Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತೀಯ ವಾಯುಪಡೆ ಭೂಮಿ ಅಕ್ರಮ ಮಾರಾಟ – ತಾಯಿ-ಮಗ ವಿರುದ್ಧ ಪ್ರಕರಣ

Spread the love

ಫಿರೋಜ್ ಪುರ:ಭಾರತದ ಪಂಜಾಬ್‌ನಲ್ಲಿ ಹೊಸ ಭೂ ಹಗರಣವೊಂದು ಬೆಳಕಿಗೆ ಬಂದಿದೆ. 1962, 1965 ಮತ್ತು 1971ರ ಯುದ್ಧಗಳಲ್ಲಿ ಬಳಸಲಾಗಿದ್ದ ಐತಿಹಾಸಿಕ ಭಾರತೀಯ ವಾಯುಪಡೆಯ (IAF) ವಾಯುನೆಲೆಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಕ್ಕಾಗಿ ಪಂಜಾಬ್‌ನ ಫಿರೋಜ್‌ಪುರ ಪೊಲೀಸರು ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪಾಕಿಸ್ತಾನ ಗಡಿಗೆ ಹತ್ತಿರದಲ್ಲಿರುವ ಫತ್ತುವಾಲಾ ಗ್ರಾಮದಲ್ಲಿ ವಾಯುನೆಲೆ ಇದೆ. ಹೈಕೋರ್ಟ್ ಹಸ್ತಕ್ಷೇಪದ ನಂತರ ಈ ಭೂಮಿಯನ್ನು ಈ ವರ್ಷ ರಕ್ಷಣಾ ಸಚಿವಾಲಯಕ್ಕೆ ಹಿಂತಿರುಗಿಸಲಾಯಿತು. ಮಾರ್ಚ್ 12, 1945ರಂದು ಬ್ರಿಟಿಷ್ ಆಳ್ವಿಕೆಯಲ್ಲಿ ಎರಡನೇ ಮಹಾಯುದ್ಧದಲ್ಲಿ ಬಳಸಲು ಸ್ವಾಧೀನಪಡಿಸಿಕೊಂಡ ಈ ಭೂಮಿ IAFಗೆ ಸೇರಿತ್ತು. ಉಷಾ ಅನ್ಸಾಲ್ ಮತ್ತು ಅವರ ಮಗ ನವೀನ್ ಚಂದ್ ತಾವೇ ಈ ಭೂಮಿಯ ಮಾಲೀಕರೆಂದು ಹೇಳಿಕೊಂಡು ಮಾರಾಟ ಮಾಡಿದ್ದಾರೆ.

ತಾಯಿ-ಮಗ ಇಬ್ಬರೂ ತಮ್ಮನ್ನು ಭೂಮಾಲೀಕರೆಂದು ಹೇಳಿಕೊಂಡಿದ್ದು, ಇದರ ನಿಜವಾದ ಮಾಲೀಕ ಮದನ್ ಮೋಹನ್ ಲಾಲ್ 1991ರಲ್ಲಿ ನಿಧನರಾಗಿದ್ದರು. ಆದರೆ 1997ರಲ್ಲಿ ಅವರ ಹೆಸರಿನಲ್ಲಿ ಭೂಮಿಯನ್ನು ಮಾರಾಟ ಮಾಡಲಾಯಿತು. ರಕ್ಷಣಾ ಸಚಿವಾಲಯವು ಭೂಮಿಯನ್ನು ವರ್ಗಾಯಿಸದಿದ್ದರೂ 2009-2010ರ ನಡುವೆ ಹಲವಾರು ವ್ಯಕ್ತಿಗಳನ್ನು ಮಾಲೀಕರೆಂದು ಹೆಸರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಏಪ್ರಿಲ್ 16, 2021ರಂದು ಹಲ್ವಾರಾ ವಾಯುಪಡೆ ನಿಲ್ದಾಣದ ಕಮಾಂಡೆಂಟ್ ನಿವೃತ್ತ ಕಂದಾಯ ಅಧಿಕಾರಿ ನಿಶಾನ್ ಸಿಂಗ್ ಅವರು ದೂರು ದಾಖಲಿಸಿದರು. ಸ್ಥಳೀಯ ಆಡಳಿತವು ಈ ಬಗ್ಗೆ ಸಮಗ್ರ ತನಿಖೆ ನಡೆಸಲು 5 ವರ್ಷಗಳನ್ನು ತೆಗೆದುಕೊಂಡಿತು. ನಿಶಾನ್ ಸಿಂಗ್ ಡಿಸೆಂಬರ್ 21, 2023ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ತೆರಳಿದರು. ನ್ಯಾಯಮೂರ್ತಿ ಹರ್ಜಿತ್ ಸಿಂಗ್ ಬ್ರಾರ್ ಅವರು ಫಿರೋಜ್‌ಪುರದ ಉಪ ಆಯುಕ್ತರಿಗೆ ಛೀಮಾರಿ ಹಾಕಿದರು. ಇದು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ಎಂದು ಟೀಕಿಸಿದರು. ಹಾಗೇ, ಪಂಜಾಬ್ ವಿಜಿಲೆನ್ಸ್ ಬ್ಯೂರೋದ ಮುಖ್ಯಸ್ಥರಿಗೆ ವೈಯಕ್ತಿಕವಾಗಿ ತನಿಖೆ ನಡೆಸಿ 4 ವಾರಗಳಲ್ಲಿ ವರದಿ ನೀಡುವಂತೆ ನಿರ್ದೇಶಿಸಿದರು. ಹೈಕೋರ್ಟ್ ಹಸ್ತಕ್ಷೇಪದ ನಂತರ, ಭೂಮಿಯನ್ನು ಅಂತಿಮವಾಗಿ ಮೇ 2025ರಲ್ಲಿ ರಕ್ಷಣಾ ಸಚಿವಾಲಯಕ್ಕೆ ವಾಪಾಸ್ ನೀಡಲಾಯಿತು.


Spread the love
Share:

administrator

Leave a Reply

Your email address will not be published. Required fields are marked *