ಮಂಗಳೂರು: ನೋ ಪಾರ್ಕಿಂಗ್ನಲ್ಲಿ ಆಟೋ ನಿಲ್ಲಿಸಿದ್ದಕ್ಕೆ ದಂಡ – ಆಟೋ ಚಾಲಕನ ಕಣ್ಣೀರಿನ ಕಥೆ ವೈರಲ್!
ಮಂಗಳೂರು: ನಗರದ ನೋ ಪಾರ್ಕಿಂಗ್ ಸ್ಥಳದಲ್ಲಿ ಆಟೋರಿಕ್ಷಾ ನಿಲ್ಲಿಸಿದ ಚಾಲಕನಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದು ಆತ ಕಣ್ಣೀರು ಹಾಕಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
2012ರಲ್ಲಿ ಪರವಾನಿಗೆ ಆಗಿದೆ. ಇದುವರೆಗೆ ಎಲ್ಲಿಯೂ ದಂಡ ಹಾಕಿಲ್ಲ. ಮೊದಲ ಬಾರಿಗೆ ಇಲ್ಲಿ ದಂಡ ಹಾಕಿದ್ದಾರೆ.
ಪಾರ್ಕ್ನಲ್ಲಿ ಇಡಲು ಹೇಳುತ್ತಾರೆ. ಆದರೆ ಪಾರ್ಕ್ಗಳಲ್ಲಿ ಸ್ಥಳವಿಲ್ಲ. ಅದಕ್ಕಾಗಿ ರಸ್ತೆ ಬದಿ ನಿಲ್ಲಿಸಿದ್ದೆ. ಎಷ್ಟು ವಿನಂತಿಸಿದರೂ ಬಿಡಲಿಲ್ಲ. ಬೆಳಗಿನಿಂದ 200 ರೂ. ದುಡಿದಿದ್ದೇನೆ. ಮೋಸ ಮಾಡಿಲ್ಲ, ಕಳವು ಮಾಡಿಲ್ಲ. ನಿಯತ್ತಿನಿಂದ ದುಡಿಯಲು ಬಿಡುತ್ತಿಲ್ಲ.
ಆಟೋಚಾಲಕರು ತುಂಬಾ ಶ್ರಮ ಪಡುತ್ತಾರೆ. ಪೊಲೀಸರು ವಂಚನೆ ಮಾಡುವವರಿಂದ ದಂಡ ವಸೂಲಿ ಮಾಡಲಿ. ಅದು ಬಿಟ್ಟು ಬಡ ನಮ್ಮಂಥ ರಿಕ್ಷಾ ಚಾಲಕರಿಂದ ದಂಡ ವಸೂಲಿ ಮಾಡಬಾರದು ಎಂದು ವಿನಂತಿಸಿದ್ದಾರೆ.