Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಷ್ಯಾ ಸೆರೆಯಲ್ಲಿ 3 ವರ್ಷ: ಉಕ್ರೇನ್ ಸೈನಿಕನ ವೈರಲ್ ಫೋಟೋ

Spread the love

UKRAINE: 3 ವರ್ಷ ರಷ್ಯಾದ ಸೆರೆಯಲ್ಲಿದ್ದ ಉಕ್ರೇನ್‌ನ ಸೈನಿಕ- ಮೊದಲ, ನಂತರದ ಫೋಟೋ ವೈರಲ್‌!

ಕೈವ್:‌ ಉಕ್ರೇನ್‌ ಹಾಗೂ ರಷ್ಯಾ ನಡುವಿನ ಯುದ್ಧ ಇನ್ನೂ ಮುಗಿದಿಲ್ಲವಾದರೂ ಉಭಯ ರಾಷ್ಟ್ರಗಳು ನಿಯಮಿತವಾಗಿ ತಮ್ಮ ಒತ್ತೆಯಾಳುಗಳು ಹಾಗೂ ಸೆರೆಯಲ್ಲಿರುವವರನ್ನು ವಿನಿಮಯ ಮಡುಕೊಳ್ಳುತ್ತಿದೆ. ಈ ನಡುವೆ ಕಳೆದ ಮೂರು ವರ್ಷಗಳಿಂದ ರಷ್ಯಾದ ಸೆರೆಯಲ್ಲಿದ್ದ ಉಕ್ರೇನ್‌ನ ಸೈನಿಕರೊಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಉಭಯ ರಾಷ್ಟ್ರಗಳ ದ್ವೇಷದ ಕರಾಳತೆಯನ್ನು ಎತ್ತಿ ತೋರಿಸಿದೆ.

ಹೌದು, ಉಕ್ರೇನಿನ ಸೈನಿಕ ಒಲೆಕ್ಸಾಂಡರ್ ಸ್ಟ್ರಾಫನ್ ಅವರನ್ನು 2022 ರಲ್ಲಿ ರಷ್ಯಾ ಸೆರೆಹಿಡಿಯುವ ಮೊದಲು ಮತ್ತು 2025 ರಲ್ಲಿ ಬಿಡುಗಡೆ ಮಾಡಿದ ನಂತರದ ಫೋಟೋಗಳು ವೈರಲ್‌ ಆಗುತ್ತಿದೆ. ಅಕ್ಕಪಕ್ಕದಲ್ಲಿ ಇರಿಸಲಾಗಿರುವ ಮೂರು ವರ್ಷಗಳ ಅಂತರದ ಈ ಫೋಟೋದಲ್ಲಿ ಒಲೆಕ್ಸಾಂಡರ್‌ನ ಸ್ಥಿತಿ ಎಷ್ಟೊಂದು ಮೂರು ವರ್ಷಗಳಲ್ಲಿ ಎಷ್ಟೊಂದು ಬದಲಾಗಿದೆ ಎಂಬುದು ಬಹಿರಂಗವಾಗಿದೆ.

ಮೊದಲ ಫೋಟೋದಲ್ಲಿ ಸಾಂಪ್ರದಾಯಿಕ ಉಕ್ರೇನಿಯನ್ ಉಡುಪಿನಲ್ಲಿರುವ, ಜೀವನ ಮತ್ತು ದೃಢಸಂಕಲ್ಪದಿಂದ ತುಂಬಿರುವ ಆರೋಗ್ಯವಂತ, ಉತ್ಸಾಹಭರಿತ ವ್ಯಕ್ತಿ ಈಗ ದಣಿದ, ಮಸುಕಾದ, ಬೂದು ಚರ್ಮ ಮತ್ತು ಬಿಳಿ ಕೂದಲಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಒಲೆಕ್ಸಾಂಡರ್‌ನ ಈ ಸ್ಥಿತಿ ಮನಕಲಕುವಂತಿದೆ. ಇದು ರಷ್ಯಾದ ಬಂಧನದಲ್ಲಿ ಉಕ್ರೇನಿಯನ್ ಕೈದಿಗಳು ಅನುಭವಿಸುವ ವಿನಾಶಕಾರಿ ವಾಸ್ತವವನ್ನು ಎತ್ತಿ ತೋರಿಸಿದೆ.

ಪವರ್ ಆಫ್ ಪೀಪಲ್ ಎಂಬ ಎನ್‌ಜಿಒದ ಸ್ವಯಂಸೇವಕಿ ಒಲೆನಾ ಜೊಲೊಟಾರಿಯೋವಾ ಅವರು ಈ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಬರೆದಿರುವ ಒಲೆನಾ, ತನ್ನ ಮನೆಯನ್ನು ರಕ್ಷಿಸಲು ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ಮೊದಲ ದಿನಗಳಲ್ಲಿ ಒಲೆಕ್ಸಾಂಡರ್ ಮರಿಯುಪೋಲ್‌ನ ಪ್ರಾದೇಶಿಕ ರಕ್ಷಣೆಗೆ ಸೇರಿದರು. ಅದಕ್ಕಾಗಿ ಅವರನ್ನು ರಷ್ಯಾ ಸೆರೆಹಿಡಿದು ಚಿತ್ರಹಿಂಸೆ ನೀಡಿತು, ಹಸಿವಿನಿಂದ ಸಾಯಿಸಿತು ಮತ್ತು ಅವರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿತು ಎಂದು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *