Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮದುವೆ ಆಮಿಷವೊಡ್ಡಿ ವಿಚ್ಛೇದಿತ ಮಹಿಳೆಗೆ ವಂಚನೆ: ಖಾಸಗಿ ವಿಡಿಯೋ ಬ್ಲ್ಯಾಕ್‌ಮೇಲ್ ಆರೋಪಿ ಬೆಂಗಳೂರಲ್ಲಿ ಬಂಧನ

Spread the love

The Dynamics of Arrest - greaterkashmir

ಬೆಂಗಳೂರು : ಬೆಂಗಳೂರಲ್ಲಿ ವಿವಾಹವಾಗುವುದಾಗಿ ವಿಚ್ಛೇದಿತ ಮಹಿಳೆಯನ್ನು ನಂಬಿಸಿ ಆಕೆಯೊಂದಿಗಿನ ಖಾಸಗಿ ವಿಡಿಯೋ ಸೆರೆಹಿಡಿದು ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಯುವಕನನ್ನು ಬೆಂಗಳೂರಿನ ಕಾಡುಗೋಡಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಯುವಕನನ್ನು ಕಾಡುಗೋಡಿಯ ಶ್ರೀನಿವಾಸ್‌ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಆಂಧ್ರಪ್ರದೇಶ ಮೂಲದ ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಶ್ರೀನಿವಾಸ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತೆಯು 2014ರಲ್ಲಿ ವಿವಾಹವಾಗಿದ್ದು, 2 ವರ್ಷ ಪತಿಯೊಂದಿಗೆ ಸಂಸಾರ ನಡೆಸಿದ್ದರು.ಕೌಟುಂಬಿಕ ಕಲಹದಿಂದ ದಂಪತಿ ನಡುವೆ ವೈಮನಸ್ಸು ಉಂಟಾಗಿತ್ತು. 2016ರಿಂದ ಪತಿಯಿಂದ ದೂರವಾಗಿದ್ದ ಸಂತ್ರಸ್ತೆ ವಿಚ್ಛೇದನ ಪಡೆದುಕೊಂಡಿದ್ದರು. ಇನ್ನು ಆರೋಪಿಯು ಕಾಡುಗೋಡಿಯಲ್ಲಿ ಡಿಜಿಟಲ್‌ ಸೇವಾ ಕೇಂದ್ರ ನಡೆಸುತ್ತಿದ್ದ.

ಪತಿಯಿಂದ ದೂರವಾದ ನಂತರ ಜೀವನ ನಿರ್ವಹಣೆಗಾಗಿ ಕೆಲಸ ಹುಡುಕುತ್ತಿದ್ದ ಸಂತ್ರಸ್ತೆಗೆ ಆರೋಪಿಯ ಕೇಂದ್ರದಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ದೊರೆತಿತ್ತು. ಇತ್ತ ಶ್ರೀನಿವಾಸ್‌ ಮಹಿಳೆಯನ್ನು ಪರಿಚಯಿಸಿಕೊಂಡು ಅವರ ಜೊತೆಗೆ ಸಲುಗೆ ಬೆಳೆಸಿ ವಿವಾಹವಾಗುವುದಾಗಿ ನಂಬಿಸಿದ್ದ. ಬಾಡಿಗೆ ಮನೆ ಮಾಡಿ ಆಕೆಯೊಂದಿಗೆ ವಾಸಿಸುತ್ತಿದ್ದ. ಈ ನಡುವೆ ಮಹಿಳೆಯ ಗಮನಕ್ಕೆ ಬಾರದಂತೆ ಖಾಸಗಿ ವಿಡಿಯೋವನ್ನು ಮೊಬೈಲ್‌ ನಲ್ಲಿ ಚಿತ್ರೀಕರಿಸಿಕೊಂಡಿದ್ದ. ಇದಾದ ಕೆಲವು ದಿನಗಳ ಬಳಿಕ ಖಾಸಗಿ ವಿಡಿಯೋವನ್ನು ಮಹಿಳೆಗೆ ತೋರಿಸಿ ಹಣ ಕೊಡುವಂತೆ ಪೀಡಿಸಲು ಆರಂಭಿಸಿದ್ದ.

ಆತಂಕಗೊಂಡ ಸಂತ್ರಸ್ತೆಯು 25 ಗ್ರಾಂ ಚಿನ್ನ ಹಾಗೂ 1 ಲಕ್ಷ ರೂ. ನೀಡಿದ್ದಳು. ಇಷ್ಟಕ್ಕೆ ಸುಮ್ಮನಾಗದ ಶ್ರೀನಿವಾಸ್‌ ತನ್ನ ವರಸೆ ಬದಲಿಸಿ ಮತ್ತೆ ಬ್ಲ್ಯಾಕ್‌ಮೇಲ್‌ ಗೆ ಇಳಿದಿದ್ದ. ಸಾಲದಕ್ಕೆ ಮಹಿಳೆಯ ಸಹೋದರನಿಗೂ ಕರೆ ಮಾಡಿ ಬೆದರಿಕೆ ಹಾಕಿದ್ದ. ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ, ಅದರಲ್ಲಿ ಖಾಸಗಿ ವಿಡಿಯೋಗಳನ್ನು ಅಪ್ಲೋಡ್‌ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ಮಹಿಳೆ ಕಾಡುಗೋಡಿ ಪೊಲೀಸ್ ಠಾಣೆಗೆ ಯುವಕನ ವಿರುದ್ಧ ದೂರು ನೀಡಿದ್ದಾಳೆ.


Spread the love
Share:

administrator

Leave a Reply

Your email address will not be published. Required fields are marked *