Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಗತ್ತಿನಲ್ಲಿ ವಿಮಾನಗಳು ಹಾರಲು ಧೈರ್ಯ ಮಾಡದ 3 ಭಯಾನಕ ಸ್ಥಳಗಳು

Spread the love

ವಿಮಾನಗಳು ಮಾನವರು ಕಂಡುಹಿಡಿದ ಅತ್ಯಂತ ಅದ್ಭುತ ಪ್ರಯಾಣ ಸಾಧನಗಳಲ್ಲಿ ಒಂದಾಗಿದೆ. ಸಾವಿರಾರು ಕಿಲೋಮೀಟರ್ ಪ್ರಯಾಣಿಸಲು ಕೆಲವೇ ಗಂಟೆಗಳನ್ನು ಇದು ತೆಗೆದುಕೊಳ್ಳುತ್ತವೆ. ವಿಮಾನ ಪ್ರಯಾಣವು ವಿಶ್ವದ ಅತ್ಯಂತ ಸುರಕ್ಷಿತ ಪ್ರಯಾಣ ಕೂಡ ಒಂದಾಗಿದೆ.

ವಿಮಾನ ಅಪಘಾತಗಳು ಅಪರೂಪಕ್ಕೆ ಸಂಭವಿಸುತ್ತವೆ.

ಆದರೆ, ವಿಮಾನ ದುರಂತಗಳು ತುಂಬಾ ಮಾರಕವಾಗಿರುತ್ತವೆ. ಕೆಲವು ದುರಂತಗಳು ತಾಂತ್ರಿಕ ದೋಷದ ಕಾರಣದಿಂದ ಸಂಭವಿಸಿದರೆ, ಇನ್ನು ಕೆಲವರು ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಜರುಗುತ್ತದೆ. ಹೀಗಾಗಿ ವಿಮಾನವನ್ನು ಎಲ್ಲೆಂದರಲ್ಲಿ ಹಾರಿಸಲಾಗುವುದಿಲ್ಲ. ಅದರಲ್ಲೂ, ಈ 3 ಮುಖ್ಯ ಸ್ಥಳಗಳಲ್ಲಿ ಮಾತ್ರ ಜಗತ್ತಿನ ಯಾವುದೇ ವಿಮಾನಗಳು ಹಾರಲು ಧೈರ್ಯ ಮಾಡುವುದಿಲ್ಲ. ಪೈಲಟ್ ಎಷ್ಟೇ ಬುದ್ಧಿವಂತನಾಗಿದ್ದರೂ ಈ ಸ್ಥಳಗಳ ಮೇಲೆ ಹಾರಲು ಧೈರ್ಯ ಮಾಡುವುದೇ ಇಲ್ಲ. ಆ ಸ್ಥಳಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಮೊದಲನೆಯದು ಹಿಮಾಲಯ ಪರ್ವತಗಳು ನೆಲೆಗೊಂಡಿರುವ ಟಿಬೆಟಿಯನ್ ಪ್ರಸ್ಥಭೂಮಿ. ವಿಶ್ವದ ಈ ಅತಿ ಎತ್ತರದ ಪ್ರದೇಶದ ಮೇಲೆ ಹಾರಾಟ ನಡೆಸುವುದು ತುಂಬಾ ಅಪಾಯಕಾರಿ. ಇದು ಹಿಮಾಲಯ ಪರ್ವತಗಳಿಂದ ಆವೃತವಾಗಿದೆ. ಈ ಪ್ರದೇಶದ ಮೇಲೆ ಹಾರುವ ವಿಮಾನಗಳ ಮೇಲೆ ಕೆಲವು ನಿರ್ಬಂಧಗಳಿವೆ. ಈ ಪ್ರದೇಶದಲ್ಲಿ ಹಾರಾಟಕ್ಕೆ ಯಾವುದೇ ನಿಷೇಧವಿಲ್ಲದಿದ್ದರೂ, ಅಪಾಯವು ತುಂಬಾ ಹೆಚ್ಚಿರುವುದರಿಂದ ಪೈಲಟ್‌ಗಳು ಆ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ. ವಿಶ್ವದ ಅತಿ ಎತ್ತರದ ಸ್ಥಳವಾದ ಈ ಸ್ಥಳವು ಗರಿಷ್ಠ 15,000 ಅಡಿ ಎತ್ತರವನ್ನು ಹೊಂದಿದೆ. ವಿಮಾನವು ಸಾಮಾನ್ಯವಾಗಿ 30,000 ಅಡಿ ಎತ್ತರದಲ್ಲಿ ಹಾರುತ್ತದೆ. ಆದಾಗ್ಯೂ, ಕೆಟ್ಟ ಹವಾಮಾನದಂತಹ ಪರಿಸ್ಥಿತಿ ಇದ್ದರೆ, ವಿಮಾನವು ಕೆಳಕ್ಕೆ ಹಾರಬೇಕಾಗುತ್ತದೆ. ಅದು 10,000 ಅಡಿಗಳಿಗೆ ಇಳಿಯಬಹುದು. ಅಂತಹ ಸಂದರ್ಭಗಳಲ್ಲಿ, 15,000 ಅಡಿ ಎತ್ತರದ ಪರ್ವತಗಳ ಮಧ್ಯದಲ್ಲಿ ಹಾರುವುದು ತುಂಬಾ ಅಪಾಯಕಾರಿ. ಶೀತ ಗಾಳಿಯಂತಹ ಪ್ರತಿಕೂಲ ಪರಿಸ್ಥಿತಿಗಳು ಅಪಘಾತಗಳ ಅಪಾಯವನ್ನು ಹೆಚ್ಚಿಸಬಹುದು.

ಎರಡನೆಯದು ಬರ್ಮುಡಾ ತ್ರಿಕೋನ ಅಥವಾ ಟ್ರಯಾಂಗಲ್​. ಇದು ಅನೇಕ ವಿಮಾನಗಳು ಮತ್ತು ಹಡಗುಗಳು ಕಣ್ಮರೆಯಾಗಿರುವ ಭಯಾನಕ ಸ್ಥಳವಾಗಿದೆ. ಬರ್ಮುಡಾ ತ್ರಿಕೋನವು ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಒಂದು ಪ್ರದೇಶವಾಗಿದೆ. ಇದು ಫ್ಲೋರಿಡಾ, ಬರ್ಮುಡಾ ಮತ್ತು ಪೋರ್ಟೊ ರಿಕೊ ನಡುವೆ ಇದೆ. ಬಿರುಗಾಳಿಗಳು ಮತ್ತು ಸುಂಟರಗಾಳಿಗಳಿಂದ ತುಂಬಿರುವ ಭಯಾನಕ ಹವಾಮಾನವನ್ನು ಹೊಂದಿರುವ ಈ ಪ್ರದೇಶವು ಅನೇಕ ವಿಮಾನಗಳು ಮತ್ತು ಹಡಗುಗಳನ್ನು ನುಂಗಿದೆ.

ಮೂರನೆಯದು ಏರಿಯಾ 51 ಎಂದು ಕರೆಯಲ್ಪಡುವ ಅಮೆರಿಕನ್ ಮಿಲಿಟರಿ ನೆಲೆ. ಈ ಕಾರ್ಯತಂತ್ರದ ಪ್ರಮುಖ ಸ್ಥಳದ ಮೇಲೆ ವಿಮಾನಗಳು ಹಾರಲು ಅವಕಾಶವಿಲ್ಲ. ಇಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಹೊರಗಿನ ಪ್ರಪಂಚಕ್ಕೆ ತಿಳಿಯಬಾರದು ಎಂದು ಯುನೈಟೆಡ್ ಸ್ಟೇಟ್ಸ್ ಒತ್ತಾಯಿಸುತ್ತದೆ. ವಿಶ್ವದ ಯಾವುದೇ ದೇಶದ ಯಾವುದೇ ವಿಮಾನವು ಈ ಪ್ರದೇಶದ ಮೇಲೆ ಹಾರಲು ಅವಕಾಶವಿಲ್ಲ. ಯಾವುದೇ ದೇಶದ ವಿಮಾನವು ನಿರ್ಬಂಧಗಳನ್ನು ಉಲ್ಲಂಘಿಸಿ ಈ ಪ್ರದೇಶದ ಮೇಲೆ ಹಾರಿದರೆ, ಅವುಗಳನ್ನು ತಕ್ಷಣವೇ ಹೊಡೆದುರುಳಿಸಲಾಗುವುದು.


Spread the love
Share:

administrator

Leave a Reply

Your email address will not be published. Required fields are marked *