ಮಗಳೇ ಮಿಸ್ ಯು ಎಂದ ಅಪ್ಪನಿಗೆ ಸಾವಿನ ದಾರಿ ತೋರಿಸಿದ ಅಮ್ಮ

ಹಾವೇರಿ :ಬರೋಬ್ಬರಿ 24 ವರ್ಷ ಸಂಸಾರ ಮಾಡಿ, ಗಂಡನ ಮೇಲೆ ಅನುಮಾನ ಪಟ್ಟ ಹೆಂಡತಿ ವಯಸ್ಸಿಗೆ ಬಂದಿದ್ದ ಮಗಳನ್ನು ಕರೆದುಕೊಂಡು ಹೋಗಿದ್ದಳು. ಗಂಡನನ್ನು ಕರೆಯದೇ ಮಗಳ ಮದುವೆಯನ್ನೂ ಮಾಡಿ ಕಳುಹಿಸಿದ್ದಳು. ಈ ವಿಚಾರ ತಿಳಿದ ಗಂಡನಿಗೆ ಹೆಂಡತಿಯ ಮೇಲೆ ಕೊಲ್ಲುವಷ್ಟು ಕೋಪ ತೋರಿಸಿದ್ದಾನೆ.
ಆದರೆ, ಬಡವನ ಸಿಟ್ಟು ದವಡೆಗೆ ಮೂಲ ಎಂಬಂತೆ ಬಾಯಿಗೆ ಬಂದಂತೆ ಮಾತನಾಡಿ ಸುಮ್ಮನಾಗಿದ್ದನು. ಆದರೆ, ಗಂಡ ಕೊಲ್ಲುವ ಮಾತನಾಡಿದ್ದಾನೆಂದು ಸಿಟ್ಟಿಗೆದ್ದ ಹೆಂಡತಿ ಮಾಡಿದ ಕೆಲಸ ಮಾತ್ರ ಇಡೀ ಸಮಾಜವೇ ತಲೆ ತಗ್ಗಿಸುವಂತದ್ದಾಗಿದೆ.

ಆತ ರೈತ.. ಇದ್ದ ನಾಲ್ಕು ಎಕರೆ ಭೂಮಿಯಲ್ಲಿ ತೆಂಗು ಬೆಳದಿದ್ದ. ಹಣಕಾಸಿಗೆ ಯಾವುದೇ ತೊಂದರೆ ಇರಲಿಲ್ಲ. ಆದರೆ ಅವನಿಗೆ ಇದ್ದ ಒಂದೇ ಚಿಂತೆ ಹೆಂಡತಿ-ಮಗಳು ಜೊತೆಗೆ ಇಲ್ಲ ಅನ್ನೋದು. ಕಳೆದ ಒಂದು ವರ್ಷದ ಹಿಂದಷ್ಟೇ ಹೆಂಡತಿ ಜಗಳವಾಡಿಕೊಂಡು ಮಗಳನ್ನ ಕರೆದುಕೊಂಡು ಬೇರೆ ಊರಿಗೆ ಹೋಗಿ ಸೆಟಲ್ ಆಗಿದ್ದಳು. ಈತ ಮಾತ್ರ ತೋಟ ನೋಡಿಕೊಂಡು ಒಬ್ಬಂಟಿಯಾಗಿದ್ದನು. ಆದರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಆತ ಕಾಣೆಯಾಗಿಬಿಟ್ಟಿದ್ದನು. ಎಲ್ಲಿ ಹುಡುಕಿದರೂ ಅವನ ಸುಳಿವು ಸಿಗಲಿಲ್ಲ.
ಆತನ ಸಹೋದರ ಹೋಗಿ ಮಿಸ್ಸಿಂಗ್ ಕೇಸ್ ದಾಖಲಿಸಿದನು. ಇನ್ನೂ ತನಿಖೆಗೆ ಬಂದ ಪೊಲೀಸರಿಗೆ ಅವನ ಮನೆಯಲ್ಲಿ ಖಾರದ ಪುಡಿ ಚೆಲ್ಲಿದ್ದು ಕಾಣಿಸಿತ್ತು.. ಇದನ್ನ ನೋಡಿ ಆ ರೈತನಿಗೆ ಏನೋ ಆಗಿದೆ ಅನ್ನೋದನ್ನ ಖಾತ್ರಿ ಪಡಿಸಿಕೊಂಡಿದ್ದರು. ಅದರೆ, ಹೀಗೆ ಮಿಸ್ಸಿಂಗ್ ಆಗಿ ಸರಿಯಾಗಿ 5 ದಿನಕ್ಕೆ ಅವನ ಮೃತದೇಹ ದೂರದ ಕಾಡಿನ ಪ್ರದೇಶದಲ್ಲಿ ಸಿಕ್ಕಿತ್ತು. ಹಾಗಾದರೆ ಆ ರೈತನನ್ನ ಕೊಲೆ ಮಾಡಿದರಾ.? ಅಥವಾ ಒಂಬ್ಬಂಟಿಯಾಗಿದ್ದ ಆ ಮನೆಯಲ್ಲಿ ಆವತ್ತು ಏನ್ ನಡೀತು.
ಹೌದು, ಆತನಿಂದ ಕೆಲವು ದಿನಗಳ ಹಿಂದೆಯಷ್ಟೇ ತವರು ಮನೆಗೆ ಹೋಗಿ ಸೆಟಲ್ ಆಗಿದ್ದ ಹೆಂಡತಿಯೇ ಗಂಡನ ಹೆಣ ಹಾಕಿದ್ದಳು. ಗಂಡನೊಂದಿಗೆ ಜಗಳ ಮಾಡಿಕೊಂಡು ಬೇರೆ ಹೋಗಿ ಒಂದೂವರೆ ವರ್ಷವಾದ ಮೇಲೆ ಅವಳು ವಾಪಸ್ ಬಂದು ಗಂಡನ ಹೆಣ ಹಾಕಿದ್ದಳು. ಅದೂ ಕೂಡ ಕ್ರೂರಾತಿ ಕ್ರೂರವಾಗಿ ಸಾಯಿಸಿ ಹೋಗಿದ್ದಳು. ಅಷ್ಟಕ್ಕೂ ಆ ಸುಮಂಗಲಿ ತನ್ನ ತಾಳಿ ಭಾಗ್ಯ ಹೋಗುತ್ತದೆ ಎಂಬುದು ಗೊತ್ತಿದ್ದರೂ ಹೀಗ್ಯಾಕೆ ಮಾಡಿದಳು.? ಆವತ್ತು ಆ ಮನೆಯಲ್ಲಿ ನಡೆದಿದ್ದೇನು.? ಎನ್ನುವುದು ಪೊಲೀಸರ ತನಿಖೆಗೆ ಚುರುಕು ನೀಡಿತ್ತು.

ಇಬ್ಬರಿಗೂ ಮದುವೆಯಾಗಿ 25 ವರ್ಷ ಆಗಿದ್ದರೂ ಹೆಂಡತಿಗೆ ಗಂಡನ ಮೇಲೆ ವಿಪರೀತ ಅನುಮಾನವಿತ್ತು. ಇದೇ ಕಾರಣಕ್ಕೆ ಹೆಂಡತಿ ಗಂಡನಿಂದ ಬೇರೆ ಹೋಗಿದ್ದಳು. ಕಳೆದ ಒಂದುವರೆ ವರ್ಷ ದೂರವಿದ್ದು ಮಗಳ ಮದುವೆಯನ್ನೂ ಮಾಡಿದ್ದಳು. ಆದರೆ ಮಗಳ ಮದುವೆಗೆ ಗಂಡನನ್ನ ಕರೆದಿರಲಿಲ್ಲ. ಇದೇ ವಿಷಯಕ್ಕೆ ಗಂಡ ಸಿಟ್ಟಾಗಿ ಅವಳನ್ನ ಕೊಲ್ಲುವುದಾಗಿ ಮಾತನಾಡಿದ್ದನು. ಆದರೆ, ಗಂಡನಿಗೆ ಪಾಠ ಕಲಿಸಬೇಕು ಅಂತ ಆವತ್ತು ತನ್ನ ಸಂಬಂಧಿಯನ್ನ ಕರೆದುಕೊಂಡು ಆತನ ಹೆಂಡತಿಯೇ ಮನೆಗೆ ಬಂದಿದ್ದಳು. ಹೆಂಡತಿಯನ್ನು ಕೊಲೆ ಮಾಡಬೇಕೆಂದು ಹೊಂಚು ಹಾಕಿದ್ದ ಗಂಡನ ಕಣ್ಣಿಗೆ ಖಾರದ ಪುಡಿ ಎರಚಿ ಅವನ ಕಾಲುಗಳನ್ನ ಕಟ್ಟಿ ಹಾಕಿದ್ದಳು. ಆದರೆ, ಈ ಸಮಯದಲ್ಲಿ ಆಕೆಯ ಜೊತೆಗೆ ಬಂದಿದ್ದ ಸಂಬಂಧಿಕ ಕುಡಿದ ನಶೆಯಲ್ಲಿ ಶಂಕರ ಮೂರ್ತಿಯ ಕುತ್ತಿಗೆಗೆ ಕಾಲು ಇಟ್ಟು ಕೊಂದೇಬಿಟ್ಟನು.
ಇತ್ತ ಗಂಡನಿಂದ ದೂರವಾಗಿದ್ದ ಸುಮಂಗಲ ತನ್ನ ಪಾಡಿಗೆ ತಾನು ಇದ್ದಿದ್ದರೆ ಇವತ್ತು ಶಂಕರಮೂರ್ತಿ ಬದುಕಿರುತ್ತಿದ್ದನು. ಸುಮಂಗಲ ಕೂಡ ತನ್ನ ಪಾಡಿಗೆ ಜೀವನ ನಡೆಸಬಹುದಿತ್ತು. ಆದರೆ ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಇವತ್ತು ಜೈಲು ಪಾಲಾಗಿದ್ದಾಳೆ.. ಈಕೆಗೆ ಏನ್ ಶಿಕ್ಷೆ ಕೊಟ್ಟರೂ ಕಡಿಮೇನೇ ಅಂತ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ
