ಪತನವಾದ ಏರ್ ಇಂಡಿಯಾ ವಿಮಾನ ಅವಶೇಷ ಸಾಗಿಸುವಾಗ ಅವಘಡ

ಅಹಮದಬಾದ್ :ಏರ್ ಇಂಡಿಯಾ ವಿಮಾನ ಘೋರ ದುರಂತಕ್ಕೀಡಾದ ಸ್ಥಳದಲ್ಲಿ ಇನ್ನೂ ಭೀಕರ ವಾತಾವರಣವಿದ್ದು, ವಿಮಾನದ ಅವಶೇಷಗಳನ್ನು ಒಂದೊಂದಾಗಿಯೇ ತೆರವು ಮಾಡಲಾಗುತ್ತಿದೆ. ವಿಮಾನದ ಬಾಲ ಸಾಗಾಟದ ವೇಳೆ ರವಿವಾರ(ಜೂ22) ಟ್ರಾಫಿಕ್ ಜಾಮ್ ಉಂಟಾಯಿತು.

ಟ್ರಕ್ ನಲ್ಲಿದ್ದ ವಿಮಾನದ ಬಾಲ ಮರದ ಕೊಂಬೆಗೆ ಢಿಕ್ಕಿ ಹೊಡೆದ ಬಳಿಕ ಕೆಲ ಹೊತ್ತು ಶಾಹಿಬಾಗ್‌ನಲ್ಲಿರುವ ಎಸಿಬಿ ಕಚೇರಿ ಬಳಿ ಈ ಘಟನೆ ನಡೆದಿದೆ.

ಅಪಘಾ*ತದ ನಂತರ, ಶಾಹಿಬಾಗ್ ದಫ್ನಾಲಾದಿಂದ ಕ್ಯಾಂಪ್ ಹನುಮಾನ್ ದೇವಸ್ಥಾನಕ್ಕೆ ಹೋಗುವ ರಸ್ತೆ ಸಂಚಾರ ನಿರ್ಬಂಧಿಸಿದ ಬಳಿಕ ಸಂಚಾರ ದಟ್ಟಣೆ ಕಂಡುಬಂದಿತು. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬಂದಿ ತತ್ ಕ್ಷಣ ಆಗಮಿಸಿ ಮರದಿಂದ ಬಾಲವನ್ನು ಬೇರ್ಪಡಿಸುವ ಕಾರ್ಯಾಚರಣೆ ನಡೆಸಿದರು.
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಮಾನದ ಅವಶೇಷಗಳನ್ನು ಅಪಘಾತ ಸ್ಥಳದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ವಿಶೇಷ ಹ್ಯಾಂಗರ್‌ಗೆ ಸ್ಥಳಾಂತರಿಸಿ ಪರಿಶೀಲನೆ ನಡೆಸುತ್ತಿದೆ.