Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಿದ್ರೆಯಲ್ಲೇ ಕಚ್ಚಿದ ಹಾವು: ರಾಯಚೂರಿನಲ್ಲಿ ತಾಯಿ-ಮಗನ ದಾರುಣ ಸಾವು!

Spread the love

Viral video: 2 men drag dead body outside postmortem house in UP's Jhansi,  probe underway | Today News

ರಾಯಚೂರು: ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದಲ್ಲಿ ರಾತ್ರಿ ಮಲಗಿದ್ದ ತಾಯಿ ಮತ್ತು ಮಗನಿಗೆ ಹಾವು ಕಚ್ಚಿ ಇಬ್ಬರೂ ಮೃತಪಟ್ಟಿದ್ದಾರೆ.

ಸುಬ್ಬಮ್ಮ (35) ಮತ್ತು ಪುತ್ರ ಬಸವರಾಜ್ (10 ) ಮೃತಪಟ್ಟವರು. ರಾತ್ರಿ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿದೆ. ಮನೆಯವರು ತಾಯಿ ಮತ್ತು ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ.

ಆದರೆ ವಾಹನ ತಯಾರಿ ಮಾಡಿಕೊಂಡು ಆಸ್ಪತ್ರೆಗೆ ಹೋಗುವಷ್ಟರಲ್ಲಿ ತಾಯಿ-ಮಗ ಇಬ್ಬರೂ ಮೃತಪಟ್ಟಿದ್ದಾರೆ.

ಹಾವು ಕಚ್ಚಿದಾಗ ಮಲಗಿದ್ದರಿಂದ ತಕ್ಷಣ ಗೊತ್ತಾಗಿಲ್ಲ. ವಿಷ ದೇಹಕ್ಕೆ ಆವರಿಸಿಕೊಂಡ ಬಳಿಕವೇ ಹಾವು ಕಚ್ಚಿರುವುದು ತಿಳಿದಿದೆ. ಹೀಗಾಗಿ ಚಿಕಿತ್ಸೆ ನೀಡುವುದು ಕೂಡ ವಿಳಂಬವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *