Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇ.ಡಿ.ಯಿಂದ ಸೀಟ್‌ ಬ್ಲಾಕಿಂಗ್‌ ದಂಧೆ ಮೇಲೆ ದಾಳಿ – 3 ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳು ಸೇರಿ 18 ಕಡೆ ಶೋಧ!

Spread the love

Enforcement Directorate functions, powers and procedure to appoint ED  Director: All you need to know | Enforcement News – India TV

ಬೆಂಗಳೂರು: ಕಳೆದ ವರ್ಷ ಎಂಜಿನಿಯರಿಂಗ್‌ ವಿಭಾಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಸೀಟ್‌ ಬ್ಲಾಕಿಂಗ್‌ ದಂಧೆ ಪ್ರಕರಣ ದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಬುಧವಾರ ನಗರದ 3 ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳು ಸೇರಿ 18ಕ್ಕೂ ಹೆಚ್ಚು ಕಡೆ ಗಳಲ್ಲಿ ದಾಳಿ ನಡೆಸಿ ಶೋಧಿಸಿದ್ದಾರೆ.

ಬೆಳಗ್ಗೆ 8 ಗಂಟೆ ಸುಮಾರಿಗೆ ಬೆಂಗ ಳೂರಿನ ಜಾರಿ ನಿರ್ದೇಶನಾಲಯ ವಿಭಾಗದ 60ಕ್ಕೂ ಹೆಚ್ಚು ಅಧಿಕಾರಿ ಗಳು ಪ್ರತ್ಯೇಕವಾಗಿ ಕಾಲೇಜುಗಳು ಹಾಗೂ ಪ್ರಕರಣದ 12 ಮಂದಿ ಆರೋಪಿಗಳಿಗೆ ಸೇರಿದ ಮನೆ ಹಾಗೂ ಕೆಲವರ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ಇ.ಡಿ. ಮೂಲಗಳು ತಿಳಿಸಿವೆ.

ಈ ಅಕ್ರಮ ಸಂಬಂಧ ಕೆಇಎ ಅಧಿಕಾರಿಗಳು ಕಳೆದ ವರ್ಷ ಮಲ್ಲೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿತ 3 ಕಾಲೇಜು ಗಳ ಮುಖ್ಯಸ್ಥರು, ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರನ್ನು ಪೊಲೀ ಸರು ತೀವ್ರ ವಿಚಾರಣೆಗೊಳಪಡಿಸಿ ದಾಗ ಅಕ್ರಮ ಎಸಗಿರುವುದು ಪತ್ತೆಯಾಗಿದೆ.

ಅಲ್ಲದೆ ಲಕ್ಷಾಂತರ ರೂ. ಅಕ್ರಮ ಹಣ ವರ್ಗಾವಣೆ ಆಗಿರುವ ಮಾಹಿತಿ ಸಿಕ್ಕಿತ್ತು. ಈ ಬೆನ್ನಲ್ಲೇ ಕಳೆದ ನವೆಂಬರ್‌ನಲ್ಲಿ ಮಲ್ಲೇಶ್ವರ ಠಾಣೆ ಪೊಲೀಸರು 12 ಮಂದಿ ಆರೋಪಿಗಳನ್ನು ಬಂಧಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಅದರಲ್ಲಿ ಆರೋಪಿತ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಬಂಧಿತರು ಸೀಟ್‌ ಬ್ಲಾಕಿಂಗ್‌ ಮಾಡಿ ಅರ್ಹ ಅಭ್ಯರ್ಥಿಗಳಿಗೆ ಕೊಡದೆ, ಬೇರೆ ಅಭ್ಯರ್ಥಿಗಳಿಗೆ ಮಾರುತ್ತಿದ್ದರು ಎಂಬುದು ಗೊತ್ತಾಗಿತ್ತು.

ವಂಚನೆ ಹೇಗೆ?
ಕೆಇಎ ಸೀಟು ಹಂಚಿಕೆಯಲ್ಲಿ ಸೀಟು ಪಡೆದಿದ್ದ 2,625 ಅಭ್ಯರ್ಥಿಗಳು ಕಾಲೇಜಿಗೆ ಪ್ರವೇಶ ಪಡೆದಿರಲಿಲ್ಲ. ಈ ಸಂಬಂಧ ಅಭ್ಯರ್ಥಿಗಳಿಗೆ ಕೆಇಎ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು. ಇದರಲ್ಲಿ 2,208 ಮಂದಿ ಶುಲ್ಕ ಪಾವತಿಸಿರಲಿಲ್ಲ. 95 ಮಂದಿ ಪಾವತಿಸಿದ್ದರೂ ಪ್ರವೇಶಪತ್ರ ಡೌನ್‌ಲೋಡ್‌ ಮಾಡಿಕೊಂಡಿರಲಿಲ್ಲ. 45 ಮಂದಿ ಅಲ್ಪ ಶುಲ್ಕ ಪಾವತಿಸಿದ್ದರು. ಬೇಡಿಕೆ ಇರುವ ಕಾಲೇಜುಗಳಲ್ಲಿಯೇ 40-90 ಸೀಟುಗಳನ್ನು ಬ್ಲಾಕ್‌ ಮಾಡಿದ್ದರು. ಈ ರೀತಿ ಉಳಿಕೆಯಾಗಿರುವ ಸೀಟುಗಳನ್ನು ಅಂತಿಮವಾಗಿ ಮ್ಯಾನೇಜ್‌ಮೆಂಟ್‌ ಕೋಟಾಕ್ಕೆ ಹಿಂದಿರುಗಿಸುವುದರಿಂದ ಇದನ್ನು ಹೆಚ್ಚಿನ ಹಣಕ್ಕೆ ಮಾರಿಕೊಳ್ಳಲು ಕಾಲೇಜುಗಳಿಗೆ ಅಭ್ಯರ್ಥಿಗಳೇ ಅವಕಾಶ ಮಾಡಿಕೊಟ್ಟಿದ್ದರು. ಬ್ಲಾಕ್‌ ಮಾಡಿದ್ದ ಸೀಟ್‌ಗಳನ್ನು 60-70 ಲಕ್ಷ ರೂ.ಗೆ ಮಾರಾಟ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಮಧ್ಯವರ್ತಿಗಳು ಅಭ್ಯರ್ಥಿಗಳ ಲಾಗಿನ್‌ ಪಾಸ್‌ವರ್ಡ್‌, ಸೀಕ್ರೆಟ್‌ ಕೀ ಬಳಸಿ ಅಭ್ಯರ್ಥಿ ಪರ ಆಯ್ಕೆ ಮಾಡಿಸಲಾಗಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.


Spread the love
Share:

administrator

Leave a Reply

Your email address will not be published. Required fields are marked *