ನವದೆಹಲಿ: ವಿಚಿತ್ರ ಡ್ರೆಸ್ ಕೋಡ್ ಜಾರಿಗೊಳಿಸಿದ ಕಂಪನಿ; ಮಹಿಳಾ ಉದ್ಯೋಗಿಗಳಿಗೆ ದುಪ್ಪಟ್ಟ ಪಿನ್, ಓಪನ್ ಹೇರ್ ನಿಷೇಧ
ನವದೆಹಲಿ: ಅನೇಕ ಕಂಪೆನಿಗಳು (Company) ಈಗ ಆಫೀಸ್ (Office) ಬರುವವರಿಗೆ ಡ್ರೆಸ್ ಕೋಡ್ (Dress Code) ನಿಗಧಿ ಮಾಡಿದೆ. ಕೆಲ ಆಫೀಸ್‌ಗಳಲ್ಲಿ ಈ ನಿಯಮವಿಲ್ಲ. ಆದರೆ ಸದ್ಯ ಇಲ್ಲೊಂದು ಆಫೀಸ್‌ನ ಡ್ರೆಸ್ ಕೋಡ್ ಟೀಕೆಗೆ ಗುರಿಯಾಗಿದ್ದು, ಫುಲ್ ವೈರಲ್ ಆಗುತ್ತಿದೆ.
ಚೂಡಿದಾರಕ್ಕೆ ಇರುವ ವೇಲ್ ಅನ್ನು ಪಿನ್ ಮಾಡಿಕೊಂಡು ಬರಬೇಕಂತೆ
ಆಫೀಸ್‌ನಲ್ಲಿ ಇಷ್ಟಬಂದ ಹಾಗೆ ಬಂದರೆ ಸರಿ ಎನಿಸುವುದಿಲ್ಲ ಅಥವಾ ಒಂದು ವೃತ್ತಿ ನಿಯಮ ಇರಬೇಕು ಎನ್ನುವ ನಿಟ್ಟಿನಲ್ಲಿ ಡ್ರೆಸ್ ಕೋಡ್‌ಗಳನ್ನ ಇಡಲಾಗುತ್ತದೆ. ಅನೇಕ ಕಡೆ ಶರ್ಟ್ ಟಕ್ ಇನ್ ಮಾಡಿರಬೇಕು, ಟೀ ಶರ್ಟ್ ಧರಿಸಿ ಆಫೀಸ್ ಬರಬಾರದು, ಹೀಗೆ ಅನೇಕ ರೂಲ್ಸ್ ಇದೆ. ಆದರೆ ಇಲ್ಲೊಂದು ಕಂಪೆನಿ ಮಾತ್ರ ಎಲ್ಲಾ ಮಿತಿಯನ್ನ ಮೀರಿದ್ದು, ಮಹಿಳಾ ಉದ್ಯೋಗಿಗಳು ಚೂಡಿದಾರವನ್ನ ಧರಿಸಿ ಬರಬೇಕು, ಅದರಲ್ಲೂ ಅದರ ದುಪ್ಪಟ್ಟವನ್ನ ಪಿನ್ ಮಾಡಿರಬೇಕು ಎಂದ ನಿಯಮ ಮಾಡಿದೆ.

ಓಪನ್ ಹೇರ್ ಬಿಡುವ ಹಾಗಿಲ್ಲ
ಈ ಮೇಲಿನ ನಿಯಮಗಳು ಮಾತ್ರವಲ್ಲದೇ, ಇನ್ನಷ್ಟು ರೂಲ್ಸ್ ಹಾಕಿದೆ. ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಕೂದಲನ್ನ ಬಿಟ್ಟುಕೊಂಡು ಆಫೀಸ್‌ಗೆ ಬರುವ ಹಾಗಿಲ್ಲ. ಯಾವಾಗಲೂ ಕೂದಲನ್ನ ಕಟ್ಟಿಕೊಂಡು ಬರಬೇಕು ಎಂದು ಹೇಳಿದೆ. ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಲಿರುವ ವ್ಯಕ್ತಿಯೊಬ್ಬರ ಫ್ರೆಂಡ್ ಈ ವಿಚಾರವನ್ನ ಶೇರ್ ಮಾಡಿಕೊಂಡಿದ್ದು, ಎಲ್ಲೆಡೆ ಟ್ರೋಲ್ ಆಗುತ್ತಿದೆ. ಕೆಲವರಂತೂ ಇದು ಯಾವ ಸ್ಕೂಲ್ ಎಂದು ಪ್ರಶ್ನೆ ಮಾಡಿದ್ದಾರೆ.
ಕೇವಲ ಮಹಿಳಾ ಉದ್ಯೋಗಿಗಳಿಗೆ ಮಾತ್ರ ಅಲ್ಲ, ಪುರುಷರಿಗೆ ಸಹ ಸಹ ನಿಯಮಗಳಿದೆ. ಆದರೆ ಈ ರೀತಿ ಅತಿಯಾಗಿಲ್ಲ. ಟೀ ಶರ್ಟ್ ಧರಿಸಬಾರದು ಎನ್ನುವ ನಿಯಮವಿದ್ದು, ಶರ್ಟ್ ಟಕ್ ಇನ್ ಮಾಡಿರಬೇಕು ಎಂದು ಕಂಪೆನಿ ಹೇಳಿದೆ.