ಆಶಿಶ್ ವಿದ್ಯಾರ್ಥಿಗೆ 60ರ ವಸಂತ: ಕನ್ನಡದ ಜನಪ್ರಿಯ ವಿಲನ್ ಈಗ ಟ್ರೆಂಡಿಂಗ್ ಫುಡ್ ವ್ಲಾಗರ್!

ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ಬಗ್ಗೆ ಅನೇಕರಿಗೆ ತಿಳಿದಿದೆ. ಅವರಿಗೆ ಇಂದು (ಜೂನ್ 19) ಜನ್ಮದಿನ. ಅವರು 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆಶಿಶ್ ಅವರು ಕನ್ನಡದಲ್ಲೂ ನಟಿಸಿದ್ದಾರೆ. ಅವರು ಇತ್ತೀಚೆಗೆ ನಟನೆಯ ಜೊತೆಗೆ ಫುಡ್ವ್ಲಾಗ್ ಕೂಡ ಮಾಡುತ್ತಿದ್ದಾರೆ.
90ರ ದಶಕದಿಂದ ನಟನೆಯಲ್ಲಿ ಬ್ಯುಸಿ ಇರೋ ಅವರು ಕನ್ನಡದಲ್ಲೂ ಸಿನಿಮಾ ಮಾಡಿದ್ದಾರೆ. ಅವರು ಫುಡ್ ವ್ಲಾಗರ್ ಆಗಲು ಕಾರಣ ತಿಂಡಿ ಬಗ್ಗೆ ಅವರಿಗೆ ಇರೋ ಪ್ರೀತಿ.
1991ರಲ್ಲಿ ‘ಕಾಲ್ ಸಂಧ್ಯಾ’ ಹೆಸರಿನ ಹಿಂದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ಮೊದಲು ಕನ್ನಡಕ್ಕೆ ಕಾಲಿಟ್ಟಿದ್ದು 1999ರ ‘ಎಕೆ-47’ ಚಿತ್ರದ ಮೂಲಕ. ಆ ಬಳಿಕ ‘ವಂದೇ ಮಾತರಂ’, ‘ಕೋಟಿಗೊಬ್ಬ’, ‘ದುರ್ಗಿ’, ‘ಸುಂಟರಗಾಳಿ’ ರೀತಿಯ ಹಲವು ಸಿನಿಮಾಗಳನ್ನು ಮಾಡಿದರು. ಇತ್ತೀಚೆಗೆ ಅವರು ಸಿನಿಮಾ ಆಯ್ಕೆಯಲ್ಲ ಚ್ಯೂಸಿ ಆಗಿದ್ದಾರೆ. 2024ರಲ್ಲಿ ರಿಲೀಸ್ ಆದ ‘ಕಿಲ್’ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಈಗ ಅವರು ಫುಡ್ ವ್ಲಾಗಿಂಗ್ ಕೂಡ ಮಾಡುತ್ತಾರೆ.
‘ತಿಂಡಿಗಳನ್ನು ನಾನು ಯಾವಾಗಲೂ ಇಷ್ಪಡುತ್ತೇನೆ. ನನ್ನ ತಾಯಿ ವಿವಿಧ ಖಾದ್ಯಗಳನ್ನು ಮಾಡುತ್ತಿದ್ದರು. ನಾನು ಈಗ ಬೇರೆ ಬೇರೆ ಜಾಗಗಳಿಗೆ ಹೋಗಿ ಅಲ್ಲಿನ ತಿಂಡಿಗಳನ್ನು ಹುಡುಕುತ್ತಿದ್ದೇನೆ. ನಾನು ತಿಂಡಿಗಳನ್ನು ಹುಡುಕಿ, ಮೆಚ್ಚುಗೆ ಸೂಚಿಸುತ್ತೇನೆ. ನನಗೆ ಇದು ಇಷ್ಟ’ ಎಂದು ಹೇಳಿದ್ದಾರೆ.

ಆಶಿಶ್ ಅವರು ಕಾಮಿಡಿ ಶೋ, ಟಾಕ್ ಶೋಗಳನ್ನು ಮಾಡಿದ್ದಾರೆ. ಅವರು ಈಗ ವಿವಿಧ ನಗರಗಳಿಗೆ ತೆರಳಿ ಅಲ್ಲಿನ ವಿಶೇಷ ರೆಸ್ಟೋರೆಂಟ್, ರಸ್ತೆ ಬದಿಯ ಅಂಗಡಿಗಳಿಗೆ ಭೇಟಿ ನಿಡಿ ಅಲ್ಲಿನ ತಿಂಡಿಗಳನ್ನು ಮೆಚ್ಚಿ ಹೊಗಳುವ ಕೆಲಸ ಮಾಡುತ್ತಿದ್ದಾರೆ. ಅವರು ಫೇಮಸ್ ಆಗಿರುವುದರಿಂದ ಅವರ ಯೂಟ್ಯೂಬ್ಗೆ ಸಬ್ಸ್ಕ್ರೈಬ್ಗಳು ಕೂಡ ಸುಲಭವಾಗಿ ಸಿಗುತ್ತಿವೆ.
ಆಶಿಶ್ ಅವರು ವಿಲನ್ ಪಾತ್ರಗಳ ಮೂಲಕ ಫೇಮಸ್ ಆದವರು. ಅವರು ಪೊಲೀಸ್ ಪಾತ್ರ ಮಾಡಿದರೂ ಅಲ್ಲಿಯೂ ನೆಗೆಟಿವ್ ಶೇಡ್ ಇರುತ್ತಿತ್ತು. ಆ ರೀತಿಯಲ್ಲಿ ಆಶಿಶ್ ಅವರು ಪಾತ್ರಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಕನ್ನಡದಲ್ಲಿ ಅವರು ಸುದೀಪ್ ಜೊತೆ ‘ಬಚ್ಚನ್’ ಹೆಸರಿನ ಚಿತ್ರ ಮಾಡಿದ್ದರು. ಈ ಸಿನಿಮಾ ಗಮನ ಸೆಳೆದಿತ್ತು.