Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೇಗಿರಲಿದೆ ನವ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ ವೇ

Spread the love

ದೇಶದಲ್ಲಿ ಬಹುನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೆಲವು ಈಗಾಗಲೇ ಉದ್ಘಾಟನೆ ಹಂತದಲ್ಲಿದ್ದರೆ, ಇನ್ನೂ ಕೆಲವು ಇದೀಗ ಕಾಮಗಾರಿ ಆರಂಭದ ಹಂತದಲ್ಲಿವೆ. ಈ ಪೈಕಿ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ ವೇ ಕೂಡ ಒಂದಾಗಿದೆ.

ಇದರಿಂದ ಯಾರಿಗೆಲ್ಲಾ ಉಪಯೋಗ ಹಾಗೂ ಯಾವೆಲ್ಲಾ ಮಾರ್ಗಗಳಲ್ಲಿ ಹಾದುಹೋಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೆಂಗಳೂರು-ಮಂಗಳೂರು ಹೊಸ ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಎಕ್ಸ್‌ಪ್ರೆಸ್‌ ವೇ ಯೋಜನೆ ಘೋಷಿಸಿ ಹಲವು ವರ್ಷಗಳ ಬಳಿಕ ಡಿಪಿಆರ್ ಸಿದ್ಧಪಡಿಸಲು ಕೇಂದ್ರ ಸರ್ಕಾರವು ತಜ್ಞ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದೆ. ಕೇಂದ್ರ ರಸ್ತೆ ಮತ್ತು ಸಾರಿಗೆ ಇಲಾಖೆ ಸಂಸ್ಥೆಯೊಂದಕ್ಕೆ ಡಿಪಿಆರ್‌ ತಯಾರಿಸಲು ಗುತ್ತಿಗೆ ನೀಡಿದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟಾ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಸುಮಾರು 335 ಕಿಲೋ ಮೀಟರ್ ಉದ್ದದ ಹೆದ್ದಾರಿ ಇದಾಗಿದೆ. ಇದು ಪೂರ್ಣಗೊಂಡರೆ, ಬೆಂಗಳೂರು-ಮಂಗಳೂರು ಅಥವಾ ಮಂಗಳೂರು-ಬೆಂಗಳೂರು ತಲುಪಲು ಕೇವಲ 3-4 ಗಂಟೆ ಬೇಕಾಗುತ್ತದೆ ಅಷ್ಟೇ. ಈ ಹೆದ್ದಾರಿಯು ಬೆಂಗಳೂರು, ಕುಣಿಗಲ್‌, ಹಾಸನ, ಸಕಲೇಶಪುರ ಮತ್ತು ಬಂಟ್ವಾಳದ ಮೂಲಕ ಹಾದು ಮಂಗಳೂರನ್ನು ತಲುಪಲಿದೆ.

ಯಾವ್ಯಾವ ಮಾರ್ಗಗಳಲ್ಲಿ ಹಾದುಹೋಗಲಿದೆ?

  • ಬೆಂಗಳೂರು
  • ಕುಣಿಗಲ್‌
  • ಹಾಸನ
  • ಸಕಲೇಶಪುರ
  • ಬಂಟ್ವಾಳ
  • ಮಂಗಳೂರು

ಈ ಹಿಂದೆ ಡಿಪಿಆರ್‌ ತಯಾರಿಸಲು 9 ಸಂಸ್ಥೆಗಳು ಬಿಡ್‌ ಅನ್ನು ಸಲ್ಲಿಕೆ ಮಾಡಿದ್ದವು. ಆ ಪೈಕಿ ಒಂದು ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, 2026ರ ಅಂತ್ಯದ ವೇಳೆಗೆ ಡಿಪಿಆರ್‌ ಸಿದ್ಧ ಆಗಲಿದ್ದು, ಈ ವರ್ಷದ ಏಪ್ರಿಲ್‌ 30ರಿಂದಲೇ ಡಿಪಿಆರ್‌ ತಯಾರಿಕೆ ಪ್ರಕ್ರಿಯೆ ಶುರುವಾಗಿದೆ. ಡಿಪಿಆರ್ ವರದಿ ಸಿದ್ಧವಾಗಿ, ಸಲ್ಲಿಕೆಯಾಗಿ, ಅಂತಿಮಗೊಂಡ ನಂತರ ಭೂಸ್ವಾಧೀನ ಮತ್ತು ಪರಿಸರ ಅನುಮೋದನೆಗಳಂತಹ ಪ್ರಕ್ರಿಯೆಗಳು ಆರಂಭ ಆಗಲಿವೆ ಎನ್ನಲಾಗುತ್ತಿದೆ

ಸರಿಯಾದ ಸಮಯಕ್ಕೆ ಡಿಪಿಆರ್ ಪ್ರಕ್ರಿಯೆ ಪೂರ್ಣಗೊಂಡರೆ, ಹೆದ್ದಾರಿ ನಿರ್ಮಾಣ ಕಾಮಗಾರಿ 2028ರ ವೇಳೆಗೆ ಪ್ರಾರಂಭ ಆಗುವ ನಿರೀಕ್ಷೆ ಇದೆ ಎನ್ನಲಾಗುತ್ತದೆ. ಜೊತೆಗೆ ರೈಲ್ವೇ ಇಲಾಖೆ ಸಹ ಶಿರಾಡಿ ಘಾಟ್‌ನಲ್ಲಿ ರೈಲ್ವೇ ಮಾರ್ಗಕ್ಕೆ ಡಿಪಿಆರ್‌ ತಯಾರಿಸುತ್ತಿದೆ.

ಆದ್ದರಿಂದ ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಶಿರಾಡಿ ಘಾಟ್‌ನಲ್ಲಿ ರಸ್ತೆ ಮತ್ತು ರೈಲು ಮಾರ್ಗವನ್ನು ಸಮಾನಾಂತರವಾಗಿ ಅಭಿವೃದ್ಧಿಪಡಿಸಬೇಕಿರುವ ಅಗತ್ಯವಿದೆ. ಇದಕ್ಕಾಗಿ ರೈಲ್ವೇ ಮಂಡಳಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಂಟಿ ಸಮಿತಿಯನ್ನ ರಚಿಸುವಂತೆ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟಾ ಮನವಿ ಮಾಡಿದ್ದಾರೆ.

ಈ ಹೆದ್ದಾರಿ ಬೆಂಗಳೂರ-ಮೈಸೂರು ಎಕ್ಸ್‌ಪ್ರೆಸ್‌ವೇ ರೀತಿಯಲ್ಲೇ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಲಿದೆ. ಕೆಲವೆಡೆ ಎಂಟ್ರಿ, ಎಕ್ಸಿಟ್‌ ಪಾಯಿಂಟ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದು ಸಂಪೂರ್ಣ ಹೊಸದಾದ ಗ್ರೀನ್‌ಫೀಲ್ಡ್‌ ಹೆದ್ದಾರಿ ಯೋಜನೆ ಆಗಿದ್ದು, 4 ರಿಂದ 8 ಪಥದಲ್ಲಿ ನಿರ್ಮಾಣವಾಗಲಿದೆ. ಇದಕ್ಕೆ 20 ರಿಂದ 25,OOO ಕೋಟಿ ರೂಪಾಯಿ ವೆಚ್ಚ ತಗುಗಲಲಿದ ಎನ್ನಲಾಗುತ್ತಿದೆ. ಆದರೆ, ನಿಖರ ಯೋಜನಾ ಮೊತ್ತ ಎಷ್ಟು ಎಂಬುದು ಇನ್ನೂ ಅಂದಾಜಿಸಿಲ್ಲ.

ಈ ಹೆದ್ದಾರಿಯಿಂದ ಏನೆಲ್ಲಾ ಉಪಯೋಗಗಳಿವೆ?

  • ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣವಾದರೆ ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಕಡಿತವಾಗಲಿದೆ
  • ದಕ್ಷಿಣ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಸಹಕಾರಿ ಆಗಲಿದೆ
    ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇನಿಂದ ಬಂದರು ಸಂಪರ್ಕ ಹೆಚ್ಚಳ ಆಗಲಿದೆ
  • ಎಲ್ಲಾ ಹವಾಮಾನಕ್ಕೂ ಅನುಕೂಲ ಆಗಲಿದ್ದು, ಅಲ್ಲದೆ ವಾಹನ ದಟ್ಟಣೆ ಕಡಿಮೆ ಆಗಲಿದೆ
  • ಕೈಗಾರಿಕೆ, ಕೃಷಿ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅನುಕೂಲ ಆಗಲಿದೆ
  • ಹೆದ್ದಾರಿ ಅಕ್ಕಪಕ್ಕದ ಗ್ರಾಮಗಳು, ನಗರಗಳು ಅಭಿವೃದ್ಧಿಯತ್ತ ಸಾಗಲಿವೆ
  • ಭೂಮಿ ಬೆಲೆ ಗಗನಕ್ಕೇರಲಿದ್ದು, ಇದರಿಂದ ಭೂಮಾಲೀಕ ಕೋಟ್ಯಾಧಿಪತಿಗಳಾಗುವ ಅವಕಾಶ ಇರುತ್ತದೆ
  • ಐಟಿ-ಬಿಟಿ ಮತ್ತು ಕೈಗಾರಿಕಾ ಉತ್ಪನ್ನಗಳು ಸುಲಭವಾಗಿ ನವಮಂಗಳೂರು ಬಂದರಿಗೆ ತಲುಪಲು ಸಾಧ್ಯ ಆಗಲಿದೆ
  • ಮಲೆನಾಡು ಮತ್ತು ಕರಾವಳಿ ಪ್ರದೇಶದ ಕೃಷಿ ಉತ್ಪನ್ನಗಳಾದ ಕಾಫಿ, ಅಡಿಕೆ, ಗೇರುಬೀಜ ಮತ್ತು ಮೀನುಗಾರಿಕಾ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆ ದೊರೆಯಲಿದೆ
  • ಬೆಂಗಳೂರು-ಮಂಗಳೂರು ನಡುವೆ ಸುಗಮ ಸಂಪರ್ಕದ ಬೇಡಿಕೆ ತುಂಬಾ ದಶಕಗಳಿಂದ ಇತ್ತು. ಅದರಲ್ಲೂ ಮಳೆಗಾಲದಲ್ಲಿ ಪದೇ ಪದೇ ಭೂಕುಸಿತದಿಂದ ಹಾಳಾಗುತ್ತಿರಯವ ಶಿರಾಡಿ ಘಾಟ್ ರಸ್ತೆಗೆ ಶಾಶ್ವತ ಪರಿಹಾರ ಸಿಕ್ಕಾಂತಾಗಲಿದ್ದು, ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಿದಂತಾಗಲಿದೆ.
    ಯಾವೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ?: ಈ ಹೆದ್ದಾರಿಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರದ ಮೂಲಕ ಹಾದುಹೋಗಲಿದ್ದು, ಈ ಹಿನ್ನೆಲೆ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ವನ್ಯಜೀವಿಗಳ ಆವಾಸಸ್ಥಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅನುಮತಿ ಪಡೆಯುವುದೇ ದೊಡ್ಡ ಸವಾಲಾಗಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದುನೋಡಬೇಕಿದೆ.

Spread the love
Share:

administrator

Leave a Reply

Your email address will not be published. Required fields are marked *