ಮಾಹಿತಿ ಪಡೆಯದೆ ಮನೆಗೆ ಸ್ಟಿಕರ್ ಅಂಟಿಸಿದ ಬಿಬಿಎಂಪಿ ನೌಕರರು ಸಸ್ಪೆಂಡ್!

ಬೆಂಗಳೂರು: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ರ ಸಂಬಂಧ ನಿವಾಸಿಗಳಿಂದ ಮಾಹಿತಿ ಪಡೆಯದೆ ಮನೆಗೆ ಸ್ಟಿಕರ್ ಅಂಟಿಸಿದ ಬಿಬಿಎಂಪಿಯ ಮೂವರು ನೌಕರರನ್ನು ಅಮಾನತು ಮಾಡಲಾಗಿದೆ

ಎಚ್ಬಿಆರ್ ಲೇಔಟ್ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಪರಿವೀಕ್ಷಕ ರಮೇಶ್, ಕಂದಾಯ ವಸೂಲಿಗಾರ ಪೆದ್ದುರಾಜು ಹಾಗೂ ಕೆಂಗೇರಿ ಉಪ ವಿಭಾಗ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ವಸೂಲಿಗಾರ ಸಿ.
ಸಂದಿಲ್ ಕುಮಾರ್ ಅವರನ್ನು ಕರ್ತವ್ಯಲೋಪದ ಮೇರೆಗೆ ಅಮಾನತುಗೊಳಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
