Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮದುವೆ ನಿರಾಕರಿಸಿ ಸಹೋದ್ಯೋಗಿ ಮೇಲೆ 11 ರಾಜ್ಯಗಳಿಗೆ ಹುಸಿಬಾಂಬ್ ಬೆದರಿಕೆ ಇಮೇಲ್

Spread the love

ಅಹಮದಾಬಾದ್ : ತನ್ನನ್ನು ಮದುವೆಯಾಗಲು ನಿರಾಕರಿಸಿದ್ದ ತನ್ನ ಸಹೋದ್ಯೋಗಿಯ ಮೇಲೆ ಸೇಡು ತಿರಿಸಿಕೊಳ್ಳಲು ದೇಶದ 11 ರಾಜ್ಯಗಳಿಗೆ ಹುಸಿಬಾಂಬ್ ಬೆದರಿಕೆಯ ಇಮೇಲ್ ಕಳುಹಿಸಿದ ಯುವತಿಯನ್ನು ಅಹಮದಾಬಾದ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈಕೆ ಉಡುಪಿಯ ಶಾಲೆಯೊಂದಕ್ಕೂ ಬೆದರಿಕೆ ಈಮೇಲ್ ಕಳುಹಿಸಿದ್ದಾಳೆ ಎಂದು ತಿಳಿದು ಬಂದಿದೆ. ಬಂಧಿತೆಯನ್ನು ಚೆನ್ನೈನ ಎಂಎನ್ ಸಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ರೆನೆ ಜೋಶಿಲ್ಡಾ ಎಂದು ಗುರುತಿಸಲಾಗಿದೆ.

ಈಕೆ ಡೆಲಾಯ್ಟ್ ಎಂಬ ಕಂಪೆನಿಯಲ್ಲಿ ಹಿರಿಯ ಸಲಹೆಗಾರಾಗಿ ಕೆಲಸ ನಿರ್ವಹಿಸುತ್ತಿದ್ದಳು. ಈಕೆ ಅಹಮದಾಬಾದ್ ನ ನಾಗರಿಕ ಆಸ್ಪತ್ರೆಗಳು ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಒಟ್ಟು 21 ಇಮೇಲ್ ಗಳನ್ನು ಕಳುಹಿಸಿದ್ದಕ್ಕಾಗಿ ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಆಕೆ ಇತರ 11 ರಾಜ್ಯಗಳಿಗೂ ಇದೇ ರೀತಿಯ ಇಮೇಲ್ ಗಳನ್ನು ಕಳುಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಇನ್ನು ಯಾವ ಕಾರಣಕ್ಕೆ ಈ ಬಾಂಬ್ ಬೆದರಿಕೆ ಹಾಕುತ್ತಿದ್ದಾಳೆ ಎಂದು ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕ್ ಕಾದಿತ್ತು, ಈಕೆಯ ಓನ್ ಸೈಡ್ ಲವ್ ಸ್ಟೋರಿ ಇದಕ್ಕೆಲ್ಲಾ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ರೆನೆ ಜೋಶಿಲ್ಡಾ ತನ್ನ ಸಹೋದ್ಯೋಗಿ ದಿವಿಜ್ ಪ್ರಭಾಕರ್ ಎಂಬಾತನ್ನು ಪ್ರೀತಿಸುತ್ತಿದ್ದಳು, ಅಲ್ಲದೆ ಆತನನ್ನು ಮದುವೆಯಾಗಲು ಮುಂದಾಗಿದ್ದಳು, ಆದರೆ ಆತ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಕಾನ್ಪರೇನ್ಸ್ ಮೀಟಿಂಗ್ ನಲ್ಲಿ ದಿವಿಜ್ ನ್ನು ಭೇಟಿಯಾಗಿದ್ದ ರೆನೆ ಜೋಶಿಲ್ಡಾ ಬೆಂಗಳೂರಿನಲ್ಲಿ ಆತನ ಭೇಟಿಯಾಗಿ ತಾನು ಪ್ರೀತಿಸುವುದಾಗಿ ತಿಳಿಸಿದ್ದಾಳೆ. ಈ ವೇಳೆ ದಿವಿಜ್ ಆಕೆಯ ಪ್ರೀತಿಯನ್ನುನಿರಾಕರಿಸಿದ್ದಾನೆ. ಇದು ಈಕೆಗೆ ದಿವಿಜ್ ಮೇಲೆ ಸಿಟ್ಟಿಗೆ ಕಾರಣವಾಗಿತ್ತು, ಬಳಿಕ ಈಕೆ ದಿವಿಜ್ ಜೊತೆ ಮದುವೆಯಾಗಿರುವ ರೀತಿ ಪೋಟೋಗಳನ್ನು ಸೃಷ್ಠಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಇದರಿಂದ ಬೇಸತ್ತ ದಿವಿಜ್ ಪ್ರಭಾಕರ್ ಸೈಬರ್ ಪೊಲೀಸರಿಗೆ ಕಂಪ್ಲೆಂಟ್ ಕೊಟ್ಟಿದ್ದ,

ಈ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ದಿವಿಜ್ ಅವರ ವಿವಾಹದ ಸುದ್ದಿ ಅವಳನ್ನು ಮತ್ತಷ್ಟು ಕೆರಳಿಸಿತು. ಫೆಬ್ರವರಿ ಮತ್ತು ಜೂನ್ 2025 ರ ನಡುವೆ, ಅವರು ಗುಜರಾತ್, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ 12 ರಾಜ್ಯಗಳಾದ್ಯಂತ ಶಾಲೆಗಳು, ಕ್ರೀಡಾಂಗಣಗಳು ಮತ್ತು ಆಸ್ಪತ್ರೆಗಳಿಗೆ ದಿವಿಜ್ ಅವರ ಗುರುತನ್ನು ಬಳಸಿಕೊಂಡು ಹಲವಾರು ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಈ ರಾಜ್ಯಗಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಸಿಂಘಾಲ್ ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *