ಮಂಗಳೂರು: ಷೇರು ವಹಿವಾಟು ನೆಪದಲ್ಲಿ ₹46.50 ಲಕ್ಷ ಆನ್‌ಲೈನ್ ವಂಚನೆ

ಮಂಗಳೂರು: ಷೇರು ಖರೀದಿ ಮಾಡಿ ಅನಂತರ ಮಾರಾಟ ಮಾಡಿದರೆ ಲಾಭಾಂಶ ಬರುತ್ತದೆ ಎಂದು ನಂಬಿಸಿ 46,50,022 ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ದೂರುದಾರರನ್ನು ವಾಟ್ಸ್‌ಆಯಪ್‌ನಲ್ಲಿ ಮೇ ಫೀಲ್ಡ್ ಟ್ರೇಡಿಂಗ್ ಎನ್ನುವ ಗ್ರೂಪ್‌ಗೆ ಯಾರೋ ಅಪರಿಚಿತರು ಸೇರಿಸಿದ್ದು, ಷೇರು ಮಾರುಕಟ್ಟೆಯಲ್ಲಿ ಸ್ಟಾಕ್ ಖರೀದಿ ಮಾಡಿ ಅನಂತರ ಮಾರಾಟ ಮಾಡಿದರೆ ಲಾಭಾಂಶ ಬರುತ್ತದೆ ಎಂದು ನಂಬಿಸಿದರು.

ಟ್ರೇಡಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಅವರು ಅಪರಿಚಿತರು ತಿಳಿಸಿದಂತೆ ಹಂತ ಹಂತವಾಗಿ 46,50,022 ರೂ. ಹೂಡಿಕೆ ಮಾಡಿದರು. ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಹೋದಾಗ ಸಾಧ್ಯವಾಗಿಲ್ಲ. ಈ ಬಗ್ಗೆ ಅಪರಿಚಿತ ವ್ಯಕ್ತಿ ಟಾಮ್ ಹ್ಯಾರಿಸ್ ಎಂಬಾತನಲ್ಲಿ ಕೇಳಿದಾಗ ಹಿಂಪಡೆಯಲು ಟ್ಯಾಕ್ಸ್ ಕಟ್ಟಬೇಕು ಎಂದು ತಿಳಿಸಿದನು. ಆಗ ತಾನು ಮೋಸ ಹೋಗಿರುವುದು ಅರಿವಾಗಿದೆ.
