Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಡಿಕೆ ಬೆಲೆ ಸ್ಥಿರ, ಕಾಳುಮೆಣಸು ಕುಸಿತ: ರೈತರಲ್ಲಿ ನಿರಾಸೆ ಮುಂದುವರಿಕೆ

Spread the love

Good Quality Fresh Areca Nut, Yc manufacturer, 100kg at ₹ 398/kilogram in  Kadur

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆ ಏರಿಕೆ ನಿರೀಕ್ಷೆಯಲ್ಲಿರುವ ರೈತರಿಗೆ ನಿರಾಸೆಯಾಗಿದೆ. ಬೆಲೆ ಆರಕ್ಕೂ ಏರುತ್ತಿಲ್ಲ, ಮೂರಕ್ಕೂ ಇಳಿಯುತ್ತಿಲ್ಲ ಎಂಬ ಸ್ಥಿತಿಯಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಆರಂಭದಲ್ಲೇ ಅಡಿಕೆ ಬೆಲೆ ಇಳಿಕೆಯಾಗಿತ್ತು.

ಇದಾದ ಬಳಿಕ ಬೆಲೆ ಏರಿಕೆಯೂ ಆಗಿಲ್ಲ, ಇಳಿಕೆಯೂ ಆಗಿಲ್ಲ. ಅಡಿಕೆ ಬೆಲೆ ಯಥಾಸ್ಥಿತಿಯಲ್ಲೇ ಮುಂದುವರಿದಿದೆ. ಈ ವಾರದ ಆರಂಭದಿಂದಲೂ ಅದೇ ಪರಿಸ್ಥಿತಿಯಿದೆ. ಅಡಿಕೆ ಬೆಲೆಯಲ್ಲಿ ಇಂದೂ ಯಾವುದೇ ವ್ಯತ್ಯಾಸವಾಗಿಲ್ಲ. ಹೊಸ ಅಡಿಕೆ ಬೆಲೆ 475 ರೂ.ಗಳಷ್ಟೇ ಇದೆ. ಹಳೆ ಅಡಿಕೆ ಬೆಲೆಯೂ ಏರಿಕೆ-ಇಳಿಕೆಯಾಗದೇ ಗರಿಷ್ಠ 520 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 520 ರೂ.ಗಳಾಗಿವೆ.

ಹೊಸ ಪಟೋರ ಮತ್ತು ಹಳೆ ಪಟೋರ ದರದಲ್ಲಿ ಕೊಂಚ ಇಳಿಕೆಯಾಗಿದೆ. ನಿನ್ನೆ ಹೊಸ ಪಟೋರ ದರ ಮತ್ತು ಹಳೆ ಪಟೋರ ದರ ತಲಾ 360 ರೂ.ಗಳಷ್ಟಿದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 255 ರೂ.ಗಳಾಗಿವೆ. ಹೊಸ ಕೋಕ ಮತ್ತು ಹಳೆ ಕೋಕ ದರವೂ ವ್ಯತ್ಯಾಸವಾಗಿಲ್ಲ. ಇಂದೂ ತಲಾ 310 ರೂ.ಆಗಿದೆ.
ಕಾಳುಮೆಣಸು ದರ
ನಿನ್ನೆ ಕಾಳುಮೆಣಸು ದರದಲ್ಲಿಏರಿಕೆಯಾಗದೇ ಇದ್ದರೂ ಇಳಿಕೆಯಾಗಿಲ್ಲ ಎನ್ನುವುದೇ ಸಮಾಧಾನಕರ ವಿಚಾರವಾಗಿತ್ತು. ಆದರೆ ಇಂದು ಮತ್ತೆ 5 ರೂ. ಕುಸಿತವಾಗಿದೆ. ಇಂದು 645 ರೂ.ಗಳಷ್ಟಿವೆ. ಇನ್ನು ಒಣಕೊಬ್ಬರಿ ಬೆಲೆ ಕಳೆದ ವಾರ ಏರಿಕೆಯಾಗಿತ್ತು. ಆದರೆ ಈಗ ನಾಲ್ಕೈದು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಇಂದೂ 235 ರೂ. ಗಳಷ್ಟಿದೆ.


Spread the love
Share:

administrator

Leave a Reply

Your email address will not be published. Required fields are marked *