Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಿರಾಡಿ ಘಾಟ್‌ನಲ್ಲಿ ಮಳೆ ಆರ್ಭಟ: ರಸ್ತೆ ಸುರಕ್ಷತೆ ಬಗ್ಗೆ ಆತಂಕ, ಸಂಚಾರಕ್ಕೆ ಅಡಚಣೆ

Spread the love

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ  ಆರ್ಭಟ ಜೋರಾಗಿದೆ. ಎರಡು ವಾರಗಳ ಬಿಡುವಿನ ಬಳಿಕ ಮತ್ತೆ ಶುರುವಾಗಿರುವ ಧಾರಾಕಾರ ಮಳೆ, ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್​ನ  ಸಕಲೇಶಪುರದಿಂದ ಮಾರನಹಳ್ಳಿವರೆಗೆ ಆತಂಕ ಹೆಚ್ಚಿದೆ. ಭಾರೀ ಗಾಳಿ, ಮಳೆಗೆ ಬೃಹದಾಕಾರದ ಮರಗಳು ರಸ್ತೆಗೆ ಉರುಳುತ್ತಿದ್ದು, ಕೊಂಚ ಎಡವಟ್ಟಾದರೂ ಪ್ರಾಣಕ್ಕೆ ಕುತ್ತು ಬರುವ ಭೀತಿ ಎದುರಾಗಿದೆ. ಸದ್ಯ ಒಂದು ಪಥದ ಸಂಚಾರ ಸ್ಥಗಿತಗೊಳಿಸಲಾಗಿದೆ.

ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು, ಶಿರಾಡಿ ಘಾಟ್​ನಲ್ಲಿ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಗಾಳಿ, ಮಳೆಯಿಂದಾಗಿ ನೂರಾರು ಮರಗಳು ರಸ್ತೆ ಮೇಲೆ ಕುಸಿಯುವ ಭೀತಿ ಶುರುವಾಗಿದೆ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಗುಡ ಕೊರೆದಿರುವ ಹಿನ್ನೆಲೆಯಲ್ಲಿ ಆತಂಕ ಶುರುವಾಗಿದ್ದು, ಕಾಫಿ ತೋಟದ ಮರಗಳು ರಸ್ತೆಗೆ ಉರುಳುತ್ತಿವೆ. ಭಾನುವಾರ ಕೂಡ ಶಿರಾಡಿ ಘಾಟ್​ನ ದೋಣಿಗಲ್ ಬಳಿ ಬೃಹತ್ ಮರವೊಂದು ಬಿದ್ದಿತ್ತು.

ಹಾಸನದಿಂದ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿವರೆಗೆ ಒಟ್ಟು 45 ಕಿ,ಮೀ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹಾಸನದಿಂದ ಸಕಲೇಶಪುರದವರೆಗಿನ ಕಾಮಗಾರಿ ಬಹುತೇಕ ಮುಗಿದಿದೆ. ಆದರೆ ಸಕಲೇಶಪುರದಿಂದ ಮಾರನಹಳ್ಳಿ ವರೆಗಿನ 12 ಕಿ.ಮೀ ರಸ್ತೆ ಕಾಮಗಾರಿ ಬರೋಬ್ಬರಿ 8 ವರ್ಷಗಳಿಂದ ನಡೆಯುತ್ತಲೇ ಇದೆ. ಇನ್ನೂ ಶೇಕಡ 40 ರಿಂದ 50 ರಷ್ಟು ಕೆಲಸ ಬಾಕಿ ಇದೆ.

ಈ ಮಾರ್ಗದ ಹಲವು ಕಡೆ ಭೂ ಕುಸಿತದ ಭೀತಿ ಇದೆ. ಅಧಿಕಾರಿಗಳು ಭೂ ಕುಸಿತದ ಸ್ಥಳವೆನ್ನುವ ಎಚ್ಚರಿಕೆ ಫಲಕ ಹಾಕಿದ್ದರೂ ಮಳೆಯಿಂದ ಯಾವಾಗ ಏನಾಗುತ್ತೋ ಎನ್ನೋ ಆತಂಕ ಎಲ್ಲರನ್ನು ಕಾಡುತ್ತಿದೆ. ಕಳೆದ ಮೇ ತಿಂಗಳು ಕೇವಲ ಒಂದೇ ಒಂದು ಮಳೆಗೆ ದೊಡ್ಡ ಅನಾಹುಗಳ ಸರಣಿಯೇ ಸೃಷ್ಟಿಯಾಗಿ ಸಂಸದರು, ಲೋಕೋಪಯೋಗಿ ಸಚಿವರು, ವಿಪಕ್ಷ ನಾಯಕರು ಬಂದು ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದರು. ಇದಾದ ಬಳಿಕ ಎರಡು ವಾರ ಮಳೆ ಬ್ರೇಕ್ ನೀಡಿತ್ತು. ಹಾಗಾಗಿ ಸಮಸ್ಯೆಯೂ ತಗ್ಗಿತ್ತು. ಆದರೆ ಇದೀಗ ಮತ್ತೆ ಮಳೆ ಆರಂಭವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *