ಕೃತಕ ಬುದ್ಧಿಮತ್ತೆ ನೆರವಿನಿಂದ 18 ವರ್ಷಗಳ ಬಂಜೆತನಕ್ಕೆ ಅಂತ್ಯ: ದಂಪತಿಗೆ ಸಂತಾನ ಭಾಗ್ಯ!

ನವದೆಹಲಿ: 18 ವರ್ಷಗಳ ಕಾಲ ಫಲವತ್ತತೆಯ ಸಮಸ್ಯೆಯಿಂದ ಬಳಲುತ್ತಿದ್ದ ದಂಪತಿಯ ನೆರವಿಗೆ ಕೃತಕ ಬುದ್ಧಿಮತ್ತೆ ಬಂದಿದೆ. ಪತಿಯಲ್ಲಿ ವೀರ್ಯವನ್ನು ಗುರುತಿಸಿದ ಎಐ ವ್ಯವಸ್ಥೆ, ದಂಪತಿ ಮಕ್ಕಳನ್ನು ಪಡೆದುಕೊಳ್ಳಲು ಸಹಾಯವನ್ನು ಒದಗಿಸಿದೆ.

18 ವರ್ಷಗಳ ಕಾಲ ವಿವಿಧ ಐವಿಎಫ್ ಕೇಂದ್ರಗಳಲ್ಲಿ ಪರಿಹಾರ ಸಿಗದ್ದಕ್ಕೆ ಕೊಲಂಬಿಯಾ ವಿವಿಯ ಫಲವತ್ತತೆ ಕೇಂದ್ರಕ್ಕೆ ಭೇಟಿ ನೀಡಿದ್ದ ದಂಪತಿಗೆ ಕೊನೆಗೂ ಶುಭ ಸುದ್ದಿ ಸಿಕ್ಕಿದೆ.

ಅತ್ಯಂತ ಕಡಿಮೆ ಪ್ರಮಾಣದ ವೀರ್ಯವನ್ನು ಹೊಂದಿರುವ ಸಮಸ್ಯೆಯಿಂದ ಪತಿ ಬಳಲುತ್ತಿದ್ದರು. ಹೀಗಾಗಿ ವೈದ್ಯರಿಗೆ ಅವರ ವೀರ್ಯವನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕೇವಲ ಒಂದೇ ಗಂಟೆಯಲ್ಲಿ 44 ವೀರ್ಯಗಳನ್ನು ಗುರುತಿಸಿದ್ದು ದಂಪತಿಗೆ ನೆರವಾಗಿದೆ.
