ರಾಕಿಂಗ್ ಸ್ಟಾರ್ ಯಶ್ಗೆ ಹೊಸ ಐಷಾರಾಮಿ ಕಾರು: ₹2.62 ಕೋಟಿ ಮೌಲ್ಯದ ಲೆಕ್ಸಸ್ ಎಲ್ಎಂ ಎಂಪಿವಿ ಖರೀದಿ!

ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದ ಕೆಜಿಎಫ್ (KGF) ಸಿನಿಮಾದ ಯಶಸ್ಸಿನ ಬಳಿಕ, ಯಶ್ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ಸದ್ಯ, ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರಗಳಲ್ಲಿ ಫುಲ್ ಬ್ಯುಸಿಯಾಗಿದ್ದು, ಶೂಟಿಂಗ್ಗಾಗಿ ಮುಂಬೈನಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

ಅಲ್ಲಿನ ಓಡಾಟಕ್ಕಾಗಿ, ರಸ್ತೆ ಮೇಲಿನ ಅರಮನೆಯಂತಿರುವ ದುಬಾರಿ ಬೆಲೆಯ ಐಷಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ.
ನಟ ಯಶ್ ಹೊಚ್ಚ ಹೊಸ ಲೆಕ್ಸಸ್ ಎಲ್ಎಂ (Lexus LM) ಎಂಪಿವಿಯನ್ನು ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದೇ ಕಾರು ಮುಂಬೈ ವಿಮಾನ ನಿಲ್ದಾಣ ಸಮೀಪವು ಕಂಡುಬಂದಿದ್ದು, ಅದರಿಂದ ಯಶ್ ಇಳಿಯುತ್ತಿರುವುದನ್ನು ನೋಡಬಹುದು. ಈ ಸಂಬಂಧ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲೂ ಭಾರೀ ವೈರಲ್ ಆಗಿವೆ.
ಲೆಕ್ಸಸ್ ಎಲ್ಎಂ ವಿಶೇಷತೆಗಳೇನು:
ಇದೊಂದು ಬೃಹತ್ ಗಾತ್ರದ ಐಷಾರಾಮಿ ಎಂಪಿವಿಯಾಗಿದೆ. ರೂ.2.10 ಕೋಟಿಯಿಂದ 2.62 ಕೋಟಿ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಇದು ‘350ಹೆಚ್’ ಎಂಬ ಏಕೈಕ ರೂಪಾಂತರದ (ವೇರಿಯೆಂಟ್) ಆಯ್ಕೆಯಲ್ಲಿ ಮಾತ್ರ ಗ್ರಾಹಕರಿಗೆ ಲಭ್ಯವಿದ್ದು, 4/ 7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ.
ಈ ಕಾರು ಬಲಿಷ್ಠವಾದ ಪವರ್ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. 2.5-ಲೀ. ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್ನ್ನು ಪಡೆದಿದ್ದು, 250 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇ-ಸಿವಿಟಿ ಗೇರ್ಬಾಕ್ಸ್ನ್ನು ಪಡೆದಿದೆ. 14.8 ಕೆಎಂಪಿಎಲ್ವರೆಗೆ ಮೈಲೇಜ್ ನೀಡುತ್ತದೆ.
ನೂತನ ಲೆಕ್ಸಸ್ ಎಲ್ಎಂ ಎಂಪಿವಿ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. 14-ಇಂಚಿರುವ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 12.3-ಇಂಚಿರುವ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, 4-ಜೋನ್ ಕ್ಲೇಮೇಟ್ ಕಂಟ್ರೋಲ್, 23-ಸ್ಪೀಕರ್ ಮಾರ್ಕ್ ಲೆವಿನ್ಸನ್ ಸೌಂಡ್ ಸಿಸ್ಟಮ್ ಮತ್ತು ಹೀಟೆಡ್ ಸ್ಟೀರಿಂಗ್ ವೀಲ್ನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 8-ಏರ್ಬ್ಯಾಗ್ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್ಸ್) ಹಾಗೂ ಹಿಲ್ ಅಸಿಸ್ಟ್ ಸೇರಿದಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಯಶ್ ಬಳಿ ಮತ್ಯಾವ ಕಾರುಗಳಿವೆ:
ರೇಂಜ್ ರೋವರ್ (Range Rover): 2023ರಲ್ಲಿ ಯಶ್ ಅವರು, ಈ ಕಾರನ್ನು ಕೊಂಡುಕೊಂಡಿದ್ದರು. ಇದು ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ, ರೂ.2.40 ಕೋಟಿಯಿಂದ ರೂ.4.99 ಕೋಟಿ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 2996 ಸಿಸಿ ಅಥವಾ 2998 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ನ್ನು ಪಡೆದಿದೆ. 5/ 7 ಆಸನಗಳನ್ನು ಹೊಂದಿದೆ.
ಮರ್ಸಿಡಿಸ್ ಬೆಂಜ್ ಜಿಎಲ್ಎಸ್ 350 ಡಿ (Mercedes Benz GLS 350D): ಈ ಎಸ್ಯುವಿಯು ನಟ ಯಶ್ ಅವರ ಒಡೆತನದಲಿದ್ದು, ರೂ.1.34 ಕೋಟಿಯಿಂದ ರೂ.1.39 ಕೋಟಿ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 3-ಲೀ. 6-ಸಿಲಿಂಡರ್ ಟರ್ಬೊ ಪೆಟ್ರೋಲ್ & 3-ಲೀ. 6-ಸಿಲಿಂಡರ್ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 7 ಆಸನಗಳನ್ನು ಪಡೆದಿದೆ.
ಆಡಿ ಕ್ಯೂ7 (Audi Q7): ಇದು ಸಹ ಯಶ್ ಅವರ ಬಳಿಯಿದೆ. ಈ ಕಾರು ರೂ.90.48 ರಿಂದ ರೂ.99.81 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 3.0-ಲೀ. ವಿ6 ಟರ್ಬೋ ಪೆಟ್ರೋಲ್ ಎಂಜಿನ್ ಪಡೆದಿದ್ದು, 7 ಆಸನಗಳನ್ನು ಒಳಗೊಂಡಿದೆ. ಇದರೊಂದಿಗೆ ಮಹೀಂದ್ರಾ ಸ್ಕಾರ್ಪಿಯೋ, ಬಿಎಂಡಬ್ಲ್ಯೂ 520ಡಿ, ಮರ್ಸಿಡಿಸ್ ಜಿಎಲ್ಸಿ 250ಡಿ & ಪಜೆರೊ ಸ್ಪೋರ್ಟ್ ಕಾರುಗಳಿಗೂ ಯಶ್ ಮಾಲೀಕರಾಗಿದ್ದಾರೆ.
