Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಮೆರಿಕಾದ ಫಸ್ಟ್ ಲೇಡಿ ಮೆಲಾನಿಯಾ ಟ್ರಂಪ್‌ ಪತ್ನಿ ಗಡಿಪಾರಿಗೆ ಹೋರಾಟ

Spread the love

ನ್ಯೂಯಾರ್ಕ್:ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ವಲಸಿಗರ ವಿರುದ್ಧ ದೊಡ್ಡ ಸಮರವನ್ನೇ ಸಾರಿದ್ದು, ತನ್ನ ದೇಶದಲ್ಲಿ ನೆಲೆ ನಿಂತಿದ್ದ ಹಲವು ದೇಶಗಳ ಸಾವಿರಾರು ವಲಸಿಗರನ್ನು ಟ್ರಂಪ್ ಅಮೆರಿಕಾದ ವಿಮಾನದಲ್ಲೇ ಆಯಾ ದೇಶಕ್ಕೆ ಗಡೀಪಾರು ಮಾಡಿ ಭಾರಿ ಸುದ್ದಿಯಾಗಿದ್ದರು.

ಆದರೆ ಅಚ್ಚರಿಯ ವಿಚಾರ ಎಂದರೆ ಅಮೆರಿಕಾ ಪ್ರಥಮ ಮಹಿಳೆ ಎನಿಸಿರುವ ಟ್ರಂಪ್‌ ಪತ್ನಿ ಮೇಲೆನೀಯಾ ಟ್ರಂಪ್ ಹಾಗೂ ಪುತ್ರ ಬ್ಯಾರನ್ ಟ್ರಂಪ್ ಅವರನ್ನೇ ಅಮೆರಿಕಾದಿಂದ ಹೊರ ಹಾಕಲು ಕೆಲವರು ಸಹಿ ಅಭಿಯಾನ ನಡೆಸಿದ್ದು, ಸಾವಿರಕ್ಕೂ ಹೆಚ್ಚು ಜನ ಈ ಅಭಿಯಾನಕ್ಕೆ ಸಹಿ ಹಾಕಿದ್ದಾರೆ. ಮೊದಲ ಹಂತದ ಗಂಡಿಪಾರಿನಲ್ಲಿ ಮೆಲನೀಯಾ ಟ್ರಂಪ್, ಮೆಲನೀಯಾ ಪೋಷಕರು ಹಾಗೂ ಬ್ಯಾರನ್ ಅವರನ್ನು ಗಡೀಪಾರು ಮಾಡುವಂತೆ ಈ ಸಹಿ ಅಭಿಯಾನ ನಡೆಸಲಾಗುತ್ತಿದೆ.(Deport Melania, Melania’s parents and Baron in the first round of deportations)

ಡೊನಾಲ್ಡ್ ಟ್ರಂಪ್ ಅವರು ಇಲ್ಲಿ ಸ್ವಾಭಾವಿಕ ನಾಗರಿಕರನ್ನು ಗಡೀಪಾರು ಮಾಡಲು ಬಯಸುತ್ತಿರುವುದರಿಂದ, ಮೆಲಾನಿಯಾ ಮತ್ತು ಅವರ ಪೋಷಕರು ಅಮೆರಿಕಾದಿಂದ ಹೊರಡುವ ಮೊದಲ ದೋಣಿಯಲ್ಲಿ ದೇಶ ಬಿಟ್ಟು ಹೋಗುವುದು ನ್ಯಾಯಯುತವಾಗಿದೆ ಎಂದು ನಾನು ನಂಬುತ್ತೇನೆ ಇದಲ್ಲದೆ, ಮೆಲಾನಿಯಾ ಅವರ ಮಗು ಬ್ಯಾರನ್ ಅವರು ಕೂಡ ದೇಶ ಬಿಟ್ಟು ಹೋಗಲು ಒತ್ತಾಯಿಸಬೇಕು. ಏಕೆಂದರೆ ಅವರ ತಾಯಿಯ ತಾಯಿ ಬೇರೆ ದೇಶದಲ್ಲಿ ಜನಿಸಿದರು ಎಂದು ನಮಗೆ ತಿಳಿದಿದೆ. ಏಕೆಂದರೆ ಟ್ರಂಪ್ ಜಾರಿಗೆ ತರುತ್ತಿರುವ ವಲಸಿಗರ ಗಡೀಪಾರು ಮಾನದಂಡಗಳಲ್ಲಿಅದು ಸೇರಿದೆ. ನಿಮ್ಮ ತಾಯಿಯ ತಾಯಿ ಅಮೆರಿಕದಲ್ಲಿ ಜನಿಸಿರಬೇಕು ಮತ್ತು ಮೆಲಾನಿಯಾ ಅವರ ತಾಯಿ ಬೇರೆಡೆ ಜನಿಸಿದರು ಎಂದು ನಮಗೆ ತಿಳಿದಿದೆ. ಹೀಗಾಗಿ ಅದು ಒಬ್ಬರಿಗೆ ಒಳ್ಳೆಯದಾಗಿದ್ದರೆ, ಅದು ಎಲ್ಲರಿಗೂ ಒಳ್ಳೆಯದು ಇದರಲ್ಲಿ ಯಾವುದೇ ವಿನಾಯಿತಿಗಳು ಇರಬಾರದು ಮೊದಲ ದೋಣಿ ಅಥವಾ ವಿಮಾನದಲ್ಲಿ ಅವರು ಕೂಡ ಅಮೆರಿಕಾದಿಂದ ಹೊರಡಬೇಕು ಎಂದು ಈ ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

ಇದು ಪಕ್ಷಪಾತದ ವಿಷಯವಲ್ಲ ಎಂದು ತೋರಿಸಲು ಇದನ್ನು ಮಾಡುವುದು ಮುಖ್ಯ. ಇದು ನಿಜವಾಗಿಯೂ ರಾಷ್ಟ್ರೀಯ ಭದ್ರತೆಯ ಬಗ್ಗೆ ಆಗಿದ್ದರೆ, ಮೆಲಾನಿಯಾ ಕೂಡ ದೇಶ ಬಿಟ್ಟು ಹೋಗಬೇಕು ಎಂದು ಆಗ್ರಹಿಸಲಾಗಿದ್ದಯು, ಮೇಲೆನಿಯಾ ಹಾಗೂ ಬ್ಯಾರೂನ್ ಗಡಿಪಾರಿಗೆ ಆಗ್ರಹಿಸಿ ಬರೆಯಲಾಗಿರುವ ಅರ್ಜಿಗೆ ಈಗಾಗಲೇ 2931ಕ್ಕೂ ಹೆಚ್ಚು ಜನ ಸಹಿ ಹಾಕಿದ್ದಾರೆ.

