Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪತ್ನಿಯ ಭಯದಿಂದ ಮನೆ ಬಿಟ್ಟು ಪರಾರಿಯಾದ ಪತಿ – ಬೇರೆ ಮನೆಗೆ ನುಗ್ಗಿದ ರಾದ್ಧಾಂತ

Spread the love

ಫ್ಲೋರಿಡಾ:ಪತ್ನಿ ಜೊತೆ ಜಗಳವಾದ 44 ವರ್ಷದ ವ್ಯಕ್ತಿ ಮನೆಗೆ ಹೋಗದೆ, ಲಾಕ್ ಮಾಡಿದ್ದ ಬೇರೆಯವರ ಮನೆಗೆ ನುಗ್ಗಿ ರಾದ್ಧಾಂತ ಮಾಡಿದ ವಿಚಿತ್ರ ಘಟನೆ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಜೋ ಎಂಬ ವ್ಯಕ್ತಿ ನಾಲ್ಕು ದಿನಗಳಿಂದ ಯಾರೂ ಇಲ್ಲದ ಮನೆಯಲ್ಲಿ ಅಡುಗೆ ಮಾಡಿ, ವಿಶ್ರಾಂತಿ ಪಡೆಯುತ್ತಿದ್ದ.

ಮನೆಯ ಒಡೆಯ ಇಲ್ಲದಾಗ್ಯೂ ಮನೆಯಲ್ಲಿ ಓಡಾಟ ಕಂಡ ಅಕ್ಕಪಕ್ಕದವರು ಪೊಲೀಸರಿಗೆ ತಿಳಿಸಿದಾಗಲೇ ಪ್ರಕರಣ ಬೆಳಕಿಗೆ ಬಂದಿದೆ. ನಾಲ್ಕಾರು ದಿನಗಳಿಂದ ಹೆಂಡ್ತಿಯ ಭಯಕ್ಕೆ ಮನೆಗೆ ಹೋಗಲಾಗದೆ, ಹೊರಗಡೆ ಇರಲಾಗದ, ಯಾರೂ ಇಲ್ಲದ ಮನೆಗೆ ನುಗ್ಗಿದ್ದ ಆಸಾಮಿ.

ಮನೆಯಲ್ಲಿ ಓಡಾಟ ಕಂಡ ಅಕ್ಕಪಕ್ಕದವರು ಪೊಲೀಸರಿಗೆ ತಿಳಿಸಿದರು. ಪೊಲೀಸರು ಬರುವಾಗ ಜೋ ಸ್ನಾನ ಮಾಡಿ, ಅಡುಗೆ ಮಾಡ್ತಾ ಇದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಪತ್ನಿ ಜೊತೆ ಜಗಳವಾದ್ದರಿಂದ ಮನೆಗೆ ಹೋಗದೆ, ಲಾಕ್ ಮಾಡಿದ್ದ ಮನೆಗೆ ನುಗ್ಗಿದ್ದಾನೆ. ಆ ಮನೆ ಯಾರದ್ದು ಅಂತಾನೂ ಪಾಪ ಜೋ ‘ಕುಮಾರನಿಗೆ’ ಗೊತ್ತಿರಲಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಜೋ ತನ್ನ ಪರಿಸ್ಥಿತಿ ಬಾಯಿಬಿಟ್ಟಿದ್ದಾನೆ. ಪತ್ನಿಯೊಂದಿಗೆ ಜಗಳವಾಗಿದ್ದು ಮನೆಗೆ ಹೋಗಲು ಇಷ್ಟವಿಲ್ಲ ಹೀಗಾಗಿ ಹಸಿವು ತಡೆಯಾಗದೇ ಯಾರದ್ದೋ ಮನೆಗೆ ನುಗ್ಗಿದ್ದೇನೆ. ಆದರೆ ಇದು ಯಾರ ಮನೆ ಎಂದು ನನಗೆ ತಿಳಿದಿಲ್ಲ ಎಂದಿದ್ದಾನೆ. ಸದ್ಯ ಬೇರೆಯವರ ಮನೆಗೆ ನುಗ್ಗಿ ಪತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *