Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಲೆನಾಡಿನಲ್ಲಿ ಮತ್ತೆ ಮುಂದುವರಿದ ನಕ್ಸಲ್ ಭಯ

Spread the love

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರದಲ್ಲಿ ಮಾವೋವಾದ ಈಗ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಘಟಿತ ಪ್ರಯತ್ನಗಳಿಂದಾಗಿ, ಕಳೆದ ನಾಲ್ಕು ದಶಕಗಳಿಂದ ಮುಖ್ಯವಾಗಿ ಮಾವೋವಾದದಿಂದ ಪ್ರಭಾವಿತವಾಗಿರುವ ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಶೀಘ್ರ ಕಾರ್ಯಾಚರಣೆ ನಕ್ಸಲ್ ಸಂಘಟನೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದೆ.

ಆದರೂ ಮಾವೋವಾದಿಗಳು ಇನ್ನೂ ತಮ್ಮ ಚಟುವಟಿಕೆಗಳನ್ನು ನಿಲ್ಲಿಸುತ್ತಿಲ್ಲ.

ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಮುಂದುವರೆಯುತ್ತಲೇ ಇದೆ. ಈ ವರ್ಷ ಕೇಂದ್ರ ಭದ್ರತಾ ಪಡೆಗಳು ನಕ್ಸಲರನ್ನು ಸರಣಿ ರೂಪದಲ್ಲಿ ಬೇಟೆಯಾಡುತ್ತಿದ್ದಾರೆ. ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ನಡೆದ ಮಾವೋವಾದಿ ದಾಳಿಯಲ್ಲಿ 22 ಭದ್ರತಾ ಸಿಬ್ಬಂದಿ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡುಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ನಕ್ಸಲರು ಸೃಷ್ಟಿಸಿರುವ ಅಶಾಂತಿಯ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಕೇಂದ್ರ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಹಲವು ಮಂದಿ ನಕ್ಸಲರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಭೂಗತರಾಗಿದ್ದಾರೆ. ಹೀಗೆ ಭೂಗತರಾದ ನಕ್ಸಲ್ ಮುಖಂಡರು ರಾಜ್ಯದ ಮಲೆನಾಡಿನತ್ತ ಮುಖಮಾಡಿರಬಹುದು ಎಂಬ ಅನುಮಾನ ಎ.ಎನ್.ಎಪ್ ಗೆ ಇದೆ.

ಎ.ಎನ್.ಎಫ್ ಕಾರ್ಯ ಮುಂದುವರೆಯಲಿದೆ.
ರಾಜ್ಯದಲ್ಲಿ ಇತ್ತೀಚೆಗೆ ನಕ್ಸಲ್ ವಿಕ್ರಂ ಗೌಡ ಎನ್ಕೌಂಟರ್ ನಂತರ ಆರು ಮಂದಿ ನಕ್ಸಲರು ಶರಣಾಗಿದ್ದರು. ಈ ಬೆಳವಣಿಗೆ ನಂತರ ರಾಜ್ಯದಲ್ಲಿ ನಕ್ಸಲ್ ಸಂಘಟನೆ ಶೂನ್ಯಾವಸ್ಥೆಗೆ ತಲುಪಿದೆ ಎಂಬ ಲೆಕ್ಕಚಾರದಲ್ಲಿ ನಕ್ಸಲ್ ನಕ್ಸಲ್ ನಿಗ್ರಹ ಪಡೆಯನ್ನು ರದ್ದುಗೊಳಿಸುವ ಚಿಂತನೆ ರಾಜ್ಯ ಸರ್ಕಾರಕ್ಕಿತ್ತು. ಆದರೆ ಸದ್ಯಕ್ಕೆ ಎ.ಎನ್.ಎಫ್ ವಾಪಸ್ಸು ಕರೆಸಿಕೊಳ್ಳಲಾಗುತ್ತಿಲ್ಲ. ಶಂಕರನಾರಾಯಣ ಮತ್ತು ಮಾಸ್ತಿಕಟ್ಟೆಯಲ್ಲಿ ಮಾತ್ರ ಕ್ಯಾಂಪ್ ತೆಗೆಯಲಾಗಿದ್ದು, ಉಳಿದಂತೆ ಎಲ್ಲಾ ಕ್ಯಾಂಪ್ ಗಳಲ್ಲಿ ಕಾರ್ಯಚಟುವಟಿಕೆ ಸಕ್ರೀಯವಾಗಿದೆ.

ಮಲೆನಾಡಿನಲ್ಲಿ ಚುರುಕುಗೊಂಡ ಕೂಂಬಿಂಗ್ :
ಛತ್ತೀಸ್‌ಗಢದ ಬಿಜಾಪುರ ಭಾಗಗಳಲ್ಲಿ ಪೊಲೀಸ್ ಹಾಗು ನಕ್ಸಲರ ನಡುವೆ ಗುಂಡಿನ ಚಕಮಕಿಗಳು ನಡೆದ ಬೆನ್ನಲ್ಲೇ ಸಾಕಷ್ಟು ಮಂದಿ ಭೂಗತರಾಗಿದ್ದಾರೆ. ಅವರು ಕರ್ನಾಟಕ ರಾಜ್ಯದ ಮಲೆನಾಡು ಭಾಗಗಳಲ್ಲಿ ಶೆಲ್ಟರ್ ಪಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಎ,ಎನ್.ಎಪ್ ನ ಎಲ್ಲಾ ಕ್ಯಾಂಪ್ ಗಳಲ್ಲಿ ಸಿಬ್ಬಂದಿ ತಮ್ಮ ಪ್ರತಿದಿನದ ಕೂಂಬಿಂಗ್ ಮುಂದುವರೆಸಿದ್ದಾರೆ ಎನ್ನಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *