ದಾರೆ.
ಹೊಸ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಮಸ್ಕ್
ಡೊನಾಲ್ಡ್ ಟ್ರಂಪ್ ಅವರ ‘ಬಿಗ್ ಬ್ಯೂಟಿಫುಲ್ ಬಿಲ್’ ಆಪ್ತರಾಗಿದ್ದ ಟ್ರಂಪ್-ಎಲಾನ್ ಮಸ್ಕ್ ನಡುವೆ ತೀವ್ರ ಬಿರುಕು ಮೂಡಿಸಿದೆ. ಮಸೂದೆ ವಿರೋಧಿಸಿದರೆ ಸಬ್ಸಿಡಿ ಕಡಿತಗೊಳಿಸಿ, ದಕ್ಷಿಣ ಆಫ್ರಿಕಾಗೆ ಗಡಿಪಾರು ಮಾಡುವುದಾಗಿ ಟ್ರಂಪ್ ಬೆದರಿಸಿದ್ದಾರೆ.
ಪ್ರತಿಯಾಗಿ ಎಕ್ಸ್ ಖಾತೆ ಮೂಲಕ ಎಲಾಲ್ ಮಸ್ಕ್ ತಿರುಗೇಟು ಕೊಟ್ಟಿದ್ದಾರೆ. ಬಿಗ್ ಬ್ಯೂಟಿಫುಲ್ ಬಿಲ್ ಮಸೂದೆ ಅಂಗೀಕಾರಗೊಂಡಿರೋದ್ರಿಂದ ‘ಅಮೆರಿಕನ್ ಪಾರ್ಟಿ’ ಹೆಸರಿನ ಹೊಸ ರಾಜಕೀಯ ಪಕ್ಷ ಉದಯವಾಗಲಿದೆ ಎಂದು ಎಲಾನ್ ಮಸ್ಕ್ ಎಚ್ಚರಿಸಿದ್ದಾರೆ.

ಎಲಾನ್ ಮಸ್ಕ್ ಹಿನ್ನೆಲೆ
ಎಲಾನ್ ಮಸ್ಕ್ ಮೂಲತಃ ದಕ್ಷಿಣ ಆಫ್ರಿಕಾದವರು. ಆದ್ರೆ ಮಸ್ಕ್ ಅಧಿಕೃತವಾಗಿ ಅಮೆರಿಕದ ಪ್ರಜೆ ಆಗಿದ್ದಾರೆ. ಮಸ್ಕ್ರನ್ನ ಗಡಿಪಾರು ಮಾಡುವ ಬಗ್ಗೆ ಪರಿಶೀಲನೆ ನಡೆಸುತ್ತೀರಾ? ಎಂಬ ಪ್ರಶ್ನೆಗೆ, ಪರಿಶೀಲನೆ ಸಾಧ್ಯ ಎಂದು ಹೇಳುವ ಮೂಲಕ ಟ್ರಂಪ್ ಜಾಗತಿಕ ಮಟ್ಟದ ಚರ್ಚೆಯೊಂದಕ್ಕೆ ನಾಂದಿ ಹಾಡಿದ್ದಾರೆ. ಟ್ರಂಪ್-ಮಸ್ಕ್ ಸ್ನೇಹ ಮುರಿಯಲು ಕಾರಣ ‘ಬಿಗ್ ಬ್ಯೂಟಿಫುಲ್ ಬಿಲ್ ಈ ಮಸೂದೆಗೆ ಮಸ್ಕ್ ವಿರೋಧಪಡಿಸುತ್ತಿದ್ದಾರೆ.
ಬಿಗ್ ಬ್ಯೂಟಿಫುಲ್ ಬಿಲ್ನಲ್ಲಿ ಏನಿದೆ?
ಬಿಗ್ ಬ್ಯೂಟಿಫುಲ್ ಮಸೂದೆಯಲ್ಲಿ ಹತ್ತಾರು ಅಂಶಗಳು ಒಳಗೊಂಡಿವೆ. ಅಮೆರಿಕ-ಮೆಕ್ಸಿಕೋ ಗಡಿಯುದ್ಧಕ್ಕೂ ಫೆನ್ಸಿಂಗ್ ನಿರ್ಮಾಣ ಮಾಡಲಾಗ್ತಿದೆ. ಅಕ್ರಮ ವಲಸಿಗರ ತಡೆಗೆ ಮಹಾಗೋಡೆ ನಿರ್ಮಿಸುತ್ತಿದ್ದು, ಇದಕ್ಕೆ 46 ಬಿಲಿಯನ್ ಡಾಲರ್ ಸರ್ಕಾರ ವ್ಯಯಿಸಲಿದೆ. ರಕ್ಷಣಾ ಕಾರ್ಯಕ್ಕೆ 350 ಬಿಲಿಯನ್ ಡಾಲರ್ ವೆಚ್ಚ ಮಾಡಲಿದೆ.ವಲಸೆ ನಿರ್ಬಂಧ, ವೀಸಾ ಲಾಟರಿ ರದ್ದು, ಟ್ಯಾಕ್ಸ್ ಡಿಡಕ್ಷನ್ ಕಾಯ್ದೆಗಳನ್ನ ಟ್ರಂಪ್ ತರುತ್ತಿದ್ದಾರೆ.
