Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

KSRTC ಡಿಪೋಗೆ ಇಂಧನ ಪೂರೈಕೆ ಹೆಸರಿನಲ್ಲಿ ಕಳ್ಳತನ – ಮೆಕ್ಯಾನಿಕ್ ಬಯಲಿಗೆಳೆದ ಸತ್ಯ

Spread the love

ಮಂಡ್ಯ:ಮಂಡ್ಯದಲ್ಲಿ ‘KSRTC’ ಡಿಪೋಗೆ ಇಂಧನ ಪೂರೈಕೆಯಲ್ಲಿ ಸದ್ದಿಲ್ಲದೆ ಟ್ಯಾಂಕರ್ ಮೂಲಕ ಇಂಧನ ಕಳ್ಳತನ ನಡೆಸಲಾಗುತ್ತಿದೆ. ಈ ಕುರಿತು ಇಂಧನ ಕಳ್ಳತನದ ಜಾಲವನ್ನು ಪಾಂಡವಪುರದ KSRTC ಘಟಕದ ಮ್ಯಾಕಾನಿಕ್ ಬಯಲಿಗೆಳೆದಿದ್ದಾನೆ. ಹೌದು ಮಂಡ್ಯದಲ್ಲಿ ಈ ಒಂದು ಇಂಧನ ಕಳ್ಳತನದ ಬಗ್ಗೆ ಮೆಕ್ಯಾನಿಕ್ ವಿಡಿಯೋ ಮೂಲಕ ಬಯಲಿಗೆ ಎಳೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ KSRTC ಘಟಕಕ್ಕೆ ಟ್ಯಾಂಕರ್ ನಿಂದ ಇಂಧನ ಕಳ್ಳತನ ಪತ್ತೆ ಹಚ್ತಿರೋ ವಿಡಿಯೋ ವೈರಲ್ ಆಗಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ KSRTC ಡಿಪೋದಲ್ಲಿ ಈ ಒಂದು ಘಟನೆ ನಡೆದಿದೆ. ಟ್ಯಾಂಕರ್ ಒಳಭಾಗದಿಂದ ನಿಂದ ಫ್ಲೆಕ್ಸಿಬಲ್ ಪೈಪ್ ಮೂಲಕ ಇಂಧನ ಕಳ್ಳತನ ಮಾಡ್ತಿದ್ದ ಬಗ್ಗೆ ಮೆಕ್ಯಾನಿಕ್ ವಿಡಿಯೋ ಮೂಲಕ ಕಳ್ಳತನ ಬಹಿರಂಗಗೊಳಿಸಿದ್ದಾನೆ.
ಹಾಸನದ HPCL ಘಟಕದಿಂದ ಟ್ಯಾಂಕರ್ ಮೂಲಕ ಡಿಪೋಗಳಿಗೆ ಇಂಧನ ಸರಬರಾಜು ಮಾಡಲಾಗುತ್ತಿತ್ತು.

TN-02 BH 3039 ಟ್ಯಾಂಕರ್ ನಲ್ಲಿ ಪ್ರತಿ ಬಾರಿ ಅನ್ಲೋಡ್ ನಲ್ಲಿ ವೇಳೆ 150 ರಿಂದ 200 ಲೀಟರ್ ಇಂಧನ ಕಡಿಮೆ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಅನುಮಾನಗೊಂಡು ಟ್ಯಾಂಕರ್ ರ್ಯಾಂಪಿಕ್ ಗೆ ಕಳಿಸಿ ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ವೇಳೆ ಟ್ಯಾಂಕರ್ ನಾ 4 ನೇ ಕಾಂಪಾರ್ಟ್ಮೆಂಟ್ ಗೆ ಅನಧಿಕೃತವಾಗಿ ಫೆಕ್ಸಿಬಲ್ ಅಳವಡಿಕೆ ಪತ್ತೆ‌‌ಯಾಗಿದೆ.ಆ ಪೈಪ್ ಮೂಲಕ ಇಂಧನ ಕಳ್ಳತನ ಮಾಡ್ತಿರೋದನ್ನ ಪಂಡವಪುರದ KSRTC ಡಿಪೋ ಘಟಕದ ಮ್ಯಾಕಾನಿಕ್ ಪತ್ತೆ ಮಾಡಿದ್ದಾನೆ. ಈ ವೇಳೆ ಚಾಲಕನಿಗೆ ತರಾಟೆ ತೆಗೆದುಕೊಂಡಿದ್ದು, ಮೇಲಾಧಿಕಾರಿಗಳಿಗೆ ಇಂಧನ ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದಾನೆ.

ಆದರೆ ಇಂಧನ ಕಳ್ಳತನ ಮಾಹಿತಿ ಮುಚ್ಚಿಟ್ಟು ಮಾಹಿತಿ ನೀಡದೆ KSRTC ಡಿಪೋ ಅಧಿಕಾರಿಗಳು ಕಳ್ಳಾಟ ನಡೆಸಿದ್ದಾರೆ.ಘಟಕದ ಆವರಣದಲ್ಲೆ ಟ್ಯಾಂಕರ್ ಲಾರಿ ನಿಲ್ಲಿಸಿಕೊಂಡು ಪ್ರಕರಣದ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಕೇಳಿದ್ರೆ ಅಧಿಕಾರಿಗಳಿಂದ ಉಡಾಫೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಹಾಗಾಗಿ ಟ್ಯಾಂಕರ್ ಗಳಲ್ಲಿ ನಡೆಯೋ ಇಂಧನ ಕಳ್ಳತನ ಜಾಲದ ಜೊತೆ ಡಿಪೋ ಮ್ಯಾನೇಜರ್ ಕೈ ಜೋಡಿಸಿದ್ದಾರಾ? ಎನ್ನುವ ಅನುಮಾನ ದಟ್ಟವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *