Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರಸಿದ್ಧ ಜೀನ್ಸ್ ಉದ್ಯಮ ಘಟಕಗಳಿಗೆ ಮುಚ್ಚುವ ಆತಂಕ

Spread the love

ಬಳ್ಳಾರಿ: ಬಳ್ಳಾರಿ (Ballari) ಜೀನ್ಸ್ ಎಂದರೆ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಪ್ರಸಿದ್ಧಿ ಪಡೆದಿದೆ. ಇದೇ ಜೀನ್ಸ್ ಉದ್ಯಮ‌‌ (Jeans Industry) ನಂಬಿ ಎರಡು ಲಕ್ಷ ಜನ ಬದುಕು ಕಟ್ಟಿಕೊಂಡಿದ್ದಾರೆ. ಅಂತಹ ಜೀನ್ಸ್ ಉದ್ಯಮವೇ ಬಂದ್ ಆಗುವ ಆತಂಕ ಇದೀಗ ಎದುರಾಗಿದೆ. ಒಂದೆಡೆ, ಮೂಲಸೌಕರ್ಯ ಕೊರೆತೆಯಿಂದ ಈಗಾಗಲೇ ಜಿಲ್ಲೆಯ ಜೀನ್ಸ್ ವಾಷಿಂಗ್ ಘಟಕಗಳು ಮುಚ್ಚುತ್ತಿವೆ. ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ, ಸೊರಗುತ್ತಿರುವ ಬಳ್ಳಾರಿ ಜೀನ್ಸ್ ಉದ್ದಿಮಕ್ಕೆ ಈಗ ಮತ್ತೊಂದು ಶಾಕ್‌ ಎದುರಾಗಿದೆ. ಜೀನ್ಸ್ ಉದ್ಯಮವೇ ಮುಚ್ಚುವ ಭೀತಿ ಎದುರಾಗಿದೆ. ಜೀನ್ಸ್ ವಾಷಿಂಗ್ ಘಟಕಗಳು ಕಲುಷಿತ ನೀರನ್ನು ಸಂಸ್ಕರಿಸದೇ ನೇರವಾಗಿ ಜಲಮೂಲಗಳಿಗೆ ಬಿಟ್ಟು, ಪರಿಸರ ಮತ್ತು ಜಲ ಮೂಲಗಳ ಮಾಲಿನ್ಯಕ್ಕೆ ಕಾರಣವಾಗಿರುವುದರಿಂದ ಘಟಕಗಳನ್ನು ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣಾ ಮಂಡಳಿಯ (Karnataka Pollution Board) ಬಳ್ಳಾರಿ ಕಚೇರಿಯು ಕೇಂದ್ರ ಕಚೇರಿಗೆ ವರದಿ ನೀಡಿದೆ. ಕೇಂದ್ರ ಕಚೇರಿಯು ಕೆಲವೇ ದಿನಗಳಲ್ಲಿ ಈ ಸಂಬಂಧ ಆದೇಶ ಹೊರಡಿಸುವ ಸಾಧ್ಯತೆಗಳಿದ್ದು, ವಾಷಿಂಗ್ ಘಟಕಗಳು ಬಾಗಿಲು ಹಾಕಬೇಕಾದ ಪರಿಸ್ಥಿತಿ ಉದ್ಭವಿಸಿದೆ.

ಬಳ್ಳಾರಿ ಜೀನ್ಸ್ ಉದ್ಯಮದ ಸಮಸ್ಯೆ ಏನು?
ಕಲುಷಿತ ನೀರು ಸಂಸ್ಕರಣ ಘಟಕಗಳನ್ನು ಸ್ಥಾಪಿಸಿಕೊಳ್ಳದಿರುವುದೇ ಇದಕ್ಕೆಲ್ಲ ಮೂಲ ಕಾರಣ. ಸದ್ಯ ವಾಷಿಂಗ್ ಘಟಕಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸ್ ನೀಡಿದ್ದು, ಯಾವುದೇ ಕ್ಷಣದಲ್ಲಿ ಮುಚ್ಚುವಂತೆ ಆದೇಶ ಬರುವ ಸಾಧ್ಯತೆ‌ ಇದೆ. ಆದರೆ, ಇದಕ್ಕೆ ಬಳ್ಳಾರಿಯಲ್ಲಿ ಉದ್ದಿಮೆದಾರರು ಹಾಗೂ ವಿಪಕ್ಷಗಳಿಂದ‌ ಸಾಕೊಷ್ಟು ವಿರೋಧ ವ್ಯಕ್ತವಾಗಿದೆ.

ಜೀನ್ಸ್ ಉದ್ಯಮಿಗಳ ಸಮಸ್ಯೆ ಕೇಳದ ಸರ್ಕಾರ
ಜೀನ್ಸ್ ವಾಷಿಂಗ್ ಘಟಕಗಳಲ್ಲಿ ಜೀನ್ಸ್ ಬಟ್ಟೆ ವಾಷ್ ಮಾಡಲು ಬೇರೆ ಕೆಮಿಕಲ್ ಬಳಕೆ ಮಾಡಲಾಗತ್ತದೆ. ಜೊತಗೆ ಬಣ್ಣಗಳು ನೀರಿನೊಂದಿಗೆ ಬೆರೆತು ಜಲಮೂಲ ಸೇರುತ್ತಿವೆ. ಈ ನೀರನ್ನು ಸಂಸ್ಕರಿಸಿ ಬಿಡಲು ಸ್ವಂತ ಘಟಕ ಸ್ಥಾಪನೆ ಮಾಡುವಷ್ಟು ಜೀನ್ಸ್ ಉದ್ಯಮಿಗಳು ಬಲಿಷ್ಠರಲ್ಲ ಎನ್ನಲಾಗಿದೆ. ಹೀಗಾಗಿ ಎಲ್ಲಾ ವಾಷಿಂಗ್ ಘಟಗಳಿಗಾಗಿ ಒಂದು ಬೃಹತ್‌ ಸಂಸ್ಕರಣಾ ಘಟಕ ಮಾಡಿಕೊಡಿ ಎಂದು ಸರ್ಕಾರಕ್ಕೆ ಉದ್ಯಮಿಗಳು ಮನವಿ ಮಾಡಿದ್ದಾರೆ.

ಮೂಲಸೌಕರ್ಯ ಒದಗಿಸಿಕೊಡಿ: ಸರ್ಕಾರಕ್ಕೆ ಜೀನ್ಸ್ ಉದ್ಯಮಿಗಳ ಅಳಲು
ಇನ್ನೊಂದೆಡೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಳ್ಳಾರಿ‌ ಜೀನ್ಸ್ ಉದ್ಯಮಕ್ಕೆ 5 ಸಾವಿರ ಕೋಟಿ ರೂ. ಅನುದಾನ ಕೊಟ್ಟು ಜೀನ್ಸ್ ಕ್ಯಾಪಿಟಲ್ ಮಾಡುತ್ತೇವೆ ಎಂದು ರಾಹುಲ್‌ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ನಮಗೆ 5 ಸಾವಿರ ಕೋಟಿ ರೂ.‌ ಬೇಡ. ಸಂಸ್ಕರಣಾ ಘಟಕ ಸೇರಿದಂತೆ ಮೂಲಭೂತ ಸೌಲಭ್ಯ ಕೊಡಿ ಎಂದು ಉದ್ಯಮಿಗಳು ಮನವಿ ಮಾಡಿದ್ದಾರೆ.

ಒಟ್ಟಾರೆ, ಈ ಮೊದಲು 60 ಜೀನ್ಸ್ ಘಟಕಗಳಿದ್ದ ಬಳ್ಳಾರಿಯಲ್ಲಿ ಈಗ ಸಂಸ್ಕರಣಾ ಘಟಕ ಮಾಡಿಕೊಳ್ಳದ ಕಾರಣ 15 ಘಟಕಗಳನ್ನು ಮುಚ್ಚಿಸಲಾಗಿದೆ. ಇನ್ನು 10 ಘಟಕಗಳು ತನ್ನಿಂತಾನೆ ಹಲವು ಕಾರಣಗಳಿಂದ ಮುಚ್ಚಿವೆ. ಸದ್ಯ 37 ಘಟಕಗಳಿಗೆ ಹಲವು ಹಂತದ ನೋಟಿಸ್‌ಗಳನ್ನು ನೀಡಲಾಗಿದ್ದು ಸ್ಥಗಿತದ ಭೀತಿಯಲ್ಲಿವೆ.


Spread the love
Share:

administrator

Leave a Reply

Your email address will not be published. Required fields are marked *