ಟ್ರಂಪ್ ನ T1 ಮೊಬೈಲ್ ಫೋನ್ ಬಿಡುಗಡೆ-ಏನಿದರ ವಿಶೇಷತೆ?

ವಾಷಿಂಗ್ಟನ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬ ಮೊಬೈಲ್ ಫೋನ್ ಉತ್ಪಾದನೆ ಮತ್ತು ಸೇವಾ ವಲಯಕ್ಕೆ ಪ್ರವೇಶಿಸಿದೆ.
ಅಮೆರಿಕದಲ್ಲಿ ಟ್ರಂಪ್ ಬ್ರಾಂಡ್ ಹೆಸರಿನಲ್ಲಿ ಮೊಬೈಲ್ ಫೋನ್ ಸೇವೆ ಪ್ರಾರಂಭಿಸಲು ಪರವಾನಗಿ ದೊರೆತಿದೆ. ಮೇಡ್ ಇನ್ ಅಮೆರಿಕ ಮೊಬೈಲ್ಗಳನ್ನು ಉತ್ಪಾದಿಸಲು ಟ್ರಂಪ್ ಮುಂದಾಗಿದ್ದಾರೆ.
ಈ ಯೋಜನೆಯ ಭಾಗವಾಗಿ, T1 ಎಂಬ ಹೆಸರಿನ ಮೊದಲ ಟ್ರಂಪ್ ಮೊಬೈಲ್ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಚಿನ್ನದ ಬಣ್ಣದ ಫೋನ್ ಹಲವು ವೈಶಿಷ್ಟ್ಯ ಹೊಂದಿದೆ. ಸಂಪೂರ್ಣವಾಗಿ ಅಮೆರಿಕದಲ್ಲಿ ತಯಾರಾಗಲಿರುವ ಈ ಫೋನ್ ಆಗಸ್ಟ್ 2025ರಿಂದ ಲಭ್ಯವಾಗುವ ಸಾಧ್ಯತೆಯಿದೆ.
ಟ್ರಂಪ್ ಬ್ರ್ಯಾಂಡ್ T1 ಮೊಬೈಲ್ ಫೋನ್ ಬೆಲೆ 499 ಅಮೆರಿಕನ್ ಡಾಲರ್‌ಗಳು. ಇದು ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 41,000 ರೂಪಾಯಿ ಆಗಲಿದೆ.
ಟ್ರಂಪ್ ಪಡೆದಿರುವ ಟ್ರೇಡ್ಮಾರ್ಕ್ ನೋಡಿದರೆ, ಮೊಬೈಲ್ ಫೋನ್‌ಗಳು, ಕೇಸ್‌ಗಳು, ಬ್ಯಾಟರಿ ಚಾರ್ಜರ್‌ಗಳು ಮತ್ತು ವೈರ್‌ಲೆಸ್ ಟೆಲಿಫೋನ್ ಸೇವೆಗಳನ್ನು ಒದಗಿಸಲು ಬಳಸಲಿದ್ದಾರೆ ಎನ್ನಲಾಗಿದೆ
ಟ್ರಂಪ್ ಮೊಬೈಲ್ ವಿಶೇಷ
ಟಿ1 ಮೊಬೈಲ್ 6.78 ಇಂಚಿನ ಅಮೋಲೆಡ್ ಸ್ಕ್ರೀನ್ ಹೊಂದಿದ್ದು, 120 ಹರ್ಟ್ಜ್ ರೀಫ್ರೆಶ್ ರೇಟ್ ಹೊಂದಿದೆ. 50 ಮೆಗಾಪಿಕ್ಸೆಲ್ನ ಪ್ರಮುಖ ಕ್ಯಾಮರಾ ಇದ್ದರೆ, 2 ಮೆಗಾಪಿಕ್ಸೆಲ್ನ ಡೆಫ್ತ್ ಸೆನ್ಸರ್, 2 ಮೆಗಾಪಿಕ್ಸೆಲ್ನ ಮ್ಯಾಕ್ರೋ ಕ್ಯಾಮರಾ ಇದೆ. 16 ಮೆಗಾಪಿಕ್ಸೆಲ್ನ ಸೆಲ್ಫೀ, 5000 mAhನ ಬ್ಯಾಟರಿ, 20 ವ್ಯಾಟ್ನ ಚಾರ್ಜರ್, ಹೆಡ್ಫೋನ್ ಜಾಕ್, ಫಿಂಗರ್ ಪ್ರಿಂಟ್ ಸೆನ್ಸಾರ್, 12 ಜಿಬಿ ಱಮ್, 256 ಜಿಬಿ ರೋಮ್, ಌಂಡ್ರಾಯ್ಡ್ 15ನ್ನು ಈ ಮೊಬೈಲ್ ಹೊಂದಿದೆ.