ಭಾರತೀಯ ಸೇನೆಯಲ್ಲೂ ಇನ್ನು ಎಐ ಆಧಾರಿತ ಮೆಷಿನ್ ಗನ್

ಎಐ ತಂತ್ರಜ್ಞಾನ ದಿನದಿಂದ ದಿನಕ್ಕೆ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತವೆ. ಅದು ಯಾವ ಮಟ್ಟಿಗೆ ಅಂದ್ರೆ. ಊಹಿಸಲು ಸಾಧ್ಯವಾಗದಷ್ಟು. ಇದೀಗ ಭಾರತೀಯ ಸೇನೆಯಲ್ಲೂ ಕೂಡ ಹವಾ ಸೃಷ್ಟಿಸಿವೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾರತೀಯ ಸೇನೆಯಲ್ಲಿ ಎಐ ಮೆಷಿನ್ ಗನ್‌ಗಳು ಶತ್ರು ದೇಶಗಳಿಗೆ ನಡುಕ ಹುಟ್ಟಿಸಿವೆ. 2025ರ ಜೂನ್‌ನಲ್ಲಿ ಬೆಂಗಳೂರು ಮೂಲದ ರಕ್ಷಣಾ ಕಂಪನಿ ಬಿಎಸ್‌ಎಸ್ ಸಹಯೋಗದೊಂದಿಗೆ ಭಾರತೀಯ ಸೇನೆಯು ದೇಶದ ಮೊದಲ ಎಐ ಆಧಾರಿತ ಮೆಷಿನ್ ಗನ್‌ನ ಪ್ರಮಾಣಿತ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಇದು 7.62×51 ಎಂಎಂ ಬ್ಯಾರೆಲ್ ಒಳಗೊಂಡಿರುವ ನೆಗೆವ್ ಲೈಟ್ ಮೆಷಿನ್ ಗನ್ ಆಗಿದೆ.

ಇದರ ಪರೀಕ್ಷೆಗಳನ್ನು ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿ ನಡೆಸಲಾಯಿತು. ಈ ವೇಳೆ ಇದು ಗುರಿಯನ್ನು ನಿಖರವಾಗಿ ತಲುಪುವ ಸಾಮರ್ಥ್ಯವನ್ನ ಹೊಂದಿದೆ. ಇದು 600 ಮೀ. ದೂರದಲ್ಲಿ ಸ್ಥಿರವಾದ ಗುರಿ ಸ್ವಾಧೀನವನ್ನು ಸಾಧಿಸಬಹುದು. ಈ ಎಐ ಮೆಷಿನ್ ಗನ್‌ನ ಗರಿಷ್ಠ ಪರಿಣಾಮಕಾರಿ ವ್ಯಾಪ್ತಿಯು 1,000 ಮೀಟರ್ವರೆಗೆ ಇರುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಎಐ ಮೆಷಿನ್ ಗನ್ ಉಷ್ಣ ಮತ್ತು ಆಪ್ಟಿಕಲ್ ಸೆನ್ಸಾರ್ಗಳನ್ನು ಸಂಯೋಜಿಸುವ ಮಲ್ಟಿ ಸೆನ್ಸಾರ್ ಮಾಡ್ಯೂಲ್ ಅನ್ನು ಹೊಂದಿದೆ. ಪರ್ವತ ಪ್ರದೇಶಗಳಲ್ಲಿ ಕಡಿಮೆ-ಗೋಚರತೆಯ ಪರಿಸ್ಥಿತಿಗಳಲ್ಲಿಯೂ ಕೂಡ ಪರಿಣಾಮಕಾರಿ ಆಗಿ ಕೆಲಸ ಮಾಡಲಿದ್ದು, ಗುರಿಯನ್ನು ನಿಖರವಾಗಿ ತಲುಪಲಿದೆ. ಇದರಿಂದ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿದಂತಾಗಿದೆ.

ಗಾಳಿ, ತಾಪಮಾನ, ದೂರ ಗಣನೆಗೆ ತೆಗೆದುಕೊಂಡು ನಿಖರವಾದ ಬ್ಯಾಲಿಸ್ಟಿಕ್ ಪರಿಹಾರವನ್ನು ಹೊಂದಿದೆ.
ಅಲ್ಲದೆ, ಸೈನಿಕರ ನೇರ ಮೇಲ್ವಿಚಾರಣೆಯ ಅಗತ್ಯ ಇಲ್ಲದೆಯೇ ಈ ಆಯುಧವನ್ನು ರಹಸ್ಯ ಕಮಾಂಡ್ ಲಿಂಕ್ ಮೂಲಕ ನಿಯಂತ್ರಣ ಮಾಡಬಹುದು.
ಬಂಕರ್‌ಗಳು, ಶಸ್ತ್ರಸಜ್ಜಿತ ವಾಹನಗಳು, ಹಡಗುಗಳು, ಮಾನವರಹಿತ ನೆಲದ ವಾಹನಗಳು ಮತ್ತು ಸ್ಥಾಯಿ ವೇದಿಕೆಗಳಲ್ಲಿ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಸಂಯೋಜಿಸಬಹುದು ಎಂದು ವರದಿಯಾಗಿದೆ. 2020ರಲ್ಲಿ ಭಾರತವು ಇಸ್ರೇಲ್‌ನಿಂದ 16,479 ನೆಗೆವ್ ಬಂದೂಕುಗಳಿಗೆ ನೀಡುವಂತೆ ಕೇಳಿಕೊಂಡಿತ್ತು. ಪ್ರಸ್ತುತ 40,000ಕ್ಕೂ ಅಧಿಕ ಘಟಕಗಳು ಅಗತ್ಯವಿದೆ. ಇತ್ತೀಚೆಗೆ ಪಾಕ್ ಗಡಿಯಲ್ಲಿ ನಡೆಸಿದ ಆಪರೇಷನ್ ಸಿಂಧೂರ್‌ನಲ್ಲಿ ಸ್ಥಳೀಯ ಶಸ್ತ್ರಾಸ್ತ್ರಗಳು ತಮ್ಮ ಸಾಮರ್ಥ್ಯ ಏನೆಂದು ತೋರಿಸಿದ್ದು, ಇವುಗಳ ಹೊಡೆತಕ್ಕೆ ನರಿ ಪಾಕಿಸ್ತಾನ ಅಕ್ಷರಸಃ ನಲುಗಿಹೋಗಿತ್ತು.
ಇನ್ನು ರಕ್ಷಣಾ ಸಚಿವಾಲಯವು ಎಐ ಸಂಶೋಧನೆಗಾಗಿ ಪ್ರತಿ ವರ್ಷ 100 ಕೋಟಿ ರೂಪಾಯಿಗಳನ್ನು ವಿನಿಯೋಗ ಮಾಡುತ್ತಿದೆ. ಇದು ರಕ್ಷಣಾ ಉತ್ಪಾದನೆಯಲ್ಲಿ 1.75 ಲಕ್ಷ ಕೋಟಿ ರೂಪಾಯಿಗಳು ಮತ್ತು ರಫ್ತುಗಳಲ್ಲಿ 35,000 ಕೋಟಿ ರೂಪಾಯಿಗಳ ಗುರಿಯನ್ನು ಹೊಂದಿದೆ. ಈ ಎಐ ಆಧಾರಿತ ನೆಗೆವ್ ಬಂದೂಕು ಪ್ರಯೋಗವು ಭಾರತೀಯ ರಕ್ಷಣಾ ಪಡೆಗಳ ಆಧುನೀಕರಣದಲ್ಲಿ ಪ್ರಮುಖ ಹೆಜ್ಜೆ ಆಗಿದೆ. ಒಟ್ಟಿನಲ್ಲಿ ಎಐ ಬರೀ ಐಟಿ-ಬಿಟಿ, ಸಣ್ಣಪುಟ್ಟ ಕಂಪನಿಗಳು ಅಷ್ಟೇ ಅಲ್ಲದೆ, ಭಾರತೀಯ ಸೇನೆಯಲ್ಲೂ ಕೂಡ ಕೆಲಸ ಮಾಡಲು ಪ್ರಾರಂಭಿಸಿದೆ. ಇದರಿಂದ ಶತ್ರುಗಳಿಗೆ ನಡುಕ ಶುರುವಾದಂತಾಗಿದೆ. ಅಷ್ಟರ ಮಟ್ಟಿಗೆ ಭಾರತ ತಂತ್ರಜ್ಞಾನದಲ್ಲಿ ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಲೇ ಇದೆ.