ಭಾರತದ ಪ್ರಸಿದ್ಧ ಗೋಸ್ಟ್ ಹಂಟರ್ ಗೌರವ್ ತಿವಾರಿ ನಿಗೂಢ ಸಾವು: ಇಂದಿಗೂ ಸುಳಿಯುತ್ತಿದೆ “ನಕಾರಾತ್ಮಕ ಶಕ್ತಿ”ಯ ನೆನಪು!

ಅವರು ಭಾರತದ ಪಸಿದ್ಧ ಗೋಸ್ಟ್ ಹಂಟರ್ ಮಾತ್ರವಲ್ಲ ದೇಶದ ಮೊದಲ ಪ್ಯಾರನಾರ್ಮಲ್ ಸೊಸೈಟಿಯ ಸ್ಥಾಪನೆ ಮಾಡಿದ ಸಾಧಕ, ಅತೀ ಚಿಕ್ಕವಯಸ್ಸಿನಲ್ಲೇ ಪ್ರಸಿದ್ಧರಾದ ಅವರು ಹುಡುಗಿಯರನ್ನು ದೆವ್ವಗಳು ಅಥವಾ ನಕಾರಾತ್ಮಕ ಶಕ್ತಿಗಳು ಇರುವಲ್ಲಿ ಬಿಟ್ಟಿದ್ದರು. ಆತ್ಮಗಳೊಂದಿಗೆ ಮಾತನಾಡುತ್ತಿದ್ದರು.

ಅತೀ ಚಿಕ್ಕ ವಯಸ್ಸಿನಲ್ಲೇ ಅದೇ ನಕಾರಾತ್ಮಕ ಶಕ್ತಿಗಳಿಗೆ ಬಲಿಯಾದರು ಎಂದು ನಂಬಲಾಗಿದೆ. ಅವರ ಸಾವು ಇಂದಿಗೂ ನಿಗೂಢತೆಯ ಗೂಡಾಗಿದೆ.
“ಹಾಂಟೆಡ್ ವೀಕೆಂಡ್ಸ್ ವಿತ್ ಸನ್ನಿ ಲಿಯೋನ್” ಮತ್ತು “ಎಂಟಿವಿ ಗರ್ಲ್ಸ್ ನೈಟ್ ಔಟ್” ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿ ಪ್ರಸಿದ್ಧರಾಗಿದ್ದ ಹಾಗೂ ಇಂಡಿಯನ್ ಪ್ಯಾರಾನಾರ್ಮಲ್ ಸೊಸೈಟಿಯನ್ನು ಸ್ಥಾಪಿಸಿದ ಭಾರತೀಯ ಪ್ಯಾರಾನಾರ್ಮಲ್ ತನಿಖಾಧಿಕಾರಿ ಗೌರವ್ ತಿವಾರಿ, ದೆಹಲಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟರು. ದೆವ್ವ ಮತ್ತು ಭೂತಗಳಿರುವ ಸ್ಥಳಗಳನ್ನು ತನಿಖೆ ಮಾಡುವ ಹಾಗು ಆತ್ಮಗಳೊಂದಿಗೆ ಸಂವಹನ ನಡೆಸುವ ಕ್ಷೇತ್ರದಲ್ಲಿ ಅವರು ಸಣ್ಣ ವಯಸ್ಸಿನಲ್ಲೇ ಬಹಳ ಜನಪ್ರಿಯರಾಗಿದ್ದರು. ಅವರ ಸಾವನ್ನು ಪೊಲೀಸರು ಉಸಿರುಗಟ್ಟಿ ಸಂಭವಿಸಿದೆ ಎಂದು ನಿರ್ಧರಿಸಿದರೂ, ಅವರ ಕುಟುಂಬ “ನಕಾರಾತ್ಮಕ ಶಕ್ತಿ” ಅವರು ಆಕರ್ಷಿತವಾಗಿತ್ತು ಎಂದು ವರದಿಗಳಾಗಿತ್ತು.
ಜುಲೈ 7, 2016ರಂದು, ಭಾರತದಲ್ಲಿ ಪ್ರಮುಖ ಪ್ಯಾರಾನಾರ್ಮಲ್ ತನಿಖಾಧಿಕಾರಿಯಾಗಿ ಗುರುತಿಸಿಕೊಂಡ ಗೌರವ್ ತಿವಾರಿ ಅವರು ದ್ವಾರಕಾದ ತಮ್ಮ ಮನೆದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾದ ಸುದ್ದಿಯು ಅವರ ಅಭಿಮಾನಿಗಳು ಮತ್ತು ಪ್ಯಾರಾನಾರ್ಮಲ್ ಸಮುದಾಯದಲ್ಲಿ ಆಘಾತದ ಅಲೆಗಳನ್ನು ಉಂಟುಮಾಡಿತು. ಕೇವಲ 31 ವರ್ಷ ವಯಸ್ಸಿನ ತಿವಾರಿ ತಮ್ಮ ಸ್ನಾನಗೃಹದ ನೆಲದ ಮೇಲೆ, ಕುತ್ತಿಗೆಯ ಸುತ್ತ ಲಘುವಾಗಿ ಕಪ್ಪು ಗುರುತು ಕಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರು ಇದನ್ನು ಉಸಿರುಗಟ್ಟುವಿಕೆ ಎಂದು ವಿವರಿಸಿದರೂ, ಹಲವರು ಇದನ್ನು ಸರಳ ಆತ್ಮಹತ್ಯೆಯಾಗಿ ನಂಬಲು ನಿರಾಕರಿಸಿದರು, ವಿಶೇಷವಾಗಿ ಅವರ ಕಾರ್ಯಕ್ಷೇತ್ರದ ನಿಗೂಢ ಸ್ವರೂಪ ಮತ್ತು ಏರುತ್ತಿದ್ದ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡಾಗ, ಈ ಸಾವಿನ ಬಗ್ಗೆ ಹಲವಾರು ಅನುಮಾನ ನಿಗೂಢತೆಗಳು ಇಂದಿಗೂ ಇದೆ.
ಅಲೌಕಿಕ ತನಿಖೆಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ತಿವಾರಿ, 6,000ಕ್ಕೂ ಹೆಚ್ಚು ದೆವ್ವ ಸ್ಥಳಗಳನ್ನು ಪರಿಶೀಲಿಸಿದ್ದರು ಮತ್ತು ಆತ್ಮಗಳೊಂದಿಗೆ ಸಂವಹನ ನಡೆಸಿದ್ದರು. ಸೆಪ್ಟೆಂಬರ್ 2, 1984ರಂದು ಜನಿಸಿದ ಗೌರವ್, ಎಂಟಿವಿ ಯ “ಗರ್ಲ್ಸ್ ನೈಟ್ ಔಟ್ ವಿತ್ ರನ್ವಿಜಯ್ ಸಿಂಗ್” ಕಾರ್ಯಕ್ರಮದಲ್ಲಿ ನಿರೂಪಕರಾಗಿ ಹೆಚ್ಚು ಪ್ರಸಿದ್ಧರಾಗಿದ್ದರು. ಆ ಕಾರ್ಯಕ್ರಮದಲ್ಲಿ ಮೂವರು ಮಹಿಳೆಯರನ್ನು ಅಲೌಕಿಕ ಶಕ್ತಿಗಳನ್ನು ಎದುರಿಸಲು ದೆವ್ವ ಇರುವ ಸ್ಥಳಗಳಿಗೆ ಕಳುಹಿಸಲಾಗುತ್ತಿತ್ತು. ಅವರು “ಹಾಂಟೆಡ್ ವೀಕೆಂಡ್ಸ್ ವಿತ್ ಸನ್ನಿ ಲಿಯೋನ್”, “ಭೂತ್ ಆಯಾ”, “ಫಿಯರ್ ಫೈಲ್ಸ್” ಮತ್ತು “ಹಾಂಟಿಂಗ್: ಆಸ್ಟ್ರೇಲಿಯಾ” ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಇಂಡಿಯನ್ ಪ್ಯಾರಾನಾರ್ಮಲ್ ಸೊಸೈಟಿಯ ಸಿಇಒ ಮತ್ತು ಸಂಸ್ಥಾಪಕರಾಗಿ, ಅವರು ಭಾರತದಲ್ಲೂ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ದೆವ್ವಗಳು, ಯುಎಫ್‌ಓಗಳು ಮತ್ತು ವಿವರಿಸಲಾಗದ ಶಕ್ತಿಗಳ, ನಕಾರಾತ್ಮಕ ಶಕ್ತಿಗಳ ಅಧ್ಯಯನದಲ್ಲಿ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದರು.
ಅಧಿಕೃತ ಮರಣೋತ್ತರ ಪರೀಕ್ಷೆಯ ವರದಿಯು ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ಹೇಳಿದ್ದರೂ, ಅಭಿಮಾನಿಗಳು ಅವರ ಸಾವಿನ ಹಿಂದೆ ಇನ್ನೂ ಯಾವುದಾದರೂ ಭೀತಿದಾಯಕ ಸಂಗತಿ ಇದ್ದಿರಬಹುದೆಂದು ಅನುಮಾನ ವ್ಯಕ್ತಪಡಿಸಿದರು. ತಿವಾರಿ ತಮ್ಮ ಸಾವಿಗೆ ಕೇವಲ ಒಂದು ತಿಂಗಳ ಹಿಂದಷ್ಟೆ, ಪತ್ನಿಗೆ “ನಕಾರಾತ್ಮಕ ಶಕ್ತಿ”ಯೊಂದು ತನನ್ನು ಆಕರ್ಷಿಸುವಂತಿದೆ ಎಂದು ಹೇಳಿದ್ದರಂತೆ. ಆದರೆ, ಆ ವೇಳೆ ಪತ್ನಿ ಅದನ್ನು ಕೆಲಸದ ಒತ್ತಡಕ್ಕೆ ಸಂಬಂಧಪಟ್ಟದ್ದಿರಬಹುದು ಎಂದು ನಿರ್ಲಕ್ಷಿಸಿದ್ದರು. ದುಃಖಕರ ವಿಷಯವೆಂದರೆ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ತಿವಾರಿ ಭಾರತೀಯ ಪ್ಯಾರಾನಾರ್ಮಲ್ ಸೊಸೈಟಿಯನ್ನು ಸ್ಥಾಪಿಸಿದ್ದು, ಅದು ಅಸಾಮಾನ್ಯ ಘಟನೆಗಳನ್ನು ಪರಿಶೀಲಿಸುವ, ಅಂತೆ ಕಂತೆ ಪುರಾಣಗಳನ್ನು ಅಲ್ಲಗಳೆಯುವ ಮತ್ತು ಅಂತಹ ಘಟನೆಗಳ ವೈಜ್ಞಾನಿಕ ಅಧ್ಯಯನಕ್ಕೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ. ದೂರದರ್ಶನ ಹಾಗೂ ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮತ್ತು ಇಂಡಿಯನ್ ಪ್ಯಾರಾನಾರ್ಮಲ್ ಸೊಸೈಟಿಯ ಕಾರ್ಯಗಳ ಮೂಲಕ ಅವರು ಜನಪ್ರಿಯತೆಯನ್ನು ಗಳಿಸಿದ್ದರು.
