ಬೆಸ್ಕಾಂ ನ ನಿರ್ಲಕ್ಷ್ಯಕ್ಕೆ ಅರೆ ಬೆಂದು ಒದ್ದಾಡುತ್ತಿರುವ ಬಾಲಕ

ಬೆಂಗಳೂರು:ಮತ್ತೊಮ್ಮೆ ರಾಜಧಾನಿಯಲ್ಲಿ ಬೆಸ್ಕಾ ನಿರ್ಲಕ್ಷ ಆರೋಪ ಕೇಳಿ ಬಂದಿದ್ದು, ಕರೆಂಟ್ ಶಾಕ್ನಿಂದಾಗಿ 10 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಆರ್ ಪುರಂ 53ನೇ ವಾರ್ಡ್ನಲ್ಲಿ ನಡೆದಿದೆ.
ನಿರ್ಮಾಣ ಹಂತದ ಕಟ್ಟಡದ ಬಳಿ ವಿದ್ಯುತ್ ಪ್ರವಹಿಸಿದ್ದರಿಂದ ಬಾಲಕನ ದೇಹವು ಶೇ.80ರಷ್ಟು ಸುಟ್ಟಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿರ್ಮಾಣ ಹಂತದ ಕಟ್ಟಡದ ಬಳಿ ಆಟವಾಡುತ್ತಿದ್ದ ಬಾಲಕನು ಪೊರಕೆಯನ್ನು ಎಸೆದಾಗ ಈ ವೇಳೆ ಕರೆಂಟ್ ಶಾಕ್ ಹೊಡೆದು ಕುಸಿದುಬಿದ್ದಿದ್ದಾನೆ.
ಮನೆಯಲ್ಲಿದ್ದ ಪೊರಕೆ ಬಿಸಾಡಲು ಹೋಗಿದ್ದ ಬಾಲಕನಿಗೆ ಈ ವೇಳೆ ಮನೆ ಬಳಿ ಇದ್ದ ವಿದ್ಯುತ್ ಕಂಬದಿಂದ ವಿದ್ಯುತ್ ಶಾಕ್ ಅವಘಡ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಲೂ ಮನೆಯ ವೈಯರ್ಗೂ ಬೆಂಕಿ ತಗುಲಿದೆ. ಗಾಯಾಳು ಬಾಲಕನ ಕುಟುಂಬದವರು ಕಳೆದ ಎರಡು ವರ್ಷದಿಂದ ಇಲ್ಲೇ ನೆಲೆಸಿದ್ದು, ಅವರದ್ದು ನೇಪಾಳ ಮೂಲ ಎಂದು ತಿಳಿದುಬಂದೆ. ಸದ್ಯ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.