ಬಿಹಾರ ಭೀಕರ ಅಪರಾಧ: ಅನೈತಿಕ ಸಂಬಂಧ ಮರೆಮಾಚಲು 12 ವರ್ಷದ ಮಗನನ್ನು ಕೊಂದ ಶಿಕ್ಷಕಿ!

ಪಾಟ್ನಾ: ಹೆತ್ತ ತಾಯಿಯೇ ಮಗನನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಬಿಹಾರದ ಪಾಟ್ನಾ ಗ್ರಾಮೀಣ ಜಿಲ್ಲಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶ್ರೇಯಾಂಸ್ (12 ) ಮೃತ ದುರ್ದೈವಿ. ರೋಮಾಕುಮಾರಿ (32) ಕೊಲೆಯ ಆರೋಪಿ ಎಂದು ಗುರುತಿಸಲಾಗಿದೆ.
ರೋಮಾಕುಮಾರಿ ಶಾಲಾ ಶಿಕ್ಷಕಿಯಾಗಿದ್ದು, ತನ್ನದೇ ಶಾಲೆಯ ಪ್ರಿನ್ಸಿಪಾಲ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು, ಆತನ ಪ್ರೀತಿಗಾಗಿಯೇ ಹಲ್ಲೆ ನಡೆಸಿ ಮಗನ ಜೀವ ತೆಗೆದಿದ್ದಾಳೆ ಎನ್ನಲಾಗಿದೆ.

ಗಂಡನ ಜೊತೆಗಿನ ವೈವಾಹಿಕ ಸಂಬಂಧ ಹಾಳಾಗಿದ್ದರಿಂದ ರೋಮಾಕುಮಾರಿ, ಪ್ರಿನ್ಸಿಪಾಲ್ ಕಡೆ ಆಕರ್ಷಿತಳಾಗಿ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ರೋಮಾಕುಮಾರಿ ಮನೆಗೆ ಪದೇ ಪದೇ ಪ್ರಿನ್ಸಿಪಾಲ್ ನಿರ್ಮಲ್ ಪಾಸ್ವಾನ್ ಬರುವುದಕ್ಕೆ ಮಗ ಶ್ರೇಯಾಂಸ್ ವಿರೋಧಿಸಿದ್ದ.
ಇದೇ ಕಾರಣಕ್ಕೆ ಮಗನ ಜೀವ ತೆಗೆದ ರೋಮಾಕುಮಾರಿ ಬಳಿಕ ಮೃತದೇಹವನ್ನು ಕೋನಹಾರ್ ಬ್ರಿಡ್ಜ್ ಬಳಿ ಹಾಕಿ ಬೆಂಕಿ ಹಚ್ಚಿದ್ದಾರೆ. ಶ್ರೇಯಾಂಸ್ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.