Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನಲ್ಲಿ ಮರ ಬಿದ್ದು ದುರಂತ: ಪ್ರಜ್ಞಾಹೀನನಾಗಿದ್ದ ಯುವಕ ಅಕ್ಷಯ್ ಸಾವು – ಹುಸಿಗೊಂಡ ಬದುಕುಳಿಯುವ ಭರವಸೆ

Spread the love

ಅಜ್ಜಿ - ತಾತನಿಗೆ ಆಶ್ರಯವಾಗಿದ್ದ ಮೊಮ್ಮಗ ಕಡೆಗೂ ಬದುಕಲಿಲ್ಲ : ಮರ ಬಿದ್ದಿದ್ದಕ್ಕೆ ಹೊಣೆ ಯಾರು..?

ಬೆಂಗಳೂರು; ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಒಂದು ಕೆಟ್ಟ ಘಟನೆ ನಡೆದಿತ್ತು. ಯುವಕನೊಬ್ಬನ ಮೇಲೆ ಮರದ ಕೊಂಬೆಯೊಂದು ಬಿದ್ದಿತ್ತು. ಇದರಿಂದ ಅಕ್ಷಯ್ ಎಂಬಾತ ಸಂಪೂರ್ಣವಾಗಿ ಪ್ರಜ್ಞಾಹೀನನಾಗಿದ್ದ. ಬದುಕಿ ಬರಬಹುದೆಂಬ ನಿರೀಕ್ಷೆಯನ್ನ ಇಟ್ಟುಕೊಂಡಿದ್ದರು. ಆದರೆ ಆ ಭರವಸೆ ಹುಸಿಯಾಗಿದೆ.

ಅಕ್ಷಯ್ ಬದುಕಿ ಬರಲೇ ಇಲ್ಲ. ಅಜ್ಜಿ ತಾತನಿಗೆ ಆಸರೆಯಾಗಿದ್ದ ಮೊಮ್ಮಗ ಇನ್ನಿಲ್ಲವಾಗಿದ್ದಾನೆ.

ಜೂನ್ 15ನೇ ಭಾನುವಾರ ಅಕ್ಷಯ್ ಅವರ ತಂದೆ ಹುಟ್ಟುಹಬ್ಬವಿತ್ತು. ತಂದೆಗೆ ಮಟನ್ ಇಷ್ಟವಿದ್ದ ಕಾರಣ, ಅಕ್ಷಯ್ ಮಧ್ಯಾಹ್ನದ ಸಮಯದಲ್ಲಿ ಮಟನ್ ತರುವುದಕ್ಕೆಂದು ಹೋಗಿದ್ದರು. ಈ ವೇಳೆ ಬ್ರಹ್ಮ ಮಂದಿರದ ಬಳಿ ಗಾಡಿಯಲ್ಲಿ ಹೋಗುವಾಗ ಮರದ ಕೊಂಬೆ ತಲೆ ಮೇಲೆ ಬಿದ್ದಿದೆ. ತಕ್ಷಣ ಪ್ರಜ್ಞೆ ತಪ್ಪಿ ಅಕ್ಷಯ್ ನೆಲದ ಮೇಲೆ ಬಿದ್ದಿದ್ದಾರೆ. ಅಲ್ಲಿಯೇ ಇದ್ದ ಸ್ಥಳೀಯರು ತಕ್ಷಣ ಪ್ರಶಾಂತ್ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಪ್ರಶಾಂತ್ ತಲೆಯಲ್ಲಿ ರಕ್ತ ನಿಲ್ಲಲೇ ಇಲ್ಲ. ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಸಾವು – ಬದುಕಿನ ನಡುವೆ ಅಕ್ಷಯ್ ಹೋರಾಟ ಮಾಡ್ತಾ ಇದ್ದರು. ಅಕ್ಷಯ್ ಮೂಲತಃ ಬನಶಂಕರಿಯ ಶ್ರೀನಗರದ ನಿವಾಸಿ. ರಾಜಾಜಿನಗರದ ಖಾಸಗಿ ಕಂಪನಿಯೊಂದರಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡ್ತಾ ಇದ್ದರು. ಇಡೀ ಕುಟುಂಬ ಅಕ್ಷಯ್ ಅವರ ಮೇಲೆ ಅವಲಂಬಿತವಾಗಿತ್ತು. ಇದೀಗ ಅಕ್ಷಯ್ ಜೀವಂತವಾಗಿಲ್ಲ. ಕುಟುಂಬಕ್ಕೆ ನೆಲೆ ಯಾರೂ ಎಂಬುದೇ ಇಡೀ ಕುಟುಂಬದ ನೋವಾಗಿದೆ. ದಾರಿಯಲ್ಲಿ ಹೋಗ್ತಾ ಇದ್ದವನ ಮೇಲೆ ಮರದ ಕೊಂಬೆ ಬಿದ್ದಿದ್ದಕ್ಕೆ ಹೊಣೆಯಾದರೂ ಯಾರು ಎಂಬ ಪ್ರಶ್ನೆ ಕಾಡುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *