Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಂಟ್ವಾಳದಲ್ಲಿ ತಲವಾರ್ ಬೀಸಿ ಜೀಪ್‌ಗೆ ಹಾನಿ: ಅಪರಿಚಿತರ ವಿರುದ್ಧ ದೂರು ದಾಖಲು

Spread the love

ಬಂಟ್ವಾಳ : ಜೀಪ್ ಚಾಲನೆ ಮಾಡುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಅಪರಿಚಿತರು ತಲವಾರ್ ಬೀಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೇರಾಜೆ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಜೀಪ ಮುನ್ನೂರು ಗ್ರಾಮದ ಉಮರ್ ಫಾರೂಕ್ (48) ಎಂಬವರು 11.06.2025 ರಂದು ಮುಂಜಾನೆ, ಮನೆಯಿಂದ ಜೀಪ್ ನಲ್ಲಿ ದೇರಳಕಟ್ಟೆ ಕಡೆಗೆ ತೆರಳುತ್ತಿರುವ ವೇಳೆ ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದ ವೇಳೆ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಇಬ್ಬರು ಅಪರಿಚಿತರು ಬೈಕ್ ನಲ್ಲಿ ಬಂದು, ಸದ್ರಿ ಬೈಕ್ ನಲ್ಲಿದ್ದ ಹಿಂಬದಿ ಸವಾರನಾಗಿ ಕುಳಿತಿದ್ದ ವ್ಯಕ್ತಿಯು ತಲವಾರು ಬೀಸಿರುತ್ತಾನೆ. ಈ ವೇಳೆ ತಲವಾರು ತಾಗಿ ಪಿರ್ಯಾದಿದಾರರ ವಾಹನದ ಸೈಡ್ ಮಿರರ್ ಗಾಜು ಒಡೆದಿರುತ್ತದೆ. ಘಟನೆಯ ಬಗ್ಗೆ ಪಿರ್ಯಾದಿರವರು ದಿನಾಂಕ; 13.06.2025 ರಂದು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ ಕ್ರ ನಂಬ್ರ : 68/2025 ಕಲಂ : 109, 324(4), ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.


Spread the love
Share:

administrator

Leave a Reply

Your email address will not be published. Required fields are marked *