Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಾಟಮಂತ್ರದ ನೆಪದಲ್ಲಿ ಮಹಿಳೆಯ ಹತ್ಯೆ – 9 ತಿಂಗಳ ನಂತರ ನಿಗೂಢ ನಾಪತ್ತೆ ಪ್ರಕರಣ ಭೇದಿಸಿದ ಪೊಲೀಸರು

Spread the love

25,600+ Black Magic Ritual Stock Photos, Pictures & Royalty-Free Images -  iStock

ತಮಿಳುನಾಡು; ವಿಚ್ಛೇದಿತ ಗಂಡನನ್ನು ಮತ್ತೆ ಭೇಟಿ ಮಾಡಬೇಕು ಎಂದು ಹೊರಟವಳು 9 ತಿಂಗಳಿಂದೆ ನಾಪತ್ತೆಯಾಗಿದ್ದಳು, ನಾಪತ್ತೆ ದೂರು ದಾಖಲಿಸಿಕೊಂಡ ಪೊಲೀಸರು ಕೊನೆಗೂ ಕೇಸ್ ಬೇಧಿಸಿದ್ದು ಇದೀಗ ಆಕೆ ಆದಾಗಲೇ ಕೊಲೆಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಹೌದು, ಶಿವಲಿಂಗದುರೈ ಅವರ ಪುತ್ರಿ ಕಾಯಲ್ವಿಳಿ (28) ನಾಪತ್ತೆಯಾಗಿದ್ದ ಮೃತೆ.

ತಮಿಳುನಾಡಿನ ನೆಲ್ಲೈ ಜಿಲ್ಲೆಯ ಪಣಗುಡಿ ಬಳಿಯ ಪಲವೂರು ಮದನಪಿಳ್ಳೈ ಧರ್ಮಂ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಏನು..?

ವಿವಾಹಿತೆಯಾಗಿದ್ದ ಕಾಯಲ್ವಿಳಿ ತನ್ನ ಗಂಡನಿಂದ ವಿಚ್ಛೇದನ ಪಡೆದು ತನ್ನ ತಂದೆ-ತಾಯಿಯ ಜತೆ ವಾಸಿಸುತ್ತಿದ್ದಳು. ಕಳೆದ ವರ್ಷ(2024) ಅ.5ರಂದು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದಳು.ಈ ಹಿನ್ನೆಲೆ ಆಕೆ ತಂದೆ ನಾಪತ್ತೆಯಾದ ವಾರದೊಳಗೆ ದೂರು ನೀಡಿದ್ದರು.

2024ರ ಫೆಬ್ರವರಿ ಕಾಯಲ್ವಿ ತಮ್ಮ ಪತಿಯಿಂದ ಬೇರ್ಪಟ್ಟಿದ್ದರು. ತಮ್ಮ ಪತಿಯನ್ನು ಮತ್ತೆ ಒಂದುಗೂಡಿಸಲು ಪ್ರಾರ್ಥಿಸಲು ಹಲವಾರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ತನ್ನ ಪತಿಯೊಂದಿಗೆ ಮತ್ತೆ ಒಂದಾಗಲು ಮಂತ್ರ ತಿಳಿದಿರುವ ಯಾರಾದರೂ ಇದ್ದಾರೆಯೇ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ತಿಳಿದುಕೊಂಡ ಮಾಯಾಂಡಿ ರಾಜ ಎಂಬಾತ ಈ ವಿಷಯದ ಬಗ್ಗೆ ಮೊದಲು ಕಾಯಲ್ವಿಯನ್ನು ಸಂಪರ್ಕಿಸಿದ್ದಾನೆ. ಮಾಟಮಂತ್ರ ಮಾಡುವ ಶಿವ ಸ್ವಾಮಿ ಎಂಬಾತನ ಬಳಿಗೆ ಕರೆದೊಯ್ದು ಅವಳಿಂದ ಹಣವನ್ನು ಕಂತುಗಳ ರೂಪದಲ್ಲಿ ಒಟ್ಟು 5 ಲಕ್ಷ ರೂ.ಗಳನ್ನು ಪಡೆದಿದ್ದಾರೆ. ಬಳಿಕ ಇವರು ಮೋಸ ಮಾಡುತ್ತಿದ್ದಾರೆ ಎಂದು ಅರೆತ ಆಕೆ ಹಣ ಮರುಪಾವತಿಸುವಂತೆ ಒತ್ತಾಯಿಸಿದ್ದಾಳೆ.

ಹಣ ಮರುಪಾವತಿಸುವುದಾಗಿ ಹೇಳಿ ಆಕೆಯನ್ನು ನಿರ್ಜನಪ್ರದೇಶದಲ್ಲಿ ಕರೆಯಿಸಿದ ಮಾಯಾಂಡಿ ರಾಜ, ಶಿವ ಸ್ವಾಮಿ ಹಾಗೂ ಇಬ್ಬರು ಸಹಚರರು ಸೇರಿ ಆಕೆಯ ಬಳಿಯಿದ್ದ 7 ತೊಲ ಬಂಗಾರದ ಆಭರಣ ಕಿತ್ತುಕೊಂಡು ಕೊಲೆ ಮಾಡಿ ಕಾಲುವೆಗೆ ಹಾಕಿದ್ದಾರೆ. ಬಳಿಕ ಎಂದಿನಂತೆ ಜೀವನ ನಡೆಸಿದ್ದಾರೆ.

ಪ್ರಕರಣ ಭೇದಿಸಿದ್ದೇಗೆ..?

ಕಣ್ಗಾವಲು ಕ್ಯಾಮೆರಾದ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಿದಾಗ, ಕನ್ಯಾಕುಮಾರಿ ಜಿಲ್ಲೆಯ ಕೊಟ್ಟಾರಂ ಪ್ರದೇಶದ ಶಿವ ಸ್ವಾಮಿ ಎಂಬ ಅರ್ಚಕ ಕಾಯಲ್ವಿಳಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿರುವುದು ಬಹಿರಂಗವಾಯಿತು. ಇದಾದ ನಂತರ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ. ಆತನ ಸಹಚರರೊಂದಿಗೆ ಸೇರಿ ಕಾಯಲ್ವಿಳಿಳ ಕುತ್ತಿಗೆಯಲ್ಲಿದ್ದ 7 ತೊಲ ಚಿನ್ನದ ಸರಕ್ಕಾಗಿ ಆಕೆಯನ್ನು ಕತ್ತು ಹಿಸುಕಿ ಕೊಂದು 80 ಅಡಿ ಉದ್ದದ ಕೋಯಾ ಮಹಾದೇವಿ ಕಾಲುವೆಗೆ ಎಸೆದಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *