Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಿಲಯನ್ಸ್‌ನ ಕ್ಯಾಂಪಾ ಎಂಟ್ರಿ: ಕೋಕಾ-ಕೋಲಾ, ಪೆಪ್ಸಿಗೆ ಸೆಡ್ಡು ಹೊಡೆಯಲು ಅಂಬಾನಿ ₹8,000 ಕೋಟಿ ಹೂಡಿಕೆ

Spread the love

The Coca-Cola and Pepsi Duopoly: The Secret Ingredients

ಮುಂಬಯಿ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ (ಆರ್‌ಸಿಪಿಎಲ್‌), ಭಾರತದ ತಂಪು ಪಾನೀಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಲು ಮಹತ್ವದ ನಿರ್ಧಾರಕ್ಕೆ ಬಂದಿದೆ. ಕಂಪನಿಯು ತನ್ನ ಕ್ಯಾಂಪಾ ಬ್ರ್ಯಾಂಡ್ ಸೇರಿದಂತೆ ಇತರೆ ಪಾನೀಯಗಳ ಉತ್ಪಾದನೆ ಮತ್ತು ವಿತರಣೆಯನ್ನು ಹೆಚ್ಚಿಸಲು, ಮುಂದಿನ 12-15 ತಿಂಗಳುಗಳಲ್ಲಿ 6,000 ದಿಂದ 8,000 ಕೋಟಿ ರೂ.ಗಳಷ್ಟು ಬೃಹತ್ ಹೂಡಿಕೆ ಮಾಡಲು ಸಜ್ಜಾಗಿದೆ.

ಈ ಮೂಲಕ ಕೋಕಾ-ಕೋಲಾ ಮತ್ತು ಪೆಪ್ಸಿಕೋದಂತಹ ದೈತ್ಯ ಕಂಪನಿಗಳ ವಿರುದ್ಧ ನೇರ ಸಮರ ಸಾರಿದೆ. ಅಲ್ಲದೆ ಕಡಿಮೆ ಬೆಲೆಯ ಸ್ಥಳೀಯ ಪಾನೀಯ ಉತ್ಪನ್ನಗಳಿಗೂ ಸ್ಪರ್ಧೆಯೊಡ್ಡಲು ನಿರ್ಧರಿಸಿದೆ. ಈ ಯೋಜನೆಯ ಭಾಗವಾಗಿ, ದೇಶಾದ್ಯಂತ 10 ರಿಂದ 12 ಹೊಸ ಉತ್ಪಾದನಾ ಘಟಕಗಳನ್ನು (ಗ್ರೀನ್‌ಫೀಲ್ಡ್ ಮತ್ತು ಕೋ-ಪ್ಯಾಕಿಂಗ್) ಸ್ಥಾಪಿಸಲು ತೀರ್ಮಾನಿಸಿದೆ. ಈ ಮೂಲಕ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲು ಅಂಬಾನಿ ಕಂಪನಿ ಉದ್ದೇಶಿಸಿದೆ.

ಈಗಾಗಲೇ ಕಂಪನಿ 18 ಘಟಕಗಳನ್ನು ಹೊಂದಿದ್ದು, ಇದೀಗ ದೇಶದ ಮೂಲೆ ಮೂಲೆಗೂ ತನ್ನ ಉತ್ಪನ್ನಗಳನ್ನು ತಲುಪಿಸಲು ಹೊರಟಿದೆ. ಇದಕ್ಕಾಗಿ ಈಶಾನ್ಯ ಭಾರತದಲ್ಲಿ ಜೆರಿಕೊ ಫುಡ್ಸ್ ಆಂಡ್‌ ಡ್ರಿಂಕ್ಸ್‌ ಸಹಭಾಗಿತ್ವದಲ್ಲಿ ಗುವಾಹಟಿಯಲ್ಲಿ ತನ್ನ ಘಟಕವನ್ನು ಆರಂಭಿಸಿದೆ. ಇದಲ್ಲದೆ ಕಂಪನಿಯು ಬಿಹಾರದಲ್ಲಿಯೂ ಒಂದು ಘಟಕವನ್ನು ಆರಂಭಿಸುತ್ತಿದೆ.

ಆರ್‌ಸಿಪಿಎಲ್‌ನ ಪಾನೀಯ ಶ್ರೇಣಿಯಲ್ಲಿ ಕ್ಯಾಂಪಾ ಕೋಲಾ, ಆರೆಂಜ್, ಲೈಮ್, ಸೊಸ್ಯೊ, ಸನ್ ಕ್ರಷ್ ಜ್ಯೂಸ್, ‘ಸ್ಪಿನ್ನರ್’ ಸ್ಪೋರ್ಟ್ಸ್ ಡ್ರಿಂಕ್ ಮತ್ತು ‘ರಾಸ್ಕಿಕ್’ ಹೈಡ್ರೇಶನ್ ಬ್ರ್ಯಾಂಡ್‌ಗಳು ಸೇರಿವೆ. ಇದರಲ್ಲಿ ಸ್ಪಿನ್ನರ್‌ ಅನ್ನು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರೊಂದಿಗೆ ಸೇರಿ ರೂಪಿಸಲಾಗಿದೆ.

ರಿಲಯನ್ಸ್‌ ತನ್ನ ಆಕ್ರಮಣಕಾರಿ ಬೆಲೆ ನಿಗದಿ ತಂತ್ರವನ್ನು ಇಲ್ಲೂ ಜಾರಿಗೆ ತಂದಿದ್ದು ‘ಸ್ಪಿನ್ನರ್’ ಪಾನೀಯವನ್ನು ಕೇವಲ 10 ರೂ.ಗೆ ಬಿಡುಗಡೆ ಮಾಡಿದೆ. ಇದು ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳಿಗಿಂತ ಅರ್ಧದಷ್ಟು ಕಡಿಮೆ ಎಂಬುದು ಗಮನಾರ್ಹ.

ಕಳೆದ ಹಣಕಾಸು ವರ್ಷದಲ್ಲಿ ಆರ್‌ಸಿಪಿಎಲ್‌ 11,500 ಕೋಟಿ ರೂ. ಆದಾಯ ಗಳಿಸಿದ್ದು, ಇದರಲ್ಲಿ ಕ್ಯಾಂಪಾ ಮತ್ತು ಇಂಡಿಪೆಂಡೆನ್ಸ್ ಬ್ರ್ಯಾಂಡ್‌ಗಳ ಪಾಲೇ ತಲಾ 1,000 ಕೋಟಿ ರೂ. ಇದೆ. ಈಗಾಗಲೇ, ಕ್ಯಾಂಪಾ ತನ್ನ ಲಭ್ಯವಿರುವ ಪ್ರದೇಶಗಳಲ್ಲಿ ಎರಡಂಕಿಯ ಮಾರುಕಟ್ಟೆ ಪಾಲು ಗಳಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ಮಾರ್ಚ್ 2026 ರ ವೇಳೆಗೆ ಪಾನೀಯ ವಿಭಾಗದಲ್ಲಿ ದೇಶದ ಶೇ. 70ರಷ್ಟು ಭಾಗವನ್ನು ತಲುಪುವ ಗುರಿಯನ್ನು ಅಂಬಾನಿ ಕಂಪನಿ ಹಾಕಿಕೊಂಡಿದೆ.


Spread the love
Share:

administrator

Leave a Reply

Your email address will not be published. Required fields are marked *