ಈ ವರ್ಷದ ಆರಂಭದಲ್ಲಿ ಅಮೆರಿಕಾ ಸಂಸದೆ ಮ್ಯಾಕ್ಸಿನ್ ವಾಟರ್ ಅವರು ಮೆಲಾನಿಯಾ ಅವರನ್ನು ದೇಶ ಬಿಟ್ಟು ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ. ಟ್ರಂಪ್ ಮೊದಲು ತನ್ನ ಪತ್ನಿಯ ದಾಖಲೆಗಳನ್ನು ಪರಿಶೀಲಿಸಬೇಕು. ಆಕೆಯ ಪೋಷಕರ ದಾಖಲಾತಿಗಳನ್ನು ಮಾಡಲಾಗಿದೆಯೇ ಇಲ್ಲವೇ ಎಂಬುದು ನಮಗೆ ಗೊತ್ತಿಲ್ಲ. ಹೀಗಾಗಿ ಅವರ ದಾಖಲೆ ಪ್ರಮಾಣಪತ್ರಗಳನ್ನು ಮೊದಲು ಗಮನಿಸುವುದು ಒಳಿತು ಎಂದು ಲಾಸ್ ಏಂಜಲೀಸ್‌ನಲ್ಲಿ ನಡೆದ ಸಮಾವೇಶವೊಂದರಲ್ಲಿ ಮ್ಯಾಕ್ಸಿನ್ ವಾಟರ್ ಹೇಳಿದ್ದರು. ಅವರು(ಟ್ರಂಪ್) ಪ್ರತಿಯೊಬ್ಬರ ದಾಖಲೆಗಳನ್ನು ಅವರು ಎಲ್ಲಿ ಜನಿಸಿದರು, ಅವರ ಪೋಷಕರನ್ನು ದಾಖಲೀಕರಣ ಮಾಡಲಾಗಿದೆಯೇ ಎಂಬುದನ್ನು ತುಂಬಾ ಸಮೀಪದಿಂದ ನೋಡುವುದಕ್ಕೆ ಬಯಸಿದರೆ ಅವರು ಮೊದಲಿಗೆ ತಮ್ಮ ಪತ್ನಿ ಮೆಲಾನಿಯಾ ಅವರ ದಾಖಲೆಗಳನ್ನು ಮೊದಲು ಪರಿಶೀಲಿಸಿಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಮೆರಿಕಾದ ರಾಯಭಾರ ಕಚೇರಿ ನೀಡಿರುವ ಮಾಹಿತಿ ಪ್ರಕಾರ, ಮೆಲಾನಿಯಾ 1970ರಲ್ಲಿ ಸ್ಲೋವೇನಿಯಾದಲ್ಲಿ ಜನಿಸಿದರು. ನಂತರ 1996ರಲ್ಲಿ ನ್ಯೂಯಾರ್ಕ್‌ಗೆ ಬಂದರು ಹಾಗೂ 10 ವರ್ಷಗಳ ನಂತರ ಅಮೆರಿಕಾದ ಪೌರತ್ವ ಪಡೆದರು. ಹಾಗೂ ಅವರು ಅಮೆರಿಕಾದಿಂದ ಹೊರಗೆ ಜನಿಸಿ ಅಮೆರಿಕಾದ ಫಸ್ಟ್ ಲೇಡಿ ಎನಿಸಿದ 2ನೇ ಮಹಿಳೆ ಎನಿಸಿದ್ದಾರೆ. ಹಾಗೂ ಹಾಗೆಯೇ ಅಮೆರಿಕಾದ ಪ್ರಥಮ ಮಹಿಳೆ ಆದ ಮೊದಲ ನೈಸರ್ಗಿಕ ನಾಗರಿಕ ಎನಿಸಿದ್ದಾರೆ.

1990 ರ ದಶಕದ ಮಧ್ಯಭಾಗದಲ್ಲಿ, ಮೆಲಾನಿಯಾ ಮಾಡೆಲಿಂಗ್‌ನಲ್ಲಿ ತನ್ನ ಕೆರಿಯರ್ ಮುಂದುವರಿಸುವುದಕ್ಕಾಗಿ ಅಮೆರಿಕಾಗೆ ಬಂದಿದ್ದರು. ಆದರೂ 2001 ರಲ್ಲಿ ಗ್ರೀನ್ ಕಾರ್ಡ್ ಪಡೆಯುವ ಮೊದಲು ಅವರ ವಲಸೆ ಸ್ಥಿತಿಯ ಬಗ್ಗೆಗಿನ ವಿವರಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಹಾಗೆಯೇ ಕಾಲಾನುಕ್ರಮಕ್ಕೆ ತಕ್ಕಂತೆ ಅವರು ಅಮೆರಿಕದಲ್ಲಿದ್ದಾಗ ಕಾನೂನುಬದ್ಧ ವಲಸೆ ಸ್ಥಾನಮಾನವನ್ನು ಕಾಯ್ದುಕೊಂಡಿದ್ದಾರೋ ಇಲ್ಲವೋ ಎಂಬ ಬಗ್ಗೆ ಹಲವು ಊಹಾಪೋಹಗಳಿದ್ದು ವಿವಾದ ಹುಟ್ಟುಹಾಕಿದೆ.


Spread the love
Share:

administrator

Leave a Reply

Your email address will not be published. Required fields are marked *