Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಮೀನಿಗೆ ದಾರಿ ವಿವಾದ: ನೆರೆಯ ಭೂಮಾಲೀಕ ದಾರಿ ನೀಡಲು ನಿರಾಕರಿಸಿದರೆ ಕಾನೂನು ಏನು ಹೇಳುತ್ತದೆ? ಇಲ್ಲಿದೆ ಪರಿಹಾರ ಮಾರ್ಗ!

Spread the love

The Importance of Land Access - AcrePro

ದಾರಿಗೆ ಬೇಲಿ ಹಾಕುವಂತಹದ್ದು, ನನ್ನ ಜಮೀನಿನ ಮೂಲಕ ಆತ ಅವನ ಜಮೀನಿಗೆ (Farmland) ಹೋಗೋದೇ ಬೇಡ ಎಂದು ಅಡ್ಡಲಾಗಿ ಬೇಲಿ ಹಾಕಿ ಕೂರುವ ಘಟನೆಗಳು ಹಳ್ಳಿಗಳ ಕಡೆಗಳಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಕೆಲವರಿಗೆ ಇನ್ನೊಬ್ಬರ ಜಮೀನನ್ನು ದಾಟಿಯೇ ತಮ್ಮ ಜಮೀನಿಗೆ ಹೋಗಬೇಕಾದ ಪರಿಸ್ಥಿತಿ ಇರುತ್ತದೆ.

ಇಂತಹ ಸಂದರ್ಭದಲ್ಲಿ ಕೆಲವರು ದ್ವೇಷ, ವೈಷಮ್ಯದ ಕಾರಣದಿಂದ ನಮ್ಮ ಜಮೀನಿನ ಮೂಲಕ ಯಾರು ಹೋಗ್ಬಾರ್ದು ಎಂದು ಹೋಗೋ ದಾರಿಗೆ ಅಡ್ಡಲಾಗಿ ಬೇಲಿ ಹಾಕ್ತಾರೆ. ಇದರಿಂದ ಕೃಷಿ ಕಾಯಕದಲ್ಲಿ ತೊಡಗಿರುವ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂತಹ ವ್ಯಾಜ್ಯಗಳು ಕೋರ್ಟ್‌, ಠಾಣೆ ಮೆಟ್ಟಿಲೇರಿದ ಅನೇಕ ಪ್ರಕರಣಗಳು ಕೂಡಾ ನಡೆದಿದ್ದುಂಟು. ನಿಮಗೆ ಅಥವಾ ನಿಮ್ಮ ಊರಿನಲ್ಲಿ ಯಾರಿಗಾದರೂ ಇಂತಹ ಸಮಸ್ಯೆ ಎದುರಾಗಿದೆಯೇ? (if denied access to own farmland) ಹಾಗಿದ್ರೆ ಜಾಗಕ್ಕೆ ಸಂಬಂಧಪಟ್ಟ ಇಂತಹ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು, ಕಾನೂನಿನಲ್ಲಿ ಈ ಸಮಸ್ಯೆಗೆ ಏನು ಪರಿಹಾರವಿದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯಿರಿ.

ಈ ವ್ಯಾಜ್ಯಗಳ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತದೆ?

ಕೆಲವೊಮ್ಮೆ ಒಬ್ಬ ರೈತ ಪಕ್ಕದ ಕೃಷಿ ಭೂಮಿಯ ರೈತನಿಗೆ ತನ್ನ ಕೃಷಿ ಭೂಮಿಯ ಮೂಲಕ ಹೋಗಲು ದಾರಿ ಮಾಡಿಕೊಡುವುದಿಲ್ಲ. ಈ ಸಣ್ಣ ವಿಚಾರವಾಗಿ ವ್ಯಾಜ್ಯಗಳು ತಲೆದೋರಿದ ಸಾಕಷ್ಟು ಘಟನೆಗಳು ನಡೆದಿವೆ. ಇಂತಹ ವ್ಯಾಜ್ಯಗಳ ಬಗ್ಗೆ ಕಾನೂನು ಏನು ಹೇಳುತ್ತೇ ಎಂದು ನೋಡುವುದಾದರೆ, 1882 ಇಂಡಿಯನ್‌ ಈಸ್ಮೆಂಟ್ಸ್ ಕಾಯ್ದೆಯ ಪ್ರಕಾರ, “ನಿಮ್ಮ ಕೃಷಿ ಭೂಮಿಗೆ ಪ್ರವೇಶಿಸಲು ಬೇರೆ ಯಾವುದೇ ಸಮಂಜಸವಾದ ದಾರಿಯಿಲ್ಲದಿದ್ದರೆ, ನೆರೆಯ ಕೃಷಿ ಭೂಮಿ ಮಾಲೀಕ ನಿಮಗೆ ಕಾನೂನುಬದ್ಧವಾಗಿ ಮಾರ್ಗವನ್ನು ಜವಬ್ದಾರಿಯನ್ನು ಹೊಂದಿರುತ್ತಾರೆ.” ಅಂದರೆ ಅವರು ನಿಮಗೆ ಕೃಷಿ ಭೂಮಿಗೆ ಹೋಗಲು ದಾರಿ ಕೊಡಲೇಬೇಕು.

ದಾರಿ ಕೊಡಲೇಬೇಕು: 1882 ರ ಇಂಡಿಯನ್‌ ಈಸ್ಮೆಂಟ್ಸ್‌ ಕಾಯ್ದೆಯು ‌ʼನಿಮ್ಮ ಕೃಷಿ ಭೂಮಿಗೆ ಪ್ರವೇಶಿಸಲು ಬೇರೆ ಯಾವುದೇ ಸಮಂಜಸವಾದ ದಾರಿ ಇಲ್ಲದಿದ್ದರೆ, ಪಕ್ಕದ ಭೂಮಾಲೀಕರು ನಿಮಗೆ ಅವರ ಜಮೀನಿನ ಮೂಲಕ ಹೋಗಲು ಅವಕಾಶ ನೀಡಬೇಕುʼ ಎಂದು ಹೇಳಿದೆ. ಒಂದು ವೇಳೆ, ನೀವು ಅವರ ಜಾಗದಲ್ಲಿ ಹೋಗುವುದನ್ನು ಅವರು ತಡೆದರೆ ನೀವು ಕಾನೂನು ಕ್ರಮ ತೆಗೆದುಕೊಳ್ಳಬಹುದು.

ಅಸ್ತಿತ್ವದಲ್ಲಿರುವ ಮಾರ್ಗವನ್ನು ಮುಚ್ಚಿದರೆ: ಒಂದು ವೇಳೆ ನಿಮ್ಮ ಕೃಷಿ ಭೂಮಿಗೆ ಹೋಗುವ ದಾರಿ ಅಥವಾ ರಸ್ತೆಯನ್ನು ಮುಚ್ಚಿದರೆ, ಅದಕ್ಕೆ ಬೇಲಿ ಹಾಕಿದರು ಎಂದಾದ್ರೆ ನೀವು ಆ ಸಂದರ್ಭದಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಬಹುದು. ನ್ಯಾಯಾಲಯದಲ್ಲಿ ಈ ದಾರಿಯನ್ನೇ ಹಿಂದೆ ನಿಯಮಿತವಾಗಿ ಬಳಸಲಾಗುತ್ತಿತ್ತು ಎಂದು ನೀವು ಸಾಬೀತುಪಡಿಸಿದರೆ, ನ್ಯಾಯಾಲಯವು ಅದನ್ನು ಮತ್ತೆ ತೆರೆಯಲು ಆದೇಶಿಸಬಹುದು.

ಹೊಸ ರಸ್ತೆಯನ್ನು ನಿರ್ಮಿಸುವ ಹಕ್ಕು: ನಿಮ್ಮ ಕೃಷಿ ಭೂಮಿಗೆ ಹೋಗಲು ಯಾವ ದಾರಿಯೂ ಇಲ್ಲ ಎಂದಾದ್ರೆ, ಬಾಡಿಗೆ ಕಾಯ್ದೆಯ ಸೆಕ್ಷನ್ 251 ರ ಅಡಿಯಲ್ಲಿ, ನಿಮ್ಮ ಕೃಷಿಭೂಮಿಗೆ ಹೊಸ ಪ್ರವೇಶ ರಸ್ತೆಯನ್ನು ನಿರ್ಮಿಸಲು ನೀವು ಅಧಿಕೃತ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು.

ಇಂತಹ ಸಮಸ್ಯೆಗಳು ಎದುರಾದಾಗ ಮೊದಲು ಏನು ಮಾಡಬೇಕು?

ಹಂತ 1, ಮಾತುಕತೆ: ಪಕ್ಕದ ಕೃಷಿ ಭೂಮಿ ಮಾಲೀಕ, ನಿಮ್ಮ ಜಮೀನಿಗೆ ಹೋಗುವ ದಾರಿಯನ್ನು ಮುಚ್ಚಿದ್ರೂ ಎಂದಾದ್ರೆ ಮೊದಲಿಗೆ ನೀವು ಶಾಂತಿಯುತವಾಗಿ ಮಾತುಕತೆ ನಡೆಸಿ. ಜೊತೆಗೆ ನಿಮಗಿರುವ ಕಾನೂನು ಸಹಾಯದ ಬಗ್ಗೆ ತಿಳಿಸಿ, ವಿವಾದವನ್ನು ಶಾಂತ ರೀತಿಯಲ್ಲಿ ಪರಿಹರಿಸಬಹುದು.

ಹಂತ 2, ತಹಶೀಲ್ದಾರ್‌ಗೆ ದೂರು ಸಲ್ಲಿಸಿ: ಮಾತುಕತೆ ವಿಫಲವಾದರೆ, ನಿಮ್ಮ ವ್ಯಾಪ್ತಿಯ ತಹಶೀಲ್ದಾರ್‌ಗೆ ಲಿಖಿತ ದೂರು ಸಲ್ಲಿಸಿ. ನಿಮ್ಮ ಜಮೀನಿನ ದಾಖಲೆಗಳು ಮತ್ತು ಸಮಸ್ಯೆಯ ಸಂಪೂರ್ಣ ವಿವರಗಳನ್ನು ನೀಡಿ. ತಹಶೀಲ್ದಾರ್ ತನಿಖೆ ನಡೆಸಿ, ವಿಚಾರಣೆಗೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ.

ಹಂತ 3, ನ್ಯಾಯಾಲಯವನ್ನು ಸಂಪರ್ಕಿಸಿ: ತಹಶೀಲ್ದಾರ್‌ ಬಳಿ ಹೋದ್ರೂ ಜಾಗಕ್ಕೆ ಸಂಬಂಧಪಟ್ಟ ವ್ಯಾಜ್ಯ ಬಗೆಹರಿಯದಿದ್ದರೆ, ವಕೀಲರನ್ನು ಸಂಪರ್ಕಿಸಿ ಕಾನೂನು ರೀತಿಯಲ್ಲಿ ಹೋರಾಡಿ, ನ್ಯಾಯವನ್ನು ಪಡೆಯಿರಿ.


Spread the love
Share:

administrator

Leave a Reply

Your email address will not be published. Required fields are marked *