Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೆಳಲಹಳ್ಳಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಟ್ವಿಸ್ಟ್: ಹ*ತ್ಯೆಯೇ? ಹೃದಯಾಘಾತವೇ?

Spread the love

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಕೆಳಲಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಭವಿಸಿದ ಪತ್ನಿಯ ಅನುಮಾನಾಸ್ಪದ ಸಾವಿನ ಕುರಿತು ಈಗ ಚರ್ಚೆ ನಡೆಯುತ್ತಿದೆ. ಇದೊಂದು ಸಹಜ ಹೃದಯಾಘಾತವೇ ಅಥವಾ ಗಂಡನಿಂದ ಪತ್ನಿ ಮೇಲಾದ ಕ್ರೂರ ಕೃತ್ಯವೋ ಎಂಬುದರ ಬಗ್ಗೆ ಪ್ರಕರಣ ತೀವ್ರ ತಿರುವು ಪಡೆದುಕೊಂಡಿದೆ.

ಮೃತ ಮಹಿಳೆ ಶಾರದ (28) ಮತ್ತು ಆರೋಪಿಯಾಗಿರುವ ಪತಿ ಪ್ರಸನ್ನ, ಸುಮಾರು 7 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ, ಇವರಿಬ್ಬರೂ ಗಬ್ಬಲಗೂಡು ಗ್ರಾಮದಲ್ಲಿ ವಾಸವಿದ್ದರು. ಇವರ ಸಾಂಸಾರಿಕ ಜೀವನದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಇಬ್ಬರೂ ಹಲವಾರು ಬಾರಿ ಜಗಳವಾಡಿದ್ದರು.

ಆದರೆ, ನಿನ್ನೆ ಶಾರದ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ ಎಂಬ ಮಾಹಿತಿ ಪ್ರಸನ್ನ ಅವರ ಕುಟುಂಬ ಸದಸ್ಯರಿಗೆ ತಿಳಿಸಿದ್ದಾನೆ. ಆದರೆ, ಶಾರದಾಳ ಕುಟುಂಬದ ಸದಸ್ಯರು ಇದನ್ನು ನಂಬುತ್ತಿಲ್ಲ. ‘ಅವಳು ಹೃದಯಾಘಾತದಿಂದ ಸಾವನ್ನಪ್ಪಿಲ್ಲ, ಪ್ರಸನ್ನನೇ ಅವಳನ್ನು ಕೊಂದು ಬೇರೆ ಕಥೆಯನ್ನು ಬಿಂಬಿಸಲು ಯತ್ನಿಸಿದ್ದಾನೆ’ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಹೃದಯಾಘಾತದ ನೆಪದಲ್ಲಿ ಶಾರದನ ಹತ್ಯೆ ಮಾಡಿದ ಅನುಮಾನ ಪೋಷಿಸಿ, ಪತಿ ಪ್ರಸನ್ನನನ್ನು ಬಂಧಿಸಿ ತನಿಖೆ ನಡೆಸಬೇಕೆಂದು ಶಾರದನ ಸಂಬಂಧಿಕರು ಹಳೆಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈಗಾಗಲೇ ಹಾಸನ ಜಿಲ್ಲೆಯಲ್ಲಿ ಚಿಕ್ಕ ವಯಸ್ಸಿನವರಿಗೆ ಹೃದಯಾಘಾತ ಬಂದು ಸಾಯುತ್ತಿದ್ದಾರೆ ಎಂಬ ಭಯ ಜಿಲ್ಲೆಯಾದ್ಯಂತ ಹರಡಿದೆ. ಇದು ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಹರಡಿದ್ದರಿಂದ ಸರ್ಕಾರವೂ ಕೂಡ ಇದಕ್ಕೆ ಕ್ರಮವನ್ನು ಕೈಗೊಂಡಿದೆ. ಹಾಸನ ಜಿಲ್ಲೆಯಲ್ಲಿ ಉಂಟಾದ ಹೃದಯಾಘಾತ ಸಾವಿನ ಬಗ್ಗೆ ತನಿಖಾ ವರದಿ ನೀಡಲು ಆರೋಗ್ಯ ತಜ್ಞರ ತಂಡವೊಂದನ್ನು ರಚಿಸಿದೆ. ಆದರೆ, ಇಲ್ಲಿ ಶಾರದಾಳ ಗಂಡ ಹೆಂಡತಿಯನ್ನು ಕೊಲೆ ಮಾಡಿ ಹೃದಯಾಘಾತದ ಕಥೆ ಕಟ್ಟಿದ್ದಾನೆ ಎಂದು ಮೃತ ಮಹಿಳೆ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಶಾರದಾಳ ಮರಣವೊಂದು ಸಾಮಾನ್ಯ ಸಾವು ಅಲ್ಲ ಎಂಬ ಭಾವನೆ ಸ್ಥಳೀಯರಲ್ಲೂ ಮೂಡಿದ್ದು, ಈ ಕುರಿತಂತೆ ಹಳೆಬೀಡು ಠಾಣೆಯ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬರುವವರೆಗೆ ನಿರ್ಣಾಯಕ ತೀರ್ಮಾನ ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಶಾರದನ ಕುಟುಂಬಸ್ಥರು ಸ್ಪಷ್ಟವಾಗಿ ‘ಇದು ನಿಖರವಾಗಿ ಕೊಲೆ ಪ್ರಕರಣ’ ಎಂದು ಆರೋಪಿ ಪ್ರಸನ್ನನ ಬಂಧನಕ್ಕೆ ಒತ್ತಾಯಿಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *