Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

NEET ಅಂಕ ಕಡಿಮೆ ಗಳಿಸಿದ ಕೋಪ – ತಂದೆಯಿಂದ ಮಗಳ ಕ್ರೂರ ಹ*ತ್ಯೆ

Spread the love

ಸಾಂಗ್ಲಿ :ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್’ನಲ್ಲಿ ಕಡಿಮೆ ಅಂಕಗಳನ್ನ ಪಡೆದಿದ್ದಕ್ಕೆ ಕೋಪಗೊಂಡ ತಂದೆ ಮಗಳನ್ನ ಹಿಗ್ಗಾಮುಗ್ಗಾ ತಳಿಸಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.
ತಂದೆ ಕೋಪದಲ್ಲಿ ಮಗಳ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದು, ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾಳೆ.

ಬಳಿಕ ಮಗಳನ್ನ ಹೊಡೆಯುವುದನ್ನ ನಿಲ್ಲಿಸಿದ ತಂದೆ ಯೋಗ ದಿನದ ಕಾರ್ಯಕ್ರಮಕ್ಕೆ ಹೋಗಿದ್ದು, ಬಾಲಕಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದ ಈ ಕ್ರೂರ ಘಟನೆ ನಡೆದಿದ್ದು, ಮೃತಳ ತಂದೆಯನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಶಾಲೆಯ ಪ್ರಾಂಶುಪಾಲನಾಗಿ ಕೆಲಸ ಮಾಡುತ್ತಿದ್ದ ಎಂಬುದು ಗಮನಾರ್ಹ .

ಕಡಿಮೆ ರ್ಯಾಂಕ್ ಪಡೆದಿದ್ದಕ್ಕೆ ಕ್ರೂರ ದಾಳಿ.!
ಸಾಂಗ್ಲಿ ಜಿಲ್ಲೆಯ ಧೋಂಡಿರಾಮ್ ಭೋಸಲೆ ಶಾಲೆಯೊಂದರ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿರುವ ಧೋಂಡಿರಾಮ್ ಭೋಸಲೆ ಎನ್ನುವವರ ಮಗಳು 12ನೇ ತರಗತಿ ಪೂರ್ಣಗೊಳಿಸಿದ್ದಾಳೆ. ಇತ್ತೀಚೆಗೆ ಆಕೆ ನೀಟ್ ಪರೀಕ್ಷೆ ಬರೆದಿದ್ದು, ಆದರೆ, ಕಡಿಮೆ ಅಂಕಗಳನ್ನು ಗಳಿಸಿದ್ದರಿಂದ ಸೀಟು ಸಿಕ್ಕಿಲ್ಲ. ಇದರಿಂದಾಗಿ, ಧೋಂಡಿರಾಮ್ ತುಂಬಾ ಕೋಪಗೊಂಡಿದ್ದರು. ತನ್ನ ಮಗಳನ್ನು ಕೋಲಿನಿಂದ ತೀವ್ರವಾಗಿ ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು, ತನ್ನ ಶಾಲೆಯಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾನೆ. ಆತ ಮನೆಗೆ ಹಿಂದಿರುಗಿದಾಗ, ತನ್ನ ಮಗಳು ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನ ಕಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಬಾಲಕಿ ಈಗಾಗಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ದೃಢಪಡಿಸಿದರು. ಪೊಲೀಸರು ಧೋಂಡಿರಾಮ್ ಭೋಸಲೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *