Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಚಿವರಿಗೇ ರಾಪಿಡೊ ಟ್ರಿಪ್‌ ಕೊಟ್ಟ ಬೈಕ್‌ ಟ್ಯಾಕ್ಸಿ ಸವಾರ: ಮಹಾರಾಷ್ಟ್ರದಲ್ಲಿ ಬಯಲಾಯ್ತು ಅಕ್ರಮ ಸೇವೆ!

Spread the love

ಮುಂಬೈ: ಮಹಾರಾಷ್ಟ್ರದಲ್ಲೂ ಕರ್ನಾಟಕದ ಹಾಗೆಯೇ ಬೈಕ್‌ ಟ್ಯಾಕ್ಸಿ ನಿಷೇಧವಾಗಿದ್ದು, ಆದರೂ ಸಹ ಸವಾರನೋರ್ವ ರಾಪಿಡೊ ಟ್ರಿಪ್‌ ಮಾಡುತ್ತಾ ಸ್ವತಃ ಸಾರಿಗೆ ಸಚಿವರ ಕೈಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾನೆ

ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್‌ ಸರ್‌ ನಾಯಕ್‌ ಸಾರಿಗೆ ಇಲಾಖೆ ಸಿಬ್ಬಂದಿಯನ್ನು ಯಾವುದಾದರೂ ಅನಧಿಕೃತ ಬೈಕ್‌ ಟ್ಯಾಕ್ಸಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಪ್ರಶ್ನಿಸಿದಾಗ ಇಲ್ಲ ಎಂದಿದ್ದಾರೆ.

ಆದರೆ ಪ್ರತಾಪ್‌ ಸರ್‌ ನಾಯಕ್‌ ನಕಲಿ ಹೆಸರು ಬಳಸಿ ರಾಪಿಡೊ ಅಪ್ಲಿಕೇಶನ್‌ನಲ್ಲಿ ಬೈಕ್‌ ಟ್ಯಾಕ್ಸಿ ಬುಕ್‌ ಮಾಡಿದ್ದಾರೆ.

ಹತ್ತೇ ನಿಮಿಷಗಳಲ್ಲಿ ನಗರದ ಮಂತ್ರಾಲಯ ಸಮೀಪದ ಶಹೀದ್‌ ಬಾಬು ಗೇಣು ಚೌಕ್‌ ಬಳಿ ಬೈಕ್‌ ಸವಾರ ಆಗಮಿಸಿದ್ದಾನೆ. ಆದರೆ ಪ್ರತಾಪ್‌ ಸರ್‌ ನಾಯಕ್‌ ಆ ಸವಾರನಿಗೆ 500 ರೂ ಕೊಟ್ಟು ಸುಮ್ಮನಾಗಿದ್ದು, ಇದು ನಿಮ್ಮ ತಪ್ಪಲ್ಲ ಕಂಪನಿಯ ತಪ್ಪು ಎಂದಿದ್ದಾರೆ. ಅಲ್ಲದೇ ರಾಪಿಡೊ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇನ್ನು ನಿನ್ನೆ ( ಜುಲೈ 2 ) ಕೇಂದ್ರ ಸರ್ಕಾರ ಬೈಕ್‌ ಟ್ಯಾಕ್ಸಿ ಸೇವೆ ಸಲ್ಲಿಸಲು ಅನುಮತಿಯನ್ನು ನೀಡಿದೆ. ವಾಣಿಜ್ಯೇತರ ಖಾಸಗಿ ಬೈಕ್‌ ಬಳಸಬಹುದು ಎಂದೂ ಸಹ ಹೇಳಿದೆ. ಆದರೆ ಇದಕ್ಕೆ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ ಎಂದೂ ಸಹ ಕೇಂದ್ರ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